ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಲಾಕ್‌ಡೌನ್‌ನಿಂದಾಗಿ ಭೂಮಿಯ ಕಂಪನದ ಪ್ರಮಾಣ ಇಳಿಕೆ

|
Google Oneindia Kannada News

ಲಂಡನ್, ಜುಲೈ 24: ಕೊವಿಡ್ ಲಾಕ್‌ಡೌನ್‌ನಿಂದಾಗಿ ಜನತೆ ಕಿರಿಕಿರಿ ಅನುಭವಿಸಿದರೂ ಕೂಡ ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮವನ್ನೇ ಬೀರಿದೆ.

ಶಬ್ದಮಾಲಿನ್ಯ, ವಾಯುಮಾಲಿನ್ಯ ಕೂಡ ಕಡಿಮೆಯಾಗಿದೆ. ಇತ್ತೀಚಿನ ವರದಿಯ ಪ್ರಕಾರ ಸೈಸ್ಮಿಕ್ ನಾಯ್ಸ್ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಅಲಸ್ಕಾ ಭೂಕಂಪನದಿಂದ ಎದುರಾದ ಸುನಾಮಿಯ ಭೀತಿಅಲಸ್ಕಾ ಭೂಕಂಪನದಿಂದ ಎದುರಾದ ಸುನಾಮಿಯ ಭೀತಿ

ರಾಯಲ್ ಅಬ್ಸರ್ವೇಟರಿ ಆಫ್ ಬೆಲ್ಜಿಯಮ್ ಹಾಗೂ ಇತರ 5 ಸಂಸ್ಥೆಗಳು ಜೊತೆಗೂಡಿ ನಡೆಸಿರುವ ಈ ಸಂಶೋಧನೆಯ ವರದಿ ಜರ್ನಲ್ ಸೈನ್ಸ್ ನಲ್ಲಿ ಪ್ರಕಟಗೊಂಡಿದೆ.

Entire Earth Vibrating Less Due to Covid-19 Lockdowns

117 ರಾಷ್ಟ್ರಗಳಲ್ಲಿ ನದೆದಿರುವ ಸಂಶೋಧನೆಯ ಪ್ರಕಾರ ಪ್ರಪಂಚದಾದ್ಯಂತ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಸೈಸ್ಮಿಕ್ ನಾಯ್ಸ್ ಕಡಿಮೆಯಾಗಿದೆ.

ಸೈಸ್ಮೋ ಮೀಟರ್ ಗಳ ಸಹಾಯದಿಂದ ಭೂಮಿಯ ಒಳಗಡೆಯ ಕಂಪನಗಳಿಂದ ಉಂಟಾಗುವ ಸೈಸ್ಮಿಕ್ ನಾಯ್ಸ್ ನ್ನು ಮಾಪನ ಮಾಡಲಾಗಿದೆ. ಭೂಕಂಪನ, ಜ್ವಾಲಾಮುಖಿ, ಬಾಂಬ್ ಗಳಷ್ಟೇ ಅಲ್ಲದೇ ಸಾರಿಗೆ ಹಾಗೂ ಕೈಗಾರಿಕೆಗಳಂತಹ ಮಾನವ ಚಟುವಟಿಕೆಗಳಿಂದಲೂ ಸೈಸ್ಮಿಕ್ ನಾಯ್ಸ್ ಉಂಟಾಗುತ್ತದೆ.

ಈಗ ಸೈಸ್ಮಿಕ್ ನಾಯ್ಸ್ ಕಡಿಮೆಯಾಗಿರುವುದಕ್ಕೆ ಕೊವಿಡ್-19 ರಿಂದ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಲಾಕ್ ಡೌನ್ ಹಾಗೂ ತತ್ಪರಿಣಾಮವಾಗಿ ಕೈಗಾರಿಕೆ, ಸಾರಿಗೆ ಸೇರಿದಂತೆ ಅನೇಕ ಮಾನವ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಕಾರಣ ಎನ್ನಲಾಗುತ್ತಿದೆ.

English summary
In a study conducted in 117 countries, researchers have found that the world is experiencing the most dramatic reduction in the seismic noise (the hum of vibrations in the planet's crust) in recorded history due to global Covid-19 lockdowns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X