ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ವೇಳೆಗೆ ಪ್ರತಿ ದೇಶ 40% ಜನಸಂಖ್ಯೆಗೆ ಲಸಿಕೆ ಗುರಿ ತಲುಪಬೇಕು; ಐಎಂಎಫ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಕೊರೊನಾ ಲಸಿಕೆ ವಿತರಣೆ ಸಂಬಂಧ ಸಂಘಟಿತ ಕ್ರಮ ಹಾಗೂ ಹೆಚ್ಚಿನ ಹೊಣೆಗಾರಿಕೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮುಖ್ಯ ಅರ್ಥಶಾಸ್ತ್ರಜ್ಞ ಮಂಗಳವಾರ ಕರೆ ನೀಡಿದ್ದು, 2021ರ ಅಂತ್ಯದ ವೇಳೆಗೆ ಕೊರೊನಾ ಸೋಂಕಿನ ವಿರುದ್ಧ ಪ್ರತಿ ದೇಶವು ತಮ್ಮ 40% ಜನರಿಗೆ ಲಸಿಕೆ ಹಾಕುವ ಗುರಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆಗಳ ರಫ್ತನ್ನು ಪುನರಾರಂಬಿಸುವ ಭಾರತದ ನಿರ್ಧಾರ ಬಹುಮುಖ್ಯವಾಗಿದೆ. ಆದರೆ ಪ್ರಮುಖ ಆರ್ಥಿಕ ಚೇತರಿಕೆಗೆ ಲಸಿಕೆ ವಿತರಣೆಯನ್ನು ಹೆಚ್ಚಿಸಬೇಕಿದೆ ಎಂದು ಗೀತಾ ಗೋಪಿನಾಥನ್ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಎಲ್ಲಾ ದೇಶಗಳು EUL ಲಸಿಕೆಗಳನ್ನು ಗುರುತಿಸಬೇಕು; WHO ವಿಜ್ಞಾನಿಎಲ್ಲಾ ದೇಶಗಳು EUL ಲಸಿಕೆಗಳನ್ನು ಗುರುತಿಸಬೇಕು; WHO ವಿಜ್ಞಾನಿ

ಕೊರೊನಾ ಸಾಂಕ್ರಾಮಿಕ ಸೋಂಕು, ಪ್ರಪಂಚದಾದ್ಯಂತ ಸುಮಾರು ಐದು ಮಿಲಿಯನ್ ಜನರನ್ನು ಬಲಿ ಪಡೆದಿದೆ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಕೇವಲ 2% ಜನರಿಗೆ ಇಲ್ಲಿಯವರೆಗೆ ಸೋಂಕಿನ ವಿರುದ್ಧ ಲಸಿಕೆ ಹಾಕಲಾಗಿದೆ. ಇದು ಆರೋಗ್ಯ ವ್ಯವಸ್ಥೆಯಲ್ಲಿ ಅಸಮಾನತೆ ಸೃಷ್ಟಿ ಅಷ್ಟೇ ಅಲ್ಲದೇ ಅಪಾಯಕ್ಕೆ ಎಡೆ ಮಾಡಿಕೊಡಬಹುದು ಎಂದು ಐಎಂಎಫ್ ಎಚ್ಚರಿಕೆ ನೀಡಿದೆ.

Ensure 40 Percent Of People Get Covid Vaccine In Every Country By 2021 Says IMF

ಏಳು ಶ್ರೀಮಂತ ರಾಷ್ಟ್ರಗಳ ಸಮೂಹ ತಾವು ಭರವಸೆ ನೀಡಿದ ಲಸಿಕೆ ಪೂರೈಕೆಯಲ್ಲಿ ಕೇವಲ 14% ಡೋಸ್‌ಗಳನ್ನು ಪೂರೈಸಿವೆ. ಈ ಸಂಖ್ಯೆಯನ್ನು 50%ಗೆ ಏರಿಸುವುದರಿಂದ 2021ರ ಜಾಗತಿಕ ಗುರಿಯನ್ನು ತಲುಪಲು ಸಾಧ್ಯವಾಗಲಿದೆ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಸಲಾದ ಕೊರೊನಾವೈರಸ್ ಲಸಿಕೆ ಎಷ್ಟು?ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಸಲಾದ ಕೊರೊನಾವೈರಸ್ ಲಸಿಕೆ ಎಷ್ಟು?

'ಘೋಷಣೆಗಳು ಹಾಗೂ ಪ್ರತಿಜ್ಞೆಗಳನ್ನು ಮಾಡಿದರಷ್ಟೇ ಸಾಕಾಗುವುದಿಲ್ಲ. ಅದರಂತೆ ನಡೆದುಕೊಳ್ಳಲು ಬದ್ಧತೆ ತೋರುವುದು ಮುಖ್ಯವಾಗುತ್ತದೆ' ಎಂದು ಹೇಳಿದ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಆಯೋಜಿಸಿರುವ ಕೋವಿಡ್ 19 ಶೃಂಗಸಭೆ ಕೊರೊನಾ ಲಸಿಕೆ ಸಂಬಂಧ ದೇಶಗಳಿಗೆ ಮಾಹಿತಿ ನೀಡುವಲ್ಲಿ ವ್ಯವಸ್ಥಿತ ಮಾರ್ಗವಾಗಿರಲಿದೆ ಎಂದು ಹೇಳಿದ್ದಾರೆ.

'ಕೊರೊನಾ ಸಾಂಕ್ರಾಮಿಕವವನ್ನು ಅಂತ್ಯಗೊಳಿಸುವುದು ಪರಿಹರಿಸಬಹುದಾದ ಸಮಸ್ಯೆ ಹಾಗೂ ಅದನ್ನು ಸಾಧಿಸಲು ಸಾಧ್ಯವಿದೆ ಎಂಬುದನ್ನು ನಾನು ಭಾವಿಸುತ್ತೇನೆ. ದೇಶಗಳು ಹಾಗೂ ಲಸಿಕೆ ಉತ್ಪಾದಕರನ್ನು ಒಟ್ಟುಗೂಡಿಸಿ ಈ ಗುರಿಯನ್ನು ತಲುಪುವಂತೆ ಮಾಡುವುದು ಬಹು ಮುಖ್ಯ ಕೆಲಸ' ಎಂದು ಹೇಳಿದರು.

Ensure 40 Percent Of People Get Covid Vaccine In Every Country By 2021 Says IMF

ಮುಂದಿನ ವರ್ಷದ ಆರಂಭದವರೆಗೆ ಲಸಿಕೆಗಳು ಎಲ್ಲರಿಗೂ ಲಭ್ಯವಿಲ್ಲದಿದ್ದರೂ ಈ ವರ್ಷದ ಅಂತ್ಯದ ವೇಳೆಗೆ, ವಿಶೇಷವಾಗಿ ಲಸಿಕೆ ಕೊರತೆಯನ್ನು ಹೆಚ್ಚಾಗಿ ಅನುಭವಿಸುತ್ತಿರುವ ಆಫ್ರಿಕನ್ ದೇಶಗಳಿಗೆ ಲಸಿಕೆಗಳ ಸಮರ್ಪಕ ಪೂರೈಕೆಯನ್ನು ನಿಯೋಜಿಸುವುದು ನಿರ್ಣಾಯಕವಾಗಿದೆ ಎಂದು ಹೇಳಿದರು.

2021ರ ಅಂತ್ಯದ ವೇಳೆಗೆ ಪ್ರಪಂಚದ ಎಲ್ಲಾ ದೇಶಗಳು ತಮ್ಮ 40% ಜನಸಂಖ್ಯೆಗೆ ಲಸಿಕೆ ಗುರಿ ಸಾಧಿಸುವ ಮೂಲಕ ಕೊರೊನಾ ಸಾಂಕ್ರಾಮಿಕವನ್ನು ಅಂತ್ಯಗೊಳಿಸುವ ಪ್ರಯತ್ನವಾಗಿ ವಿಶ್ವ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರೆ ಸಮೂಹಗಳ ಮುಂದೆ ಗೋಪಿನಾಥ್, ಐಎಂಎಫ್ ಸಿಬ್ಬಂದಿ ಹಾಗೂ ಅರ್ಥಶಾಸ್ತ್ರಜ್ಞ ರುಚಿರ್ ಅಗರ್‌ವಾಲ್ ಮೇ ತಿಂಗಳಿನಲ್ಲಿ 50 ಬಿಲಿಯನ್ ಡಾಲರ್ ಪ್ರಸ್ತಾವನೆಯನ್ನು ಬಿಡುಗಡೆ ಮಾಡಿದ್ದರು.

ವಿಶ್ವ ಆರೋಗ್ಯ ಸಂಸ್ಥೆ, ವರ್ಲ್ಡ್ ಬ್ಯಾಂಕ್ ಅನುಮೋದಿಸಿದ ಈ ಯೋಜನೆಯು 2022ರ ಮೊದಲಾರ್ಧದ ವೇಳೆಗೆ ಈ ಲಸಿಕಾ ದರವನ್ನು ಕನಿಷ್ಠ 60%ಗೆ ಏರಿಸಲು ಕರೆ ನೀಡಿತ್ತು.

ಮುಂದಿನ ವರ್ಷದ ಅಸೆಂಬ್ಲಿ ವೇಳೆಗೆ ಈ ಲಸಿಕಾ ಗುರಿಯನ್ನು 70%ಗೆ ಏರಿಸಲು ಬೈಡನ್ ವಿಶ್ವ ನಾಯಕರಿಗೆ ಸವಾಲು ಹಾಕಿದ್ದಾರೆ.

ಮುಂದಿನ ತಿಂಗಳು 'ಲಸಿಕಾ ಮೈತ್ರಿ' ಕಾರ್ಯಕ್ರಮದಡಿಯಲ್ಲಿ ಭಾರತವು ಹೆಚ್ಚುವರಿ ಕೊರೊನಾ ಲಸಿಕೆಗಳ ರಫ್ತನ್ನು ಪುನರಾರಂಭ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

'ಕೋವ್ಯಾಕ್ಸ್ ಜಾಗತಿಕ ಲಸಿಕಾ ಕಾರ್ಯಕ್ರಮದೆಡೆಗೆ ತನ್ನ ಬದ್ಧತೆಯನ್ನು ಪೂರೈಸಲು ಭಾರತ ಕೊರನಾ ಲಸಿಕೆ ರಫ್ತನ್ನು ಪುನರಾರಂಭ ಮಾಡಲಿದೆ. ತನ್ನ ನಾಗರಿಕರಿಗೆ ಲಸಿಕೆ ನೀಡುವುದನ್ನು ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಲಸಿಕೆಗಳನ್ನು ರಫ್ತು ಮಾಡಲಾಗುವುದು' ಎಂದು ಸೋಮವಾರ ಸಚಿವರು ತಿಳಿಸಿದ್ದಾರೆ.

'ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ 30 ಕೋಟಿ ಡೋಸ್ ಕೊರೊನಾ ಲಸಿಕೆಗಳನ್ನು ಹಾಗೂ ಮುಂದಿನ ಮೂರು ತಿಂಗಳುಗಳಲ್ಲಿ ನೂರು ಕೋಟಿ ಡೋಸ್‌ಗಳನ್ನು ಪಡೆಯಲಿದೆ. ಹೆಚ್ಚುವರಿ ಡೋಸ್‌ಗಳನ್ನು ರಫ್ತು ಮಾಡುವ ಕಾರ್ಯವನ್ನು ಭಾರತ ಮುಂದಿನ ತಿಂಗಳು ಪುನರಾರಂಭ ಮಾಡಲಿದೆ' ಎಂದು ಹೇಳಿದ್ದಾರೆ.

English summary
The chief economist of the International Monetary Fund on Tuesday called for coordinated action and greater accountability to ensure that the world meets a target of vaccinating 40% of people in every country against COVID-19 by the end of 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X