ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ವಿಮಾನದಲ್ಲಿ ದೋಷ, ತಪ್ಪಿದ ಭಾರೀ ಅನಾಹುತ

|
Google Oneindia Kannada News

ನವದೆಹಲಿ, ಏ. 5: ನ್ಯೂಯಾರ್ಕ್‌ನಿಂದ 250 ಪ್ರಯಾಣಿಕರನ್ನು ಹೊತ್ತುಕೊಂಡು ಮುಂಬೈಗೆ ಆಗಮಿಸುತ್ತಿದ್ದ ಏರ್‌ಇಂಡಿಯಾ ವಿಮಾನ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಮತ್ತೆ ನಿಲ್ದಾಣಕ್ಕೆ ಹಿಂದಿರುಗಿ ತುರ್ತಾಗಿ ಭೂ ಸ್ಪರ್ಶ ಮಾಡಿದ ಘಟನೆ ಭಾನುವಾರ ಬೆಳಗ್ಗೆ ವರದಿಯಾಗಿದೆ.

ನ್ಯೂಯಾರ್ಕ್ ಲಿಬರ್ಟಿ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದಿಂದ ವಿಮಾನ ಹೊರಟ ಕೆಲವೇ ಕ್ಷಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತುಕೊಂಡ ಪೈಲೆಟ್ ವಿಮಾಣವನ್ನು ಸುರಕ್ಷಿತವಾಗಿ ಹಿಂದಕ್ಕೆ ತಿರುಗಿಸಿ ಲ್ಯಾಂಡ್ ಮಾಡಿದರು.[ಏರ್ ಇಂಡಿಯಾ 90 ಕೋಟಿ ಆಸ್ತಿ ಖರೀದಿಗೆ ಎಸ್ ಬಿಐ ಸಿದ್ಧ]

Engine Trouble Forces Air India Flight to Return to New york

ಏರ್ ಇಂಡಿಯಾ ಬೋಯಿಂಗ್ 777-300 ಇಆರ್ ವಿಮಾನ 250 ಪ್ರಯಾಣಿಕರನ್ನು ಹೊತ್ತು ಭಾರತಕ್ಕೆ ಆಗಮಿಸುತ್ತಿತ್ತು. ನಂತರ ನವದೆಹಲಿಗೆ ಆಗಮಿಸಲಿದ್ದ ಪ್ರಯಾಣಿಕರಿಗೆ ಬೇರೆ ವಿಮಾನ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.[7 ವಿಮಾನ ಲೀಸ್ ಪಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್]

ವಿಮಾನ 29 ಸಾವಿರ ಅಡಿಗಳಷ್ಟು ಮೇಲೆ ಹಾರುತ್ತಿದ್ದಾಗ ದೋಷ ಕಾಣಿಸಿಕೊಂಡಿತ್ತು. ಪೈಲಟ್ ಸಮಯ ಪ್ರಜ್ಞೆ ಮತ್ತು ಎಚ್ಚರಿಕೆಯಿಂದ ದುರಂತವೊಂದು ತಪ್ಪಿದೆ. ವಿಮಾನದಲ್ಲಿ ಇಂಧನ ಭರ್ತಿಯಾಗಿದ್ದರೂ ಪೈಲೆಟ್ ಜಾಗರೂಕತೆಯಿಂದ ಲ್ಯಾಂಡ್ ಮಾಡಿದ ಪರಿಣಾಮ ಜನರ ಪ್ರಾಣ ರಕ್ಷಿಸಿದ್ದಾರೆ.

English summary
A Mumbai-bound Air India flight from New york Liberty International Airport with over 250 persons on board was forced to return and make an emergency landing today due to a serious engine problem, sources said. An Air India spokesperson confirmed the incident and said the passengers are being adjusted in its Delhi flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X