ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪ್ : ಕೊವಿಡ್ 19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಷೇಧ!

|
Google Oneindia Kannada News

ರೋಮ್, ಮೇ 28: ''ಕೊವಿಡ್-19 ವಿರುದ್ಧ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಯಾವುದೇ ಕೆಲಸ ಮಾಡುವುದಿಲ್ಲ, ಎಚ್ ಸಿಕ್ಯೂ ಬಳಕೆಯಿಂದ ಸೈಡ್ ಎಫೆಕ್ಟ್ ಬಹಳ'' ಎಂದು ಅಮೆರಿಕ ಸರ್ಕಾರದ ಸಂಶೋಧಕರು ಹೇಳಿದ್ದನ್ನು ಯುರೋಪಿಯನ್ ಸರ್ಕಾರಗಳು ಕೂಡಾ ಅನುಮೋದಿಸಿವೆ. ಭಾರತದಿಂದ ಆಮದಾಗಿರುವ ಹೈಡ್ರಾಕ್ಸಿಕ್ಲೋರೊಕ್ವಿನ್(HCQ) ಮಾತ್ರೆಗಳನ್ನು ಕೊವಿಡ್ 19 ರೋಗಿಗಳ ಚಿಕಿತ್ಸೆಗೆ ಬಳಸದಂತೆ ಯುರೋಪಿಯನ್ ಸರ್ಕಾರಗಳು ನಿರ್ಬಂಧ ಹೇರಿವೆ.

ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ವಿಶ್ವದ 70ಕ್ಕೂ ಅಧಿಕ ದೇಶಗಳಿಗೆ ಭಾರತದಿಂದಲೇ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತಾಗುತ್ತಿದೆ. ಎರಡನೇ ವಿಶ್ವಯುದ್ಧದ ಕಾಲದಲ್ಲಿ ಮಲೇರಿಯಾ ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದ ಈ ಮಾತ್ರೆಗಳಿಗೆ ಈಗ ಎಲ್ಲಿಲ್ಲಿದ ಬೇಡಿಕೆ ಉಂಟಾಗಿದೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ಕಾರಣ ಎಂದರೆ ತಪ್ಪಾಗಲಾರದು. ಕಳೆದ ವಾರದ ತನಕ ವೈದ್ಯರ ಸಲಹೆ ಮೀರಿ ಎಚ್ ಸಿಕ್ಯೂ ಮಾತ್ರೆ ಸೇವಿಸುತ್ತಿದ್ದ ಟ್ರಂಪ್ ಅವರು ಮಾರ್ಚ್ ತಿಂಗಳಿನಲ್ಲೇ ಎಚ್ ಸಿಕ್ಯೂ ಅತ್ಯಂತ ಉಪಯುಕ್ತ ಮಾತ್ರೆ ಎಂದು ಪ್ರಚಾರ ನೀಡಿದ್ದರಿಂದ ಅಮೆರಿಕ, ಯುರೋಪ್ ರಾಷ್ಟ್ರಗಳಲ್ಲಿ ಬೇಡಿಕೆ ಕುದುರಿತ್ತು.

HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!

ಆದರೆ, ಕೋವಿಡ್-19 ಚಿಕಿತ್ಸೆಗಾಗಿ ಪ್ರಸ್ತಾಪಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ಕಾಂಬಿನೇಷನ್ ಮನುಷ್ಯನ ದೇಹಕ್ಕೆ ಮಾರಕವಾಗಿದ್ದು, ಇವುಗಳಿಂದ ಕಾರ್ಡಿಯೋ ವ್ಯಾಸ್ಕ್ಯುಲಾರ್ ಸಿಸ್ಟಮ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂಬ ಅಂಶ ಅಧ್ಯಯನದ ಮೂಲಕ ತಿಳಿದುಬಂದಿದೆ ಎಂದು ಅಮೆರಿಕದ ಸಂಸ್ಥೆ ಇತ್ತೀಚೆಗೆ ಹೇಳಿದ್ದನ್ನು ಸ್ಮರಿಸಬಹುದು. ಯುರೋಪಿನಲ್ಲಿ ಎಚ್ ಸಿಕ್ಯೂ ಬಳಕೆ ನಿರ್ಬಂಧ ಏಕೆ? ಮುಂದೆ ಓದಿ...

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯಂತೆ ಕೊವಿಡ್ 19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಸದಿರಲು ನಿರ್ಧರಿಸಲಾಗಿದೆ ಎಂದು ಫ್ರಾನ್ಸ್, ಇಟಲಿ, ಬೆಲ್ಜಿಯಂ ಸೇರಿದಂತೆ ಯುರೋಪಿಯನ್ ಸರ್ಕಾರಗಳು ಘೋಷಿಸಿವೆ. ಎಚ್ ಸಿಕ್ಯೂ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದಿದೆ ಎಂದು ಯುರೋಪಿನ ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ, ಯುರೋಪಿನಲ್ಲಿ ಕೊವಿಡ್ 19 ರೋಗಿಗಳಿಗೆ ಈ ಮಾತ್ರೆಗಳನ್ನು ನೀಡುವಂತಿಲ್ಲ.

ಬಹುದೊಡ್ಡ ಕಾರ್ಯಾಚರಣೆ ಸ್ಥಗಿತ

ಬಹುದೊಡ್ಡ ಕಾರ್ಯಾಚರಣೆ ಸ್ಥಗಿತ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ 40, 000ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿ ಕೊವಿಡ್ 19ಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ಸಾಧ್ಯಾಸಾಧ್ಯತೆ, ದುಷ್ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿತ್ತು. ಇದಕ್ಕೆ ಬಿಲ್ ಗೇಟ್ಸ್ ಹಾಗೂ ಮಿಲಿಂಡಾ ಗೇಟ್ಸ್ ಫೌಂಡೇಶನ್ ವತಿಯಿಂದ ಕೂಡಾ ದೇಣಿಗೆ ಸಿಕ್ಕಿತ್ತು. ಈಗ ಯುರೋಪಿಯನ್ ಸರ್ಕಾರಗಳ ನಿಷೇಧದಿಂದ ಈ ಸಂಶೋಧನೆಯೂ ಸ್ಥಗಿತಗೊಂಡಿದೆ.

ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ, ICMRನಿಂದ ಮಹತ್ವದ ಸ್ಪಷ್ಟನೆಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ, ICMRನಿಂದ ಮಹತ್ವದ ಸ್ಪಷ್ಟನೆ

ಯುರೋಪಿಯನ್ ಮೆಡಿಸನ್ ಏಜೆನ್ಸಿ ವಿರೋಧ

ಯುರೋಪಿಯನ್ ಮೆಡಿಸನ್ ಏಜೆನ್ಸಿ ವಿರೋಧ

ಯುರೋಪಿಯನ್ ಮೆಡಿಸನ್ ಏಜೆನ್ಸಿ, ಕೊರೊನಾರೋಗಿಗಳಿಗೆ ಎಚ್ ಸಿಕ್ಯೂ ನೀಡುವುದನ್ನು ಆರಂಭದಿಂದಲೂ ವಿರೋಧಿಸಿದೆ. ಕ್ಲಿನಿಕಲ್ ಟ್ರಯಲ್ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಸೂಚಿಸಿದೆ. ಇದರ ಸೈಡ್ ಎಫೆಕ್ಟ್ ಗಳಲ್ಲಿ ಹೃದಯಕ್ಕೆ ಹಾನಿ, ಹೃದಯ ಬಡಿತದಲ್ಲಿ ಏರುಪೇರು, ವಾಂತಿ, ಭೇದಿ, ತಲೆ ಸುತ್ತುವಿಕೆ ಮುಂತಾದ ಪರಿಣಾಮಗಳಿವೆ. ಕೋವಿಡ್ -19 ಅನ್ನು ವಿವಿಧ ದೇಶಗಳಲ್ಲಿ ನಡೆಸಲಾಗುತ್ತಿರುವ ಸಂಶೋಧನಾ ಚಿಕಿತ್ಸೆ, ಕ್ಲಿನಿಕಲ್ ಟ್ರಯಲ್ ಗಾಗಿ ಎಚ್ ಸಿಕ್ಯೂ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಬೆನ್ನಲ್ಲೇ ಭಾರತದ ಐಸಿಎಂಆರ್ ಸ್ಪಷ್ಟನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ನಾಯು ಸೆಳೆತ, ಆರ್ಥ್ರೈಟೀಸ್ ಗೆ ಬಳಸಬಹುದು

ಸ್ನಾಯು ಸೆಳೆತ, ಆರ್ಥ್ರೈಟೀಸ್ ಗೆ ಬಳಸಬಹುದು

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ. ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನ ಮಾತ್ರೆ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನ ಮಾತ್ರೆ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ. ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು ಎಂಬುದು ಈಗ ಬಹುಚರ್ಚಿತ ವಿಷಯ.

English summary
European governments moved to halt the use of anti-malaria drug hydroxychloroquine to treat COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X