ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ... ರೋಗಿ ಸತ್ತರೂ ಎಬೋಲಾ ವೈರಸ್ ಸಾಯಲ್ಲ

By Kiran B Hegde
|
Google Oneindia Kannada News

ವಾಷಿಂಗ್ಟನ್, ಫೆ. 14: ಇಂದು ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ರೋಗ ಎಬೋಲಾ. ವಿಜ್ಞಾನ ಎಷ್ಟೇ ಮುಂದುವರಿದರೂ ಎಬೋಲಾ ವೈರಸ್ ನಿಯಂತ್ರಿಸುವ ಬಗೆ ಅರಿಯಲು ವಿಜ್ಞಾನಿಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಎಬೋಲಾ ರೋಗಿ ಎಂದರೆ ವೈದ್ಯರೂ ದೂರ ಓಡುತ್ತಾರೆ. ಈಗ ಬಯಲಾಗಿರುವ ವಿಷಯ ಮತ್ತೂ ಆತಂಕ ಮೂಡಿಸಿದೆ.

ಏನೆಂದರೆ, ಎಬೋಲಾ ಪೀಡಿತ ವ್ಯಕ್ತಿ ಅಥವಾ ಪ್ರಾಣಿ ಮೃತಪಟ್ಟು ಒಂದು ವಾರಗಳವರೆಗೂ ದೇಹದಲ್ಲಿ ಎಬೋಲಾ ರೋಗಾಣು ಜೀವಂತವಾಗಿಯೇ ಇರುತ್ತದೆ. ಈ ದೇಹದ ಹತ್ತಿರ ಹೋದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ. [ಎಬೋಲಾಕ್ಕೆ ಆಯುರ್ವೇದ ಚಿಕಿತ್ಸೆ]

ebola

ಅಮೆರಿಕದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್)ನ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಆತಂಕಕಾರಿ ವಿಷಯ ಬಯಲಾಗಿದೆ. ತಮ್ಮ ಅಧ್ಯಯನಕ್ಕಾಗಿ ವಿಜ್ಞಾನಿಗಳು ಎಬೋಲಾ ಪೀಡಿತ ಮಂಗವೊಂದನ್ನು ಬಳಸಿಕೊಂಡಿದ್ದರು. ಈ ಮಂಗ ಸತ್ತು ಏಳು ದಿನಗಳಾದರೂ ಎಬೋಲಾ ವೈರಸ್ ದೇಹದಲ್ಲಿ ಜೀವಂತವಾಗಿಯೇ ಇತ್ತು. ಜೊತೆಗೆ ಯಾವುದೇ ಪರಿಣಾಮ ಬೀರದ ವೈರಸ್ ಆರ್‌ಎನ್ಎ ಕೂಡ 70 ದಿನಗಳವರೆಗೆ ಜೀವಂತವಾಗಿರುವುದು ಕಂಡುಬಂದಿತು. [ದೆಹಲಿಯಲ್ಲಿ ಮೊದಲ ಎಬೋಲಾ ಪ್ರಕರಣ]

ವಿಜ್ಞಾನಿಗಳ ಪ್ರಕಾರ ಗೋರಿಲ್ಲಾ ಹಾಗೂ ಮಂಗದಂತಹ ಸಸ್ತನಿಗಳಲ್ಲಿ ಎಬೋಲಾ ಸತ್ತ ಏಳು ದಿನಗಳವರೆಗೂ ಜೀವಂತವಾಗಿರುತ್ತದೆ. ಆದರೆ, ಮಾನವರ ಕುರಿತು ಯಾವುದೇ ದೃಢೀಕರಣ ನೀಡಿಲ್ಲ. ಅಮೆರಿಕದ Emerging Infectious Diseases ಎಂಬ ಜರ್ನಲ್‌ನಲ್ಲಿ ಈ ಲೇಖನ ಪ್ರಕಟವಾಗಿದೆ. [ಎಬೋಲಾ ಹತ್ತಿಕ್ಕಲಾಗದೆ ಕೈಚೆಲ್ಲಿದ ವಿಶ್ವಸಂಸ್ಥೆ]

ಜಗತ್ತಿನಲ್ಲಿ ಇಲ್ಲಿಯವರೆಗೆ 10 ಸಾವಿರಕ್ಕಿಂತ ಹೆಚ್ಚು ಜನರಿಗೆ ಎಬೋಲಾ ಸೋಂಕು ತಾಗಿದೆ. 5 ಸಾವಿರಕ್ಕಿಂತ ಹೆಚ್ಚು ಜನರು ಚಿಕಿತ್ಸೆ ಫಲಿಸದೆ ಬಲಿಯಾಗಿದ್ದಾರೆ.

English summary
Beware, transmission of the deadly Ebola virus is possible up to 7 days even after death of the infected. Scientists of the National Institutes of Health (NIH) in the US sampled deceased Ebola-infected monkeys and discovered the virus remained viable for at least seven days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X