ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿಯಲ್ಲಿ 'ದರೋಡೆ' ಮಾಡಿದ ಆನೆ: ವೈರಲ್ ವಿಡಿಯೋ

|
Google Oneindia Kannada News

ನವದೆಹಲಿ, ನವೆಂಬರ್ 16: ಅನೇಕ ಸಸ್ಯಾಹಾರಿ ಪ್ರಾಣಿಗಳಿಗೆ ಹಣ್ಣುಗಳೆಂದರೆ ಬಲು ಇಷ್ಟ. ಕೋತಿಗಳು, ಆನೆಗಳು ಹಣ್ಣು ತಿನ್ನುವ ಸಲುವಾಗಿ ದಾಳಿ ನಡೆಸುವುದನ್ನು ನೋಡಿದ್ದೇವೆ. ಕೆಲವು ತಿಂಗಳ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆಯೊಂದಕ್ಕೆ ಅನಾನಸ್ ಹಣ್ಣಿನಲ್ಲಿ ಸ್ಫೋಟಕ ತುಂಬಿಸಿ ಕೊಟ್ಟು ಅದರ ಸಾವಿಗೆ ಕಾರಣವಾದ ಹೃದಯವಿದ್ರಾವಕ ಘಟನೆ ನೆನಪಿರಬೇಕು.

ಆನೆಗಳು ಆಹಾರಕ್ಕಾಗಿ ಎಂತಹ ದುರ್ಗಮ ಕಾಡು, ಬೆಳೆಗಳ ಮೇಲೆ ದಾಳಿ ಮಾಡಬಲ್ಲವು. ಹಾಗೆಯೇ ಮನುಷ್ಯರ ಮೇಲೆಯೂ. ರಸ್ತೆಯಲ್ಲಿ ನಿಂತು ಓಡಾಡುವ ವಾಹನಗಳಿಂದ ಕಬ್ಬು, ಹಣ್ಣುಗಳನ್ನು ಕಿತ್ತುಕೊಳ್ಳುವ ಅನೇಕ ವಿಡಿಯೋಗಳು ವೈರಲ್ ಆಗಿದ್ದವು. ಇನ್ನು ಕೆಲವು ಕಾಡಾನೆಗಳು ಪ್ರಯಾಣಿಕರು ಕೊಟ್ಟಿದ್ದನ್ನು ತಿನ್ನುವ ಅಭ್ಯಾಸವನ್ನೂ ಬೆಳೆಸಿಕೊಂಡಿವೆ. ಆದರೆ ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಂಡಿಪುರ ಅರಣ್ಯದಲ್ಲಿ 1,600ಕ್ಕೂ ಹೆಚ್ಚು ಆನೆಗಳು: ಆಂತರಿಕ ಸಮೀಕ್ಷೆ ಮಾಹಿತಿಬಂಡಿಪುರ ಅರಣ್ಯದಲ್ಲಿ 1,600ಕ್ಕೂ ಹೆಚ್ಚು ಆನೆಗಳು: ಆಂತರಿಕ ಸಮೀಕ್ಷೆ ಮಾಹಿತಿ

ಹೆದ್ದಾರಿಯಲ್ಲಿ ಬಸ್‌ವೊಂದನ್ನು ಅಡ್ಡಗಟ್ಟಿದ ಆನೆ, ಚಾಲಕನ ಜಾಗದ ಕಿಟಕಿಯಿಂದ ಸೊಂಡಿಲು ತೂರಿಸಿ ಬಾಳೆಹಣ್ಣನ್ನು ದೋಚಿದೆ. ಆನೆಯ ಈ ವರ್ತನೆ ತಮಾಷೆಯಾಗಿ ಕಂಡರೂ, ವಾಹನದಲ್ಲಿರುವವರ ಜೀವ ಅರೆಕ್ಷಣ ಬಾಯಿಗೆ ಬಂದಿರುವುದಂತೂ ಸತ್ಯ. ಏಕೆಂದರೆ ತಿನ್ನಲು ಹಣ್ಣು ಸಿಗದೆ ಹೋದರೆ ಆನೆ ಮುಲಾಜಿಲ್ಲದೆ ದಾಳಿ ಮಾಡುವ ಅಪಾಯವೂ ಇರುತ್ತದೆ. ಮುಂದೆ ಓದಿ.

ಹಗಲು ದರೋಡೆ!

ಸಾಮಾಜಿಕ ಜಾಲತಾಣದಲ್ಲಿ ವನ್ಯಜೀವಿಗಳ ಕುರಿತು ಸಾಕಷ್ಟು ಮಾಹಿತಿ ಹಂಚಿಕೊಳ್ಳುವ ಮತ್ತು ಅಪರೂಪದ ವಿಡಿಯೋಗಳನ್ನು ನೀಡುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್, ಈ ಕಿಡಿಗೇಡಿ ಆನೆಯ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ಹೆದ್ದಾರಿಯಲ್ಲಿನ ಹಗಲು ದರೋಡೆ' ಎಂದು ಅವರು ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ.

ಶ್ರೀಲಂಕಾದ ವಿಡಿಯೋ

ಶ್ರೀಲಂಕಾದ ವಿಡಿಯೋ

ನವೆಂಬರ್ 11ರಂದು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅದನ್ನು ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ದು, ಟ್ವಿಟ್ಟರ್‌ನಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಶ್ರೀಲಂಕಾದ ಕಟರಂಗಮಾ ಎಂಬಲ್ಲಿ ನಡೆದ ಘಟನೆಯಾಗಿದ್ದು, ಅದನ್ನು ಬಸ್‌ನಲ್ಲಿದ್ದವರು ಚಿತ್ರೀಕರಿಸಿದ್ದಾರೆ.

ಬೈಕ್ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನ; ವಿಡಿಯೋ ವೈರಲ್ಬೈಕ್ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನ; ವಿಡಿಯೋ ವೈರಲ್

ಆಹಾರ ನೀಡಿ ಅಭ್ಯಾಸ ಮಾಡಬೇಡಿ

ಆಹಾರ ನೀಡಿ ಅಭ್ಯಾಸ ಮಾಡಬೇಡಿ

''ಅರಣ್ಯ ಪ್ರದೇಶಗಳ ಸಮೀಪದಲ್ಲಿ 'ಪ್ರಾಣಿಗಳಿಗೆ ಆಹಾರ ನೀಡಬೇಡಿ' ಎಂಬ ಗಂಭೀರ ಫಲಕಗಳನ್ನು ಏಕೆ ಹಾಕಿರುತ್ತಾರೆ ಎನ್ನುವುದು ಇದರಿಂದ ಅರ್ಥವಾಗಬಹುದು. ಹೊಸ ರುಚಿ ಕಂಡರೆ ಅವುಗಳಿಗೆ ಅಭ್ಯಾಸವಾಗುತ್ತದೆ. ಅದರಿಂದ ರಸ್ತೆ ಹಾಗೂ ಮಾನವನ ಸಮೀಪ ಮತ್ತೆ ಬರತೊಡಗುತ್ತವೆ'' ಎಂದು ಪರ್ವೀನ್ ಹೇಳಿದ್ದಾರೆ.

ನಮ್ಮ ದರೋಡೆಗಿಂತ ಇದು ದೊಡ್ಡದಲ್ಲ

ನಮ್ಮ ದರೋಡೆಗಿಂತ ಇದು ದೊಡ್ಡದಲ್ಲ

'ನಾವು ಮನುಷ್ಯರು ಅರಣ್ಯವನ್ನೇ ದೋಚಿದ್ದೇವೆ. ಆನೆಗಳ ವಾಸಸ್ಥಳವನ್ನು ಆಕ್ರಮಿಸಿದ್ದೇವೆ. ಈ ರೀತಿಯ ಸಣ್ಣ ಪುಟ್ಟ ದರೋಡೆ ದೊಡ್ಡದಲ್ಲ' ಎಂದು ಕೆಲವರು ಹೇಳಿದ್ದಾರೆ. ರಸ್ತೆಗಳಲ್ಲಿ ಸಾಗುವಾಗ ನಾವು ತಾಳ್ಮೆ ವಹಿಸುವುದಿಲ್ಲ. ಇಲ್ಲಿ ವಾಹನ ಚಾಲಕ ದೂರದಲ್ಲಿ ನಿಂತು ಕಾದಿದ್ದರೆ ಆನೆ ತನ್ನ ಪಾಡಿಗೆ ರಸ್ತೆ ದಾಟುತ್ತಿತ್ತು. ಈ ರೀತಿಯ ವಿಡಿಯೋಗಳನ್ನು ನೋಡಿದ್ದೇನೆ, ಅದರಲ್ಲಿ ಮನುಷ್ಯರು ಸ್ವಲ್ಪ ಅತಿಯಾಗಿಯೇ ವರ್ತಿಸುತ್ತಾರೆ' ಎಂದು ಕೆಲವು ಹೇಳಿದ್ದಾರೆ.

ಬಾಲ ಕಳೆದುಕೊಂಡಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆಬಾಲ ಕಳೆದುಕೊಂಡಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ

English summary
A video posted by IFS officer Parveen Kaswan of an elephant stopped a Bus on high way to steal bananas goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X