ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ಬರೆದ ರಿಚರ್ಡ್ ಬ್ರ್ಯಾನ್ಸನ್

|
Google Oneindia Kannada News

ಖ್ಯಾತ ಬಿಲಿಯೊನೇರ್ ಉದ್ಯಮಿ ರಿಚರ್ಡ್ ಬ್ರ್ಯಾನ್ಸನ್ ಅವರು ಬಾಹ್ಯಾಕಾಶ ಪ್ರವಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತಮ್ಮ ವರ್ಜಿನ್ ಗ್ಯಾಲೆಕ್ಟಿಕ್ ಬಾಹ್ಯಾಕಾಶ ಪ್ರವಾಸ ಕಂಪನಿ ಮೂಲಕ ಬಾಹ್ಯಾಕಾಶ ಪ್ರವಾಸವನ್ನು ಮಾಡಿದ್ದಾರೆ.

ನ್ಯೂ ಮೆಕ್ಸಿಕೋದ ಮರುಭೂಮಿಯಿಂದ ನಭಕ್ಕೆ ನೆಗೆದ ಬಾಹಾಕ್ಯಾಶ ನೌಕೆಯು ರಿಚರ್ಡ್ ಬ್ರ್ಯಾನ್ಸನ್ ಹಗೂ ಇತರೆ ಐವರನ್ನು ಕರೆದುಕೊಂಡು 88 ಕಿ.ಮೀ ಎತ್ತರಕ್ಕೆ ಹಾರಿ ವಾಪಸ್ ಬಂದಿದೆ.

ಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆ

ಅಮೆರಿಕದಲ್ಲಿ ಬಾಹ್ಯಾಕಾಶ ಪ್ರವಾಸವು ಹೊಸ ಕುತೂಹಲವನ್ನು ಸೃಷ್ಟಿಸಿದೆ. ಅಮೆಜಾನ್ ಅಧ್ಯಕ್ಷ ಜೆಕ್ ಡಿಜೋಸ್ ಕೂಡ ಇನ್ನು ಕೆಲವೇ ದಿನಗಳಲ್ಲಿ ಬಾಹ್ಯಾಕಾಶ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ 71 ವರ್ಷದ ಬ್ರ್ಯಾನ್ಸನ್ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಉದ್ಯಮಿಯಾಗಿದ್ದಾರೆ.

Entrepreneur Richard Branson Takes Off First In Space Tourism Race

ಭಾರತೀಯರು ಭಾಗಿ: ಈ ಬಾಹ್ಯಾಕಾಶ ಯಾನದಲ್ಲಿ ಮೂರನೇ ಭಾರತೀಯ ಮೂಲದ ಮಹಿಳೆ ಭಾಗವಾಗಿದ್ದು ವಿಶೇಷ, ಈ ಹಿಂದೆ ಕಲ್ಪನಾ ಚಾವ್ಲಾಹಾಗೂ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಯಾನ ಮಾಡಿದ್ದರು. ಸಿರಿಶಾ ಬಾಂದ್ಲಾ ಬ್ರ್ಯಾನ್ಸನ್ ಜತೆಗೆ ಬಾಹ್ಯಾಕಾಶ ಯಾನ ಮಾಡಿದ್ದಾರೆ.

ವರ್ಜಿನ್ ಬಾಹ್ಯಾಕಾಶ ಮೂಲಕ ಅನುಭವ ಯಶಸ್ವಿಯಾಗಿ ಯಾನ ಪೂರೈಸಿದ ರಿಚರ್ಡ್ ಜೀವಮಾನದ ಅನುಭವ ಬಣ್ಣಿಸಿದ್ದಾರೆ. ವರ್ಜಿನ್ ಗ್ಯಾಲೆಕ್ಟಿಕ್‌ನ ವಿಎಸ್‌ಎಸ್‌ ಯೂನಿಟಿ ಗಗನ ನೌಕೆಯಲ್ಲಿ ಇಬ್ಬರು ಮಜಿಳೆಯರನ್ನು ಒಳಗೊಂಡ ಆರು ಗಗನಯಾತ್ರಿಗಳುದ್ದರು. ನ್ಯೂ ಮೆಕ್ಸಿಕೋದಿಂದ ಈ ಗಗನನೌಕೆ ಬಾಹ್ಯಾಕಾಶದಲ್ಲಿ ಪ್ರಯಾಣ ಬೆಳೆಸಿತ್ತು.

"ವರ್ಜಿನ್ ಗ್ಯಾಲೆಕ್ಟಿನ್‌ನ ನಮ್ಮ ತಂಡಕ್ಕೆ ಅಭಿನಂದನೆಗಳು, 17 ವರ್ಷಗಳ ಕಠಿಣ ಪರಿಶ್ರಮದಿಂದ ನಾವು ಈವರೆಗೆ ತಲುಪಿದ್ದೇವೆ'' ಎಂದು ರಿಚರ್ಡ್ ಹೇಳಿದ್ದಾರೆ. ಈ ಹಿಂದೆ ಹಲವು ಮಂದಿ ರಷ್ಯಾದ ರಾಕೆಟ್ ಮೂಲಕ ಬಾಹ್ಯಾಕಾಶ ಪ್ರವಾಸಿಗರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದವರೆಗೂ ಗಗನಯಾತ್ರೆ ನಡೆಸಿದ್ದಾರೆ.

English summary
Swashbuckling entrepreneur Richard Branson hurtled into space aboard his own winged rocket ship on Sunday in his boldest adventure yet, beating out fellow billionaire Jeff Bezos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X