ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯೋ ವಿಧಿಯೇ.. ಈಕ್ವೆಡಾರ್ ನಲ್ಲಿನ ವೈದ್ಯರ ಸ್ಥಿತಿ ಯಾರಿಗೂ ಬೇಡ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಜಗತ್ತಿನಲ್ಲಿ ಉಂಟಾಗಿರುವ ಸಾವು-ನೋವು ಅಷ್ಟಿಷ್ಟಲ್ಲ. ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಇಡೀ ವಿಶ್ವಕ್ಕೆ ಮಹಾಮಾರಿಯಾಗಿ ಪರಿಣಮಿಸಿದೆ. 30 ಲಕ್ಷಕ್ಕೂ ಹೆಚ್ಚು ಜನರಿಗೆ ಕಾಡುತ್ತಿರುವ ಕೊರೊನಾ ವೈರಸ್ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ.

ಏಕಾಏಕಿ ಬಂದೆರಗಿದ ಕೊರೊನಾ ವೈರಸ್ ಗೆ ದಕ್ಷಿಣ ಅಮೇರಿಕಾದ ಪುಟ್ಟ ದೇಶ ಈಕ್ವೆಡಾರ್ ಅಕ್ಷರಶಃ ಜರ್ಜರಿತವಾಗಿದೆ. ಈಕ್ವೆಡಾರ್ ನಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡಿದ್ದು, ಅಲ್ಲಿನ ಆಸ್ಪತ್ರೆಗಳು, ವೈದ್ಯರು ಮತ್ತು ನರ್ಸ್ ಗಳ ಪರಿಸ್ಥಿತಿ ಹೇಳತೀರದು.

ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

ಅದರಲ್ಲೂ ಈಕ್ವೆಡಾರ್ ನ Guayaquil ನಲ್ಲಿರುವ ಒಂದು ಆಸ್ಪತ್ರೆಯಲ್ಲಂತೂ ಮೃತದೇಹಗಳನ್ನು ಇರಿಸುವ ಶವಾಗಾರ ತುಂಬಿಹೋಗಿದ್ದು, ಬೇರೆ ವಿಧಿ ಇಲ್ಲದೆ ಬಾತ್ ರೂಮ್ ಗಳಲ್ಲಿ ಮೃತದೇಹಗಳನ್ನು ಸಾಲಾಗಿ ಇರಿಸಲಾಗುತ್ತಿದೆ.

ಹೆಚ್ಚು ಜನರ ಸಾವು, ನೋವು.. ಎಲ್ಲೆಲ್ಲೂ ಮೃತದೇಹಗಳನ್ನು ನೋಡಿ ನೋಡಿ ಅಲ್ಲಿನ ವೈದ್ಯರು ಮತ್ತು ನರ್ಸ್ ಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಸಾವಿರಾರು ಮಂದಿ ಸಾವನ್ನಪ್ಪಿರುವುದು ವಾಸ್ತವ

ಸಾವಿರಾರು ಮಂದಿ ಸಾವನ್ನಪ್ಪಿರುವುದು ವಾಸ್ತವ

ಈಕ್ವೆಡಾರ್ ನಲ್ಲಿ ಇಲ್ಲಿಯವರೆಗೂ 23 ಸಾವಿರ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. 600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಆದ್ರೆ, ವಾಸ್ತವದಲ್ಲಿ ಈಕ್ವೆಡಾರ್ ನಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಹೊಡೆತಕ್ಕೆ ಈಕ್ವೆಡಾರ್ ನಲ್ಲಿನ Guayaquil ಸಿಟಿ ಅಕ್ಷರಶಃ ಹೆಣಗಾಡುತ್ತಿದೆ.

ಬಾತ್ ರೂಮ್ ನಲ್ಲಿ ಮೃತದೇಹಗಳನ್ನು ಇರಿಸಲಾಗಿದೆ

ಬಾತ್ ರೂಮ್ ನಲ್ಲಿ ಮೃತದೇಹಗಳನ್ನು ಇರಿಸಲಾಗಿದೆ

ಕೊರೊನಾ ಮಹಾಮಾರಿಯಿಂದ ಈಕ್ವೆಡಾರ್ ನ ಸ್ಥಿತಿ ಬಿಗಿಡಾಯಿಸಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲು ಅಲ್ಲಿನ ಆಸ್ಪತ್ರೆಗಳು ಒದ್ದಾಡುತ್ತಿವೆ. ಮೃತದೇಹಗಳನ್ನು ಇರಿಸಲಾಗಿದ್ದ ಬೆಡ್ ಗಳನ್ನು ಸೋಂಕಿತರಿಗೆ ಮರುಬಳಕೆ ಮಾಡಲಾಗುತ್ತಿದೆ. ಮೃತದೇಹಗಳಿಂದ ಶವಾಗಾರ ತುಂಬಿದ್ದು, ಅವುಗಳನ್ನು ಪ್ಯಾಕ್ ಮಾಡಿ ಬಾತ್ ರೂಮ್ ನಲ್ಲಿ ಇರಿಸಲಾಗುತ್ತಿದೆ.

ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?

ಭಾವುಕರಾದ ನರ್ಸ್

ಭಾವುಕರಾದ ನರ್ಸ್

''ಸೋಂಕಿನಿಂದ ಎಷ್ಟೊಂದು ಜನ ಆಸ್ಪತ್ರೆಗೆ ಬರುತ್ತಿದ್ದಾರೆ. ಒಬ್ಬೊಬ್ಬ ನರ್ಸ್ 15-30 ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ನಮ್ಮ ತೋಳಲ್ಲೇ ಪ್ರಾಣ ಬಿಡುತ್ತಿದ್ದಾರೆ'' ಎನ್ನುತ್ತ ಈಕ್ವೆಡಾರ್ ನ ಆಸ್ಪತ್ರೆಯಲ್ಲಿರುವ ನರ್ಸ್ ಭಾವುಕರಾದರು.

ಆಸ್ಪತ್ರೆಯ ದಾರುಣ ಚಿತ್ರಣ

ಆಸ್ಪತ್ರೆಯ ದಾರುಣ ಚಿತ್ರಣ

''ಎಷ್ಟೋ ಜನ ಬಾತ್ ರೂಮ್ ನಲ್ಲೇ ಜೀವ ಬಿಟ್ಟಿದ್ದಾರೆ. ಹಾಸಿಗೆ ಇಲ್ಲದೆ ನೆಲದ ಮೇಲೆ ಮಲಗಿರುವಾಗಲೇ ಹಲವರು ಜೀವ ಕಳೆದುಕೊಂಡಿದ್ದಾರೆ. ಆರ್ಮ್ ಚೇರ್ ಗಳ ಮೇಲೂ ಕೆಲವರು ಸಾವನ್ನಪ್ಪಿದ್ದಾರೆ'' ಅಂತ ಈಕ್ವೆಡಾರ್ ಆಸ್ಪತ್ರೆಯ ದಾರುಣ ಚಿತ್ರಣವನ್ನು ಓರ್ವ ನರ್ಸ್ ವಿವರಿಸಿದ್ದಾರೆ.

ಕಾರಿಡಾರ್ ಗಳಲ್ಲೂ ಹೆಣ

ಕಾರಿಡಾರ್ ಗಳಲ್ಲೂ ಹೆಣ

ಏಪ್ರಿಲ್ ತಿಂಗಳ ಮೊದಲೆರಡು ವಾರಗಳಲ್ಲಿ ಈಕ್ವೆಡಾರ್ ನಲ್ಲಿನ Guayas ಪ್ರಾಂತ್ಯದಲ್ಲಿ 6,700 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲಿನ ಆಸ್ಪತ್ರೆಗಳ ಶವಾಗಾರದಲ್ಲಿ ಮೃತದೇಹವನ್ನು ಇರಿಸಲು ಜಾಗವಿರದೆ, ಎಮರ್ಜೆನ್ಸಿ ವಾರ್ಡ್ ಮುಂದಿನ ಕಾರಿಡಾರ್ ನಲ್ಲೇ ಸಾಲಾಗಿ ಇರಿಸಲಾಗಿತ್ತು ಎಂದು ವೈದ್ಯರು ಕೂಡ ತಿಳಿಸಿದ್ದಾರೆ.

ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!

ಕಣ್ಣೀರಿಟ್ಟ ವೈದ್ಯ

ಕಣ್ಣೀರಿಟ್ಟ ವೈದ್ಯ

''ನಾವೆಲ್ಲ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಆಸ್ಪತ್ರೆಯಿಂದ ಮನೆಗೆ ತೆರಳಿದರೂ, ನೆಮ್ಮದಿ ಇಲ್ಲ. ಮನೆಯ ಬಾತ್ ರೂಮ್ ಬಾಗಿಲು ತೆರೆದರೂ, ಮೃತದೇಹಗಳೇ ಕಣ್ಣ ಮುಂದೆ ಬರುತ್ತದೆ. ನಿದ್ದೆ ಕೂಡ ಇಲ್ಲ. ಊಟ ಸೇರಲ್ಲ. ಅಪ್ಪ, ಅಮ್ಮ, ಸಹೋದರನ ಜೊತೆಗೆ ನಾನು ಒಟ್ಟಿಗೆ ಕೂತು ಮಾತನಾಡಲೂ ಆಗುತ್ತಿಲ್ಲ'' ಎಂದು ಅಲ್ಲಿನ ವೈದ್ಯರೊಬ್ಬರು ಕಣ್ಣೀರಿಟ್ಟಿದ್ದಾರೆ.

English summary
Ecuador Hospitals morgues full, bodies pile up in Bathrooms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X