ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿವಂತ ಕ್ಯಾಥೊಲಿಕ್ ದೇಶ ಈಕ್ವೆಡಾರ್ ನಲ್ಲಿ ಸಲಿಂಗಿ ಮದುವೆಗೆ ಕೋರ್ಟ್ ಒಪ್ಪಿಗೆ

|
Google Oneindia Kannada News

ಈಕ್ವೆಡಾರ್ ನ ಸರ್ವೋಚ್ಚ ನ್ಯಾಯಾಲಯವು ಬುಧವಾರ ಸಲಿಂಗಿ ಮದುವೆಗೆ ಒಪ್ಪಿಗೆ ಸೂಚಿಸಿದೆ. ದಕ್ಷಿಣ ಅಮೆರಿಕದ ಸಾಂಪ್ರದಾಯಿಕ ಕ್ಯಾಥೊಲಿಕ್ ದೇಶದಲ್ಲಿ ಈ ತೀರ್ಪು ಮಹತ್ವದ ಮೈಲುಗಲ್ಲು ಎನಿಸಿದೆ. ಐದು ಹಾಗೂ ನಾಲ್ಕು ಮತಗಳ ನ್ಯಾಯಾಧೀಶರ ಸಮ್ಮತದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸಾಂವಿಧಾನಿಕ ಕೋರ್ಟ್ ಹೇಳಿದೆ.

ಈಕ್ವೆಡಾರ್ ನಲ್ಲಿ ಚರ್ಚ್ ಗಳು ಬಹಳ ಪ್ರಭಾವಿ. ಇದೀಗ ಅರ್ಜೆಂಟೀನಾ, ಬ್ರೆಜಿಲ್ ಹಾಗೂ ಕೊಲಂಬಿಯಾ ಜತೆಗೆ ಈಕ್ವೆಡಾರ್ ನಲ್ಲೂ ಸಲಿಂಗಿ ಮದುವೆಗೆ ಮಾನ್ಯತೆ ದೊರೆತಂತೆ ಆಗಿದೆ. ಈ ತೀರ್ಪಿನ ಅರ್ಥ ಇಷ್ಟೇ: ದೇಶದಲ್ಲಿ ಜನರ ಹಕ್ಕುಗಳಿಗೆ ಗೌರವ ಸಿಕ್ಕಿದೆ. ಯಾವುದೇ ತಾರತಮ್ಯ ಆಗಬಾರದು ಎಂಬುದರ ಸಂದೇಶ ಇದು ಎಂದು ಪಟ್ಕಾ ಫೌಂಡೇಷನ್ ನ ವಕೀಲರಾದ ಕ್ರಿಶ್ಚಿಯನ್ ಪೌಲ ಹೇಳಿದ್ದಾರೆ.

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವುಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು

ಸಲಿಂಗಿ ಮದುವೆ ಪರವಾಗಿ ನಾಲ್ವರು ನ್ಯಾಯಮೂರ್ತಿಗಳು ವಾದ ಮಂಡಿಸಿದ್ದರು. ದೇಶದ ಸಂಸತ್ ನಲ್ಲಿ ಸಂವಿಧಾನದ ಬದಲಾವಣೆ ಬಗ್ಗೆ ಚರ್ಚೆ ಆಗಬೇಕಿದೆ. ಸಾಂವಿಧಾನಿಕ ಕೋರ್ಟ್ ನ ತೀರ್ಪಿಗೆ ಬದ್ಧರಾಗಿರುವುದು ಹಾಗೂ ನಡೆದುಕೊಳ್ಳುವುದು ಕಡ್ಡಾಯ ಆಗಿರುತ್ತದೆ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

Ecuador highest court agrees same sex marriage

ಕಳೆದ ನಾಲ್ಕು ವರ್ಷದಿಂದ ಈಚೆಗೆ ಈಕ್ವೆಡಾರ್ ನಲ್ಲಿ ಸಲಿಂಗಿ ಸ್ನೇಹಕ್ಕೆ ಅವಕಾಶ ಇತ್ತು. ಸಲಿಂಗಿ ಮದುವೆ ಪರವಾಗಿ ಎರಡು ಪುರುಷ ಜೋಡಿಗಳು ಅರ್ಜಿ ಹಾಕಿಕೊಂಡಿದ್ದರು. "ಎಲ್ಲರೂ ಸಮಾನರು" ಎಂಬ ಆಧಾರದಲ್ಲಿ ಸಲಿಂಗಿ ಮದುವೆಗೆ ಒಪ್ಪಿಗೆ ಸೂಚಿಸಿರುವುದಾಗಿ ಕೋರ್ಟ್ ಹೇಳಿದೆ. ಬೇರೆ ಯಾವುದೇ ತಾರತಮ್ಯದ ಪ್ರಕರಣ ಇದ್ದರೂ ವಿಚಾರಣೆ ನಡೆಸುವುದಾಗಿ ಹೇಳಿದೆ.

English summary
Traditional and religious South American country Ecuador highest court approved same sex marriage on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X