ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಕೆನಡಾ ವಿಮಾನ ತುರ್ತು ಲ್ಯಾಂಡಿಂಗ್:35 ಪ್ರಯಾಣಿಕರಿಗೆ ಗಾಯ

|
Google Oneindia Kannada News

ಹವಾಯಿ, ಜುಲೈ 12: ಏರ್ ಕೆನಡಾದ ವಿಮಾನವೊಂದು ಮೋಡಗಳ ರಾಶಿಗೆ ಡಿಕ್ಕಿ ಹೊಡೆದ ಪರಿಣಾಮ 35 ಪ್ರಯಾಣಿಕರು ಸಣ್ಣಪುಟ್ಟ ಗಾಯಕ್ಕೊಳಗಾಗಿದ್ದಾರೆ.

ಎಸಿ 33 ವಿಮಾನವು ಬ್ಯಾಂಕೋವರ್‌ನಿಂದ ಸಿಡ್ನಿಗೆ ಹೊರಟಿತ್ತು. ಹವಾಯಿ ದ್ವೀಪದಿಂದ ಹೊರಟ ಎರಡು ಗಂಟೆ ಅವಧಿಯಲ್ಲಿ ಮೋಡಗಳಿಗೆ ವಿಮಾನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪ್ರಯಾಣಿಕರು ವಿಮಾನದಲ್ಲಿಯೇ ಕೂತ ಸೀಟಿನಿಂದ ಎದ್ದು ಹಾರಿ ಬಿದ್ದಿದ್ದಾರೆ.

ಎಂಜಿನ್ ದೋಷ: ಮುಂಬೈಗೆ ತುರ್ತಾಗಿ ವಾಪಸ್ಸಾದ ಮಸ್ಕಟ್ ವಿಮಾನಎಂಜಿನ್ ದೋಷ: ಮುಂಬೈಗೆ ತುರ್ತಾಗಿ ವಾಪಸ್ಸಾದ ಮಸ್ಕಟ್ ವಿಮಾನ

ವಿಮಾನದ ಮೇಲ್ಭಾಗಕ್ಕೆ ಪ್ರಯಾಣಿಕರ ತಲೆ ಹೊಡೆದಿದೆ. ಹಾಗೆಯೇ ಕೆಲವರು ಒಂದು ಸೀಟಿನಿಂದ ಮತ್ತೊಂದಿ ಸೀಟಿಗೆ ಹಾರಿ ಬಿದ್ದಿದ್ದಾರೆ. ವಿಮಾನದ ಸಿಬ್ಬಂದಿಗಳಿಗೂ ಈ ಹವಾಮಾನ ವೈಪರಿತ್ಯದ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಇದರಿಂದ 269ಪ್ರಯಾಣಿಕರಿದ್ದ ವಿಮಾನದಲ್ಲಿ 35 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವಿಮಾನದಲ್ಲಿ 15 ಮಂದಿ ಸಿಬ್ಬಂದಿಗಳಿದ್ದರು. ಮೋಡಕ್ಕೆ ಡಿಕ್ಕಿ ಹಾಗೂ ಪ್ರಯಾಣಿಕರಿಗೆ ಗಾಯಗಳಾದ ಹಿನ್ನೆಲೆಯಲ್ಲಿ ಹೊನಲುಲು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

Emergency landing of Air Canada after 35 passengers injured

ಎಲ್ಲಾ ಪ್ರಯಾಣಿಕರಿಗೆ ಸ್ಥಳೀಯ ಹೋಟೆಲ್‌ನಲ್ಲಿ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಏರ್ ಕೆನಡಾ ವಕ್ತಾರರು ತಿಳಿಸಿದ್ದಾರೆ.

English summary
Emergency landing of Air Canada after 35 passengers injured air Canada flight hit the pocket of turbulence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X