ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾನೇನಾದರೂ ನಿಗೂಢವಾಗಿ ಸತ್ತರೆ'; ಕುತೂಹಲ ಮೂಡಿಸಿದ ಮಸ್ಕ್ ಟ್ವೀಟ್

|
Google Oneindia Kannada News

ಮಾಸ್ಕೋ, ಮೇ 9: ಟ್ವಿಟ್ಟರ್‌ನ ಹೊಸ ಮಾಲೀಕರಾಗುತ್ತಿರುವ ಎಲಾನ್ ಮಸ್ಕ್ ಹಲವು ಕುತೂಹಲಭರಿತ ಮತ್ತು ಗೂಡಾರ್ಥದ ಟ್ವೀಟ್‌ಗಳನ್ನು ಮಾಡುವುದರಲ್ಲಿ ಸೈ ಎನಿಸಿಕೊಂಡವರು. ವಿಶ್ವದ ಅತಿ ಶ್ರೀಮಂತ ಎನಿಸಿರುವ ಇವರು ಮಾಡುವ ಪ್ರತೀ ಟ್ವೀಟ್ ಬಹುತೇಕ ಸಂಚಲನ ಸೃಷ್ಟಿಸುತ್ತದೆ.

ಇವರು ಯಾವುದಾದರೂ ಕ್ರಿಪ್ಟೋಕರೆನ್ಸಿ ಹೆಸರು ಎತ್ತಿದರೆ ಅದು ದಿಢೀರ್ ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ. ಈಗ ಇದರ ಪ್ರಸ್ತಾಪ ಕೇವಲ ನಿದರ್ಶನಕ್ಕೆ ಮಾತ್ರ. ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಇದೀಗ ಮತ್ತೊಂದು ನಿಗೂಢ ಟ್ವೀಟ್ ಮಾಡಿದ್ದಾರೆ. ತನ್ನ ನಿಗೂಢ ಸಾವಿನ ವಿಚಾರವನ್ನು ಅವರು ಈ ಟ್ವೀಟ್‌ನಲ್ಲಿ ಪ್ರಸ್ತಾಪಿಸಿ ಕುತೂಹಲ ಮೂಡಿಸಿದ್ದಾರೆ.

ವಿಶ್ವದ ಅತಿಶ್ರೀಮಂತನಿಗೆ ಅತ್ಯುತ್ತಮ ಹೂಡಿಕೆ ಸಲಹೆ ಕೊಟ್ಟ ಭಾರತೀಯ ಉದ್ಯಮಿ ವಿಶ್ವದ ಅತಿಶ್ರೀಮಂತನಿಗೆ ಅತ್ಯುತ್ತಮ ಹೂಡಿಕೆ ಸಲಹೆ ಕೊಟ್ಟ ಭಾರತೀಯ ಉದ್ಯಮಿ

"ನಾನೇನಾದರೂ ನಿಗೂಢ ಸಂದರ್ಭದಲ್ಲಿ ಸತ್ತರೆ ಅದನ್ನು ತಿಳಿಯುವುದು ಎಷ್ಟು ಚೆನ್ನಾ" ಎಂದು ಎಲಾಲ್ ಮಸ್ಕ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಇಂದು ಬೆಳಗ್ಗೆ 6:21ಕ್ಕೆ ಅವರು ಮಾಡಿದ ಟ್ವೀಟ್‌ಗೆ ಒಂದೇ ಗಂಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಲೈಕ್ ಮತ್ತು 35 ಸಾವಿರಕ್ಕೂ ಹೆಚ್ಚು ರೀಟ್ವೀಟ್‌ಗಳಾಗಿವೆ. ಅಷ್ಟೇ ಅಲ್ಲ, ತರಹೇವಾರಿ ಮೀಮ್‌ಗಳು ಟ್ವಿಟ್ಟರ್‌ನಲ್ಲಿ ತಯಾರಾಗಿದ್ದು ಟ್ರೆಂಡಿಂಗ್ ಆಗಿದೆ.

ನಿಗೂಢ ಸಾವಿನ ಮರ್ಮವೇನು?; ಎಲಾನ್ ಮಸ್ಕ್ ತಮ್ಮ ನಿಗೂಢ ಸಾವಿನ ಟ್ವೀಟ್ ಮಾಡುವ ಕೆಲ ನಿಮಿಷ ಮೊದಲು ಮತ್ತೊಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ರಷ್ಯಾದ ಅಧಿಕಾರಿಯೊಬ್ಬರು ತನಗೆ ಬೆದರಿಕೆ ಹಾಕಿರುವ ವಿಚಾರವನ್ನು ಪ್ರಸ್ತಾಪಿಸಿದ್ದರು.

Elon Musk Tweets of Dying Under Mysterious Circumstances

"ಉಕ್ರೇನ್ ದೇಶದ ಫ್ಯಾಸಿಸ್ಟ್ ಶಕ್ತಿಗಳಿಗೆ ಮಿಲಿಟರಿ ಸಂಹನ ಉಪಕರಣ ಸರಬರಾಜು ಮಾಡುವ ಕಾರ್ಯದಲ್ಲಿ ಎಲಾನ್ ಮಸ್ಕ್ ಇದ್ದಾರೆ. ಎಲಾನ್ ನೀವು ಎಷ್ಟೇ ಮೂರ್ಖರಂತೆ ನಟಿಸಿದರೂ ಹೊಣೆ ಹೊರಬೇಕಾಗುತ್ತದೆ" ಎಂದು ರೋಗೊಜಿನ್ ಎಂಬುವವರು ನೀಡಿದ ಹೇಳಿಕೆಯ ಅಂಶವನ್ನು ಮಸ್ಕ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಅಂದರೆ, ಉಕ್ರೇನ್ ದೇಶಕ್ಕೆ ಸಹಾಯ ಮಾಡಿದ ಎಲಾನ್ ಮಸ್ಕ್‌ಗೆ ರಷ್ಯಾದಿಂದ ಜೀವ ಬೆದರಿಕೆ ಇದೆ ಎಂಬುದು ಅವರ ಈ ಎರಡು ಟ್ವೀಟ್‌ಗಳು ಸುಳಿವು ನೀಡುತ್ತವೆ. ಎರಡು ತಿಂಗಳ ಹಿಂದೆ, ಅಂದರೆ ಫೆಬ್ರವರಿಯಲ್ಲಿ ಎಲಾನ್ ಮಸ್ಕ್ ಮಾಲಿಕತ್ವದ ಸ್ಪೇಸ್‌ಎಕ್ಸ್ ಕಂಪನಿಯ ಸ್ಟಾರ್‌ಲಿಂಗ್ ಸೆಟಿಲೈಟ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಉಕ್ರೇನ್‌ನಲ್ಲಿ ಆರಂಭಿಸಲಾಗಿತ್ತು. ಇದರಿಂದ ಉಕ್ರೇನ್ ಸೈನಿಕರಿಗೆ ರಷ್ಯನ್ ದಾಳಿಯನ್ನು ಎದುರಿಸಲು ಸಹಾಯವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Tesla CEO Elon Musk, known to stir up a storm with his tweets, sparked another buzz today in a post talking about death under "mysterious circumstances".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X