ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ಗೆ ಕ್ಯಾಂಡಿಡೇಟ್ ಸ್ಥಾನ: ಇಯು ತರಾತುರಿ, ಪುಟಿನ್ ಕಣ್ಣುರಿ

|
Google Oneindia Kannada News

ಬ್ರುಸೆಲ್ಸ್, ಜೂನ್ 23: ಐರೋಪ್ಯ ದೇಶಗಳ ಒಕ್ಕೂಟಕ್ಕೆ ಸೇರ್ಪಡೆಯಾಗಲು ಉಕ್ರೇನ್ ದೇಶಕ್ಕೆ ಕ್ಯಾಂಡಿಡೇಟ್ ಸ್ಥಾನ ಸದ್ಯದಲ್ಲೇ ಸಿಗುವುದು ನಿಶ್ಚಿತವಾಗಿದೆ. ಉಕ್ರೇನ್‌ಗೆ ಕ್ಯಾಂಡಿಡೇಟ್ ಸ್ಥಾನಮಾನ ನೀಡಲು ಯೂರೋಪಿಯನ್ ಯೂನಿಯನ್‌ನ ಎಲ್ಲಾ ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.

ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ ದೇಶಕ್ಕೆ ಇದರಿಂದ ನೈತಿಕ ಬಲ ಮತ್ತು ಆತ್ಮಸ್ಥೈರ್ಯ ಸಿಕ್ಕಂತಾಗಿದೆ.

ರಷ್ಯಾ ಫೆಬ್ರವರಿ 24ರಂದು ಆಕ್ರಮಣ ಮಾಡಿತ್ತು. ಕೆಲ ದಿನಗಳ ಬಳಿಕ ಉಕ್ರೇನ್ ದೇಶ ಯೂರೋಪಿಯನ್ ಯೂನಿಯನ್‌ನ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಒಕ್ಕೂಟದಲ್ಲಿರುವ 27 ದೇಶಗಳ ಮಧ್ಯೆ ಆಗ ಒಮ್ಮತ ಇರಲಿಲ್ಲ. ನೆದರ್‌ಲೆಂಡ್ಸ್, ಸ್ವೀಡನ್, ಡೆನ್ಮಾರ್ಕ್ ಮೊದಲಾದ ದೇಶಗಳು ಉಕ್ರೇನ್‌ಗೆ ಸದಸ್ಯತ್ವ ನೀಡಲು ಹಿಂದೇಟು ಹಾಕಿದ್ದವು.

ಉಕ್ರೇನ್‌ ಮಕ್ಕಳಿಗಾಗಿ ನೋಬಲ್‌ ಪಾರಿತೋಷಕ ಮಾರಿದ ಪತ್ರಕರ್ತಉಕ್ರೇನ್‌ ಮಕ್ಕಳಿಗಾಗಿ ನೋಬಲ್‌ ಪಾರಿತೋಷಕ ಮಾರಿದ ಪತ್ರಕರ್ತ

ಉಕ್ರೇನ್ ಮನವಿ ಮಾಡಿಕೊಂಡ ನಾಲ್ಕು ತಿಂಗಳ ಬಳಿಕ ಇದೀಗ ಸಕಾರಾತ್ಮಕ ಬೆಳವಣಿಗೆಯಾಗಿದೆ. ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲಿ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಾಯಕರು ಇಂದು ಗುರುವಾರ ಸಭೆ ಸೇರುತ್ತಿದ್ದಾರೆ. ಉಕ್ರೇನ್ ದೇಶಕ್ಕೆ ಕ್ಯಾಂಡಿಡೇಟ್ ಸ್ಥಾನ ನೀಡುವ ಬಗ್ಗೆ ಇಂದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 ಕ್ಯಾಂಡಿಡೇಟ್ ಸ್ಥಾನದ ಮಹತ್ವವೇನು?

ಕ್ಯಾಂಡಿಡೇಟ್ ಸ್ಥಾನದ ಮಹತ್ವವೇನು?

ಯೂರೋಪ್‌ನಲ್ಲಿರುವ ದೇಶಗಳು ಸೇರಿ ಮಾಡಿಕೊಂಡಿರುವ ಒಕ್ಕೂಟವೇ ಯೂರೋಪಿಯನ್ ಯೂನಿಯನ್. ಒಟ್ಟು 27 ದೇಶಗಳು ಈ ಒಕ್ಕೂಟದಲ್ಲಿವೆ. ಇನ್ನೂ ಕೆಲ ದೇಶಗಳು ಒಕ್ಕೂಟಕ್ಕೆ ಸೇರಿಕೊಂಡಿಲ್ಲ. ಮತ್ತೆ ಕೆಲ ದೇಶಗಳು ಒಕ್ಕೂಟಕ್ಕೆ ಸೇರಲು ಅರ್ಜಿ ಸಲ್ಲಿಸಿ ಸದಸ್ಯತ್ವಕ್ಕಾಗಿ ಕಾಯುತ್ತಿವೆ. ಇಂಥ ದೇಶಗಳಿಗೆ ಆರಂಬಿಕ ಹಂತವಾಗಿ ಕ್ಯಾಂಡಿಡೇಟ್ ಸ್ಥಾನ ನೀಡಲಾಗುತ್ತದೆ.

ಕ್ಯಾಂಡಿಡೇಟ್ ಸ್ಥಾನ ಎಂದರೆ ನೀವು ಪರೀಕ್ಷೆ ಅರ್ಜಿ ಕೊಟ್ಟಿದ್ದು, ಆ ಅರ್ಜಿಗೆ ಮಾನ್ಯತೆ ಸಿಕ್ಕಿದೆ ಎಂದರ್ಥ. ಮುಂದಿನ ಹಂತವೆಲ್ಲಾ ನಿಮ್ಮ ಪರೀಕ್ಷೆಯೇ. ಪರೀಕ್ಷೆಯಲ್ಲಿ ನೀವು ಪಾಸ್ ಆಗಿದ್ದೀರೋ ಫೇಲ್ ಆಗಿದ್ದೀರೋ ಎಂದು ಒಕ್ಕೂಟ ಮೌಲ್ಯ ಮಾಪನ ಮಾಡಿ ಘೋಷಿಸುತ್ತದೆ. ಅಲ್ಲಿಗೆ ಒಂದು ದೇಶಕ್ಕೆ ಇಯು ಸದಸ್ಯತ್ವ ಸಿಗುತ್ತದೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ. ಇದಾಗಲು ಹಲವು ವರ್ಷಗಳೇ ಆಗಬಹುದು. ಅಥವಾ ಉಕ್ರೇನ್‌ನಲ್ಲಿ ತುರ್ತು ಸ್ಥಿತಿ ಇರುವುದರಿಂದ ಆ ದೇಶಕ್ಕೆ ಬೇಗ ಸದಸ್ಯತ್ವ ಸಿಕ್ಕರೂ ಸಿಗಬಹುದು.

ಉಕ್ರೇನ್ ದೇಶಕ್ಕೆ ಯುಇ ಸದಸ್ಯತ್ವ ಸಿಕ್ಕರೆ ಒಕ್ಕೂಟದ ಇತರ ದೇಶಗಳು ಸುಲಭವಾಗಿ ಉಕ್ರೇನ್ ನೆರವಿಗೆ ಧಾವಿಸಬಹುದು. ಉಕ್ರೇನ್ ಮೇಲಿನ ಯಾವುದೇ ಆಕ್ರಮಣವು ಯೂರೋಪಿಯನ್ ಯೂನಿಯನ್ ಮೇಲಿನ ಆಕ್ರಮಣವೆಂಬಂತೆ ಪರಿಗಣಿಸಲಾಗುತ್ತದೆ. ಎಲ್ಲಾ ದೇಶಗಳು ಸೇರಿ ಒಗ್ಗಟ್ಟಿನಿಂದ ಆಕ್ರಮಣವನ್ನು ಎದುರಿಸಲು ಸಾಧ್ಯವಿದೆ. ಉಕ್ರೇನ್ ಕೆಲ ತಿಂಗಳ ಹಿಂದೆ ಇಯು ಸದಸ್ಯತ್ವಕ್ಕೆ ಮನವಿ ಮಾಡಿದಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಕಣ್ಣುರಿ ಉಂಟಾಗಿತ್ತು.

 ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳು ಯಾವುವು?

ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳು ಯಾವುವು?

ಒಟ್ಟು 27 ದೇಶಗಳು ಯೂರೋಪಿಯನ್ ಯೂನಿಯನ್‌ನಲ್ಲಿ ಇವೆ. ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ರೊವೇಷಿಯಾ, ಸೈಪ್ರಸ್, ಚೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್‌ಲೆಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೆರಿ, ಐರ್‌ಲೆಂಡ್, ಇಟಲಿ, ಲಾಟ್ವಿಯಾ, ಲಿತುವೇನಿಯಾ, ಲುಕ್ಸೆಂಬರ್ಗ್, ಮಾಲ್ಟಾ, ನೆದರ್‌ಲೆಂಡ್ಸ್, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಲೊವಾಕಿಯಾ, ಸ್ಲೊವೇನಿಯಾ, ಸ್ಪೇನ್ ಮತ್ತು ಸ್ವೀಡನ್ ದೇಶಗಳು ಯೂರೋಪ್ ಒಕ್ಕೂಟದ ಸದಸ್ಯತ್ವ ಹೊಂದಿವೆ.

ಯುರೋಪಿಯನ್‌ ಯುನಿಯನ್‌ಗೆ ಸೇರ್ಪಡೆಗೊಳ್ಳುವತ್ತ ಉಕ್ರೇನ್‌! ಹಾಗಾದರೆ ಮುಂದೇನು?ಯುರೋಪಿಯನ್‌ ಯುನಿಯನ್‌ಗೆ ಸೇರ್ಪಡೆಗೊಳ್ಳುವತ್ತ ಉಕ್ರೇನ್‌! ಹಾಗಾದರೆ ಮುಂದೇನು?

 ಕ್ಯಾಂಡಿಡೇಟ್ ದೇಶಗಳು?

ಕ್ಯಾಂಡಿಡೇಟ್ ದೇಶಗಳು?

ಯೂರೋಪಿಯನ್ ಯೂನಿಯನ್ ಸದಸ್ಯತ್ವಕ್ಕೆ ಕೆಲ ದೇಶಗಳು ಅರ್ಜಿ ಸಲ್ಲಿಸಿವೆ. ಅದರಲ್ಲಿ ಐದು ದೇಶಗಳ ಮನವಿಗೆ ಮಾನ್ಯತೆ ಕೊಟ್ಟು ಕ್ಯಾಂಡಿಡೇಟ್ ಸ್ಥಾನ ಕೊಡಲಾಗಿದೆ.

ಟರ್ಕಿ, ನಾರ್ತ್ ಮೆಸಿಡೋನಿಯಾ, ಮಾಂಟೆನೆಗ್ರೊ, ಆಲ್ಬೇನಿಯಾ ಮತ್ತು ಸರ್ಬಿಯಾ ಈ ಐದು ದೇಶಗಳಾಗಿವೆ. ಈಗ ಉಕ್ರೇನ್ ಆರನೇ ದೇಶವಾಗಲಿದೆ.

ಟರ್ಕಿ ದೇಶವಂತೂ 1987ರಲ್ಲೇ ಕ್ಯಾಂಡಿಡೇಟ್ ಸ್ಥಾನ ಪಡೆದರೂ ಈಗಲೂ ಯೂರೋಪಿಯನ್ ಯೂನಿಯನ್ ಸದಸ್ಯತ್ವ ಪಡೆಯಲಾಗಿಲ್ಲ.

ಕ್ಯಾಂಡಿಡೇಟ್ ದೇಶದಲ್ಲಿ ಪ್ರಜಾತಂತ್ರ, ಪ್ರಗತಿಪರತೆ, ಮಾನವಹಕ್ಕುಗಳಿಗೆ ಬೆಲೆ, ಮೂಲಭೂತ ಸ್ವಾತಂತ್ರ್ಯ, ಕಾನೂನು ಸುವ್ಯವಸ್ಥೆ ಇತ್ಯಾದಿ ಅಂಶಗಳು ಹೇಗಿವೆ ಎಂಬುದನ್ನು ಪರಿಶೀಲಿಸಿ ಆ ಬಳಿಕ ಸದಸ್ಯತ್ವ ನೀಡಲಾಗುತ್ತದೆ.

 ಒಕ್ಕೂಟದಲ್ಲಿ ಇಲ್ಲದಿರುವ ಯೂರೋಪಿಯನ್ ದೇಶಗಳು

ಒಕ್ಕೂಟದಲ್ಲಿ ಇಲ್ಲದಿರುವ ಯೂರೋಪಿಯನ್ ದೇಶಗಳು

ವಿಶ್ವಸಂಸ್ಥೆಯಿಂದ ಗುರುತಿಸಲಾದ 44 ದೇಶಗಳು ಯೂರೋಪ್‌ನಲ್ಲಿ ಇವೆ. ಇದರಲ್ಲಿ 27 ದೇಶಗಳು ಯೂರೋಪಿಯನ್ ಯೂನಿಯನ್‌ನಲ್ಲಿ ಇವೆ. ಉಕ್ರೇನ್ ಸೇರಿ 6 ದೇಶಗಳು ಕ್ಯಾಂಡಿಡೇಟ್ ಸ್ಥಾನ ಹೊಂದಿವೆ. ಇನ್ನುಳಿದ 11 ದೇಶಗಳು ಇಯುಗೆ ಸೇರಿಕೊಂಡಿಲ್ಲ.

ಹಿಂದೆ ಐರೋಪ್ಯ ಒಕ್ಕೂಟದ ಭಾಗವಾಗಿದ್ದ ಇಂಗ್ಲೆಂಡ್ ದೇಶ ಇತ್ತೀಚೆಗಷ್ಟೇ ಸದಸ್ಯತ್ವದಿಂದ ಹೊರಬಂದಿತ್ತು. ರಷ್ಯಾ, ಐಸ್‌ಲೆಂಡ್, ಆಲ್ಜೀರಿಯಾ, ಮೊರಾಕೊ, ಟುನಿಷಿಯಾ, ಬೋಸ್ನಿಯಾ, ಕೊಸೊವೋ, ಆಂಡೊರಾ, ಸ್ಯಾನ್ ಮರಿನೋ, ಲೇಷ್‌ಟೆನ್‌ಸ್ಟೇನ್, ನಾರ್ವೆ, ಸ್ವಿಟ್ಜರ್‌ಲೆಂಡ್ ದೇಶಗಳು ಯೂರೋಪಿಯನ್ ಯೂನಿಯನ್‌ನಲ್ಲಿ ಇಲ್ಲ.

(ಒನ್ಇಂಡಿಯಾ ಸುದ್ದಿ)

English summary
Leaders of European Union member counries are meeting at Belgium capital city Brussels on June 23rd. Ukraine may be rewarded with candidate status to join European Union.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X