• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!

|

ಪದೇ ಪದೇ ನಿಮ್ಮ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಿ..

ಹ್ಯಾಂಡ್ ಸ್ಯಾನಿಟೈಝರ್ ಬಳಸಿ..

ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವವರಿಂದ ದೂರವಿರಿ...

- ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ಈ ಸುರಕ್ಷತಾ ಕ್ರಮಗಳನ್ನ ಪಾಲಿಸಿ ಎಂದು ಹಲವರು ಸಲಹೆ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಜನರ ಹಿತಕ್ಕಾಗಿ ಕೊರೊನಾ ಸೇಫ್ಟಿ ಕಾಲರ್ ಟ್ಯೂನ್ ಆಕ್ಟಿವೇಟ್ ಮಾಡಿದೆ.

ಆದ್ರೆ, ಕೆಮ್ಮು, ನೆಗಡಿ, ಶೀತ.. ಈ ಯಾವ ಲಕ್ಷಣಗಳು ಕಾಣಿಸಿಕೊಳ್ಳದೆ ಇರುವವರಿಂದಲೂ 'ಡೆಡ್ಲಿ ಕೊರೊನಾ ವೈರಸ್' ಹಬ್ಬುತ್ತದೆ.! ಅದಕ್ಕೆ ಸಾಕ್ಷಿ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಅಮೇರಿಕಾದ ಮಹಿಳೆ ಎಲಿಜಬೆತ್.

ಕೊರೊನಾ + ಹೈ ಬಿಪಿ = ಸಾವು : ಇದು ಚೀನಿ ವೈದ್ಯರೇ ಹೇಳಿದ ಮಾತು!

ಶುಚಿತ್ವವನ್ನು ಕಾಪಾಡಿಕೊಳ್ಳಲು ಪದೇ ಪದೇ ಕೈಗಳನ್ನು ತೊಳೆದುಕೊಂಡರೂ, ಅಮೇರಿಕಾದ ಮಹಿಳೆ ಎಲಿಜಬೆತ್ ಗೆ ಕೊರೊನಾ ಕಾಡದೇ ಇರಲಿಲ್ಲ. ಸದ್ಯ ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಎಲಿಜಬೆತ್, ಕೊರೊನಾ ಸೋಂಕು ಹರಡುವ ಬಗ್ಗೆ ಭಯಾನಕ ಸತ್ಯವೊಂದನ್ನು ಹೊರಹಾಕಿದ್ದಾರೆ.

ಯಾರಿಗೂ ನೆಗಡಿ ಇರಲಿಲ್ಲ

''ಸಣ್ಣ ಮಟ್ಟದ ಹೌಸ್ ಪಾರ್ಟಿಯಲ್ಲಿ ನಾನು ಭಾಗಿಯಾಗಿದ್ದಾಗ, ಕೊರೊನಾ ಸೋಂಕು ನನಗೆ ತಗುಲಿದೆ. ಆದ್ರೆ, ಆ ಪಾರ್ಟಿಗೆ ಬಂದಿದ್ದವರಲ್ಲಿ ಯಾರಿಗೂ ಕೆಮ್ಮು, ನೆಗಡಿ ಅಥವಾ ಬೇರೆ ಯಾವುದೇ ರೋಗದ ಲಕ್ಷಣಗಳು ಇರಲಿಲ್ಲ. ವಿಚಿತ್ರ ಅಂದ್ರೆ, ಆ ಪಾರ್ಟಿ ಮುಗಿದ ಬಳಿಕ, ಅದರಲ್ಲಿ ಭಾಗಿಯಾಗಿದ್ದ 40% ಮಂದಿಗೆ ಕೊರೊನಾ ಸೋಂಕು ಹರಡಿದೆ. ಕೈಗಳನ್ನು ತೊಳೆದುಕೊಳ್ಳಿ, ರೋಗದ ಲಕ್ಷಣಗಳು ಇರುವವರಿಂದ ದೂರವಿರಿ ಎಂದು ಮೀಡಿಯಾ ಹೇಳುತ್ತಿದೆ. ಅದೆಲ್ಲವನ್ನೂ ನಾನೂ ಪಾಲಿಸಿದ್ದೆ. ಆದರೂ ಕೊರೊನಾ ಸೋಂಕು ನನಗೆ ತಗುಲಿತು. ಮನುಷ್ಯರ ಜೊತೆಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸುವವರೆಗೂ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ'' ಎಂಬ ಕರಾಳ ಸತ್ಯವನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಎಲಿಜಬೆತ್.

ಪಾರ್ಟಿ ಮುಗಿದ ಬಳಿಕ ಕಂಡುಬಂದ ರೋಗದ ಲಕ್ಷಣಗಳು

ಪಾರ್ಟಿ ಮುಗಿದ ಬಳಿಕ ಕಂಡುಬಂದ ರೋಗದ ಲಕ್ಷಣಗಳು

''ಪಾರ್ಟಿ ಮುಗಿದ ಮೂರು ದಿನಗಳಲ್ಲಿ, ಅದರಲ್ಲಿ ಭಾಗಿಯಾಗಿದ್ದ 40% ರಷ್ಟು ಮಂದಿಗೆ ಜ್ವರ ಕಾಣಿಸಿಕೊಳ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದವರೆಲ್ಲ 30, 40, 50 ವರ್ಷ ವಯಸ್ಸಿನವರು. ಕೆಲವರಿಗೆ ತೀವ್ರ ತಲೆನೋವು, ಜ್ವರ ಕಾಣಿಸಿಕೊಳ್ತು. ಹಲವರು ಮೈ ಕೈ ನೋವು, ಜಾಯಿಂಟ್ ಪೇನ್, ಸುಸ್ತಿನಿಂದ ಬಳಲಿದರು. ಒಂದಿಬ್ಬರಿಗೆ ಭೇದಿ ಆಯ್ತು. ನನಗೆ ವಾಂತಿ ಕೂಡ ಆಗಿತ್ತು. ಜ್ವರ ಹೋದ ಬಳಿಕ ಕೆಲವರ ಮೂಗು ಕಟ್ಟಿತು, ಗಂಟಲು ಕೆರತ ಆರಂಭವಾಯ್ತು. ಕೆಮ್ಮು ಮತ್ತು ಉಸಿರಾಟದ ತೊಂದರೆ ಉಂಟಾಗಿದ್ದು ತೀರಾ ಕಮ್ಮಿ ಜನಕ್ಕೆ. ಒಟ್ಟು 10-16 ದಿನಗಳ ಕಾಲ ಅನಾರೋಗ್ಯಕ್ಕೀಡಾಗಿದ್ವಿ. ಕೆಮ್ಮು ಮತ್ತು ಉಸಿರಾಟ ತೊಂದರೆ ಇಲ್ಲದವರು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲಿಲ್ಲ. ನಾನು ಸಿಯಾಟಲ್ ಫ್ಲೂ ಸ್ಟಡಿ ಸೆಂಟರ್ ನಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡೆ. ರಿಪೋರ್ಟ್ ನಲ್ಲಿ ಕೋವಿಡ್-19 ಪಾಸಿಟಿವ್ ಅಂತ ಬಂತು'' - ಎಲಿಜಬೆತ್

ಕೊರೊನಾದಿಂದ 68,313 ಮಂದಿ ಗುಣಮುಖ: ಆದರೂ ಕ್ಷೀಣಿಸದ ಭಯ!

ನಿರ್ಲಕ್ಷ್ಯ ಮಾಡಬೇಡಿ

ನಿರ್ಲಕ್ಷ್ಯ ಮಾಡಬೇಡಿ

''ಕೇವಲ ನೆಗಡಿ, ಕೆಮ್ಮು ಎಂಬ ಕಾರಣದಿಂದ ಎಷ್ಟೋ ಜನ ನಿರ್ಲಕ್ಷ್ಯ ಮಾಡುತ್ತ, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ವೈರಸ್ ಗಳನ್ನ ಹಬ್ಬಿಸುತ್ತಿದ್ದಾರೆ. ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದವರೂ ಕೂಡ ವೈರಸ್ ಹಬ್ಬುವಿಕೆಗೆ ಕಾರಣವಾಗಿದ್ದಾರೆ. 'ಕೊರೊನಾ ನಮಗೆಲ್ಲಿಂದ ಬರುತ್ತೆ' ಅಂತ ಕೆಲವರು ಉಡಾಫೆ ಮಾಡಬಹುದು. ಆದ್ರೆ, ಆರಂಭದಲ್ಲೇ ವೈದ್ಯಕೀಯ ತಪಾಸಣೆ ಮಾಡಿಸುವುದು ಸೂಕ್ತ'' ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಎಲಿಜಬೆತ್.

ಪ್ರಾಣಾಪಾಯದಿಂದ ಪಾರಾದ ಎಲಿಜಬೆತ್

ಪ್ರಾಣಾಪಾಯದಿಂದ ಪಾರಾದ ಎಲಿಜಬೆತ್

ಸದ್ಯ ಕೊರೊನಾ ವೈರಸ್ ಸೋಂಕಿನಿಂದ ಎಲಿಜಬೆತ್ ಚೇತರಿಸಿಕೊಂಡಿದ್ದಾರೆ. ನಿರಂತರವಾಗಿ ಔ‍ಷಧಿಯನ್ನು ಸೇವಿಸುತ್ತಿರುವ ಕಾರಣ, ಪ್ರಾಣಾಪಾಯದಿಂದ ಎಲಿಜಬೆತ್ ಬಚಾವ್ ಆಗಿದ್ದಾರೆ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

ಗ್ಯಾರೆಂಟಿ ಇಲ್ಲ

ಗ್ಯಾರೆಂಟಿ ಇಲ್ಲ

''ಕೈತೊಳೆಯುವುದರಿಂದ ಕೊರೊನಾ ಸೋಂಕು ಹರಡಲ್ಲ ಎಂಬುದಕ್ಕೆ ಗ್ಯಾರೆಂಟಿ ಇಲ್ಲ. ಯಾಕಂದ್ರೆ, 'ಆರೋಗ್ಯವಾಗಿ ಕಾಣುವವರೂ' ಕೂಡ ಸೋಂಕನ್ನು ಹಬ್ಬಿಸಬಹುದು. ಹೀಗಾಗಿ, ಹೊರಗೆ ಹೋಗುವ ಮುನ್ನ ಎಚ್ಚರಿಕೆ ವಹಿಸಿ, ಆರೋಗ್ಯವಾಗಿರಿ'' ಎಂದು ಫೇಸ್ ಬುಕ್ ನಲ್ಲಿ ಎಲಿಜಬೆತ್ ಬರೆದುಕೊಂಡಿದ್ದಾರೆ.

ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!

English summary
I got Coronavirus from a house party where no one had any symptoms of illness says Elizabeth Schneider, A Seattle Woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X