ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜಿಪ್ಟ್‌ ಮಾಜಿ ಅಧ್ಯಕ್ಷ ಮೊರ್ಸಿ ನ್ಯಾಯಾಲಯದಲ್ಲೇ ಕುಸಿದು ಬಿದ್ದು ಸಾವು

|
Google Oneindia Kannada News

ಕೈರೋ, ಜೂನ್ 18: ಈಜಿಪ್ಟ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನ್ಯಾಯಾಲಯದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಮೊರ್ಸಿಗೆ 67 ವರ್ಷ ವಯಸ್ಸಾಗಿತ್ತು, ಅವರು 2013ರಲ್ಲಿ ಸೇನೆಯಿಂದ ಉಚ್ಛಾಟಿಸಲ್ಪಟ್ಟಿದ್ದರು. ನ್ಯಾಯಾಲಯದ ವಿಚಾರಣೆ ವೇಳೆಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಅವರ ಮೇಲೆ ಬೇಹುಗಾರಿಕೆ ಆರೋಪ ಇತ್ತು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರು ನ್ಯಾಯಾಧೀಶರ ಮುಂದೆ ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದ್ದಾರೆ. ನಂತರ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಬದುಕುಳಿಯಲಿಲ್ಲ ಮಾದ್ಯಮಗಳು ವರದಿ ಮಾಡಿದೆ.

Egypts former President Mohammed Morsi dies

ಸುಮಾರು ಒಂದು ವರ್ಷದ ತರುವಾಯ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ ಹಾಗೂ ಸೇನಾ ದಂಗೆಯ ನಂತರ ಮೊರ್ಸಿ ತಮ್ಮ ಸ್ಥಾನದಿಂದ ಉಚ್ಚಾಟಿತರಾಗಿದ್ದರು.

ಈಜಿಪ್ಟ್ ಸರ್ವಾಧಿಕಾರಿಯಾಗಿದ್ದ ಹುಸ್ನಿ ಮುಬಾರಕ್ ನ ಮೂರು ದಶಕಗಳ ಕಾಲದ ಆಡಳಿತ ಅಂತ್ಯವಾದ ನಂತರ ದೇಶದ ಮೊದಲ ಪ್ರಜಾಸತ್ತಾತ್ಮಕ ಚುನಾಯಿತ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದ ಮೊರ್ಸಿ 2012-13ರ ಅವಧಿಯಲ್ಲಿ ಆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

English summary
Egypts former President Mohammed Morsi dies court, during hearing, The democratically elected Islamist held power for just one year before being ousted by the military in 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X