ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬೋಲಾ ಆರ್ಭಟ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ: ವಿಶ್ವಸಂಸ್ಥೆ

By Mahesh
|
Google Oneindia Kannada News

ವಿಶ್ವಸಂಸ್ಥೆ, ಸೆ.5: ಅತ್ಯಂತ ಮಾರಕ ವೈರಾಣು ಎಬೊಲಾ ಇನ್ನೂ ಕೂಡ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾಂಕ್ರಾಮಿಕ ರೋಗ ತಡೆಗಟ್ಟಲು ಸೂಕ್ತ ವಿಧಾನವಾಗಲಿ, ಔಷಧವಾಗಲಿ ಸಿಕ್ಕಿಲ್ಲ ಎಂದು ವಿಶ್ವಸಂಸ್ಥೆ ಆರೋಗ್ಯಾಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪಿಡುಗು ನಿಯಂತ್ರಣಕ್ಕೆ ಕನಿಷ್ಠ 600 ಮಿಲಿಯನ್ ಡಾಲರ್ ಗಳ ನೆರವಿನ ಅಗತ್ಯವಿದೆ ಎಂದು ಹೇಳಿದ್ದಾರೆ.

ವಿಶ್ವದ ವಿವಿಧ ರೋಗಗಳ ಬಗ್ಗೆ ಇರುವ ಇತಿಹಾಸ ಕೆದಕಿದರೆ ಕಳೆದ 40 ವರ್ಷದ ಇತಿಹಾಸದಲ್ಲಿಯೇ ಇಂಥ ಅತಿ ದೊಡ್ಡ ಪ್ರಮಾಣದ, ಮಾರಣಾಂತಿಕವಾದ, ಇಷ್ಟೊಂದು ಸಂಕೀರ್ಣವಾದ ಕಾಯಿಲೆಯೊಂದನ್ನು ನಾವು ಕಂಡಿಲ್ಲ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಘಟನೆಯ (WHO) ಮಹಾನಿರ್ದೇಶಕ ಮಾರ್ಗರೇಟ್ ಚಾನ್ ಹೇಳಿದ್ದಾರೆ.[ಎಬೋಲಾ ವೈರಾಣು ಭೀತಿ 'ಸೆಕ್ಸ್'ಗೂ ಕೊಕ್ಕೆ]

2 ಸಾವಿರಕ್ಕೂ ಹೆಚ್ಚು ಸಾವು: ಏಕಾಏಕಿ ಜನತೆಯ ಜೀವಗಳ ಮೇಲೆ ಮಾರಣಾಂತಿಕ ದಾಳಿ ಇಟ್ಟಿರುವ ಎಬೋಲಾ ರೋಗಾಣು ನಿಯಂತ್ರಣಕ್ಕಾಗಿ ಪಶ್ಚಿಮ ಆಫ್ರಿಕಾ ರಾಷ್ಟ್ರಗಳಲ್ಲಿ ನಾವು ನಡೆಸಿದ ಎಲ್ಲಾ ಪ್ರಯತ್ನಗಳೂ ನಿರರ್ಥಕವಾಗುತ್ತಿದೆ. 3,500ಕ್ಕಿಂತಲೂ ಹೆಚ್ಚು ಜನರಲ್ಲಿ ರೋಗ ಪತ್ತೆಯಾಗಿ ರೋಗಾಣು ವ್ಯಾಪಿಸಿರುವುದು ಖಚಿತವಾಗಿದೆ ಎಂದು ಚಾನ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕನಿಷ್ಠ 600 ಮಿಲಿಯನ್ ಡಾಲರ್ ಬೇಕು

ಕನಿಷ್ಠ 600 ಮಿಲಿಯನ್ ಡಾಲರ್ ಬೇಕು

ಎಬೋಲಾ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ ರಾಷ್ಟ್ರಗಳಲ್ಲಿ ಕನಿಷ್ಠ 600 ಮಿಲಿಯನ್ ಡಾಲರ್ ನೆರವು ಬೇಕಾಗಿದೆ ಎಂದು ವಿಶ್ವಸಂಸ್ಥೆಯ ಎಬೋಲಾ ನಿಯಂತ್ರಣಾ ಸಮಿತಿಯ ಸಮನ್ವಯಕಾರ ಹಿರಿಯ ವೈದ್ಯ ಡೇವಿಡ್ ನಬಾರೋ ಹೇಳಿದ್ದಾರೆ. ಆಫ್ರಿಕಾ ಖಂಡದ ಪಶ್ಚಿಮ ರಾಷ್ಟ್ರಗಳಲ್ಲಿ ಎಬೋಲಾ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾಗಿ ಕನಿಷ್ಠ 600 ಮಿಲಿಯನ್ ಡಾಲರ್ ಗಳ ತುರ್ತು ನೆರವು ಅಗತ್ಯವಿದೆ. ಇದೊಂದು ಅತ್ಯಂತ ಸಂಕೀರ್ಣ ರೋಗ ಎಂದು ಹೇಳಿದ್ದಾರೆ.

ಎಬೋಲಾ ರೋಗಕ್ಕೆ ನಿರ್ದಿಷ್ಟ ಔಷಧ ಇನ್ನೂ ಅಲಭ್ಯ

ಎಬೋಲಾ ರೋಗಕ್ಕೆ ನಿರ್ದಿಷ್ಟ ಔಷಧ ಇನ್ನೂ ಅಲಭ್ಯ

ಎಬೋಲಾಕ್ಕೆ ಔಷಧ ಕಂಡು ಹಿಡಿಯಲಾಗಿದೆ ಎಂಬುದೆಲ್ಲ ವದಂತಿಗಳು. ಅಂತಾರಾಷ್ಟ್ರೀಯ ವೈದ್ಯಕೀಯ ಕ್ಷೇತ್ರದಲ್ಲಿ ಈ ರೋಗಕ್ಕೆ ಇನ್ನೂ ಕೂಡ ಯಾವುದೇ ನಿರ್ದಿಷ್ಟ ಔಷಧ ಕಂಡುಹಿಡಿಯಲಾಗಿಲ್ಲ. ಈ ಭಯಾನಕ ರೋಗಕ್ಕೆ ಇನ್ನೂ ಜೀವರಕ್ಷಕ ಔಷಧಿಗಳನ್ನು ಕಂಡು ಹಿಡಿಯಬೇಕಾಗಿದೆ.

ಅಮೆರಿಕಾದಲ್ಲಿ ಕೂಡ ಇತ್ತೀಚೆಗೆ ಎಬೋಲಾ ವಿರೋಧಿ ಹೋರಾಟಗಾರರೇ ಸೂಕ್ತ ಔಷಧ ಲಭ್ಯವಾಗದೆ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಕಾಯಿಲೆಯ ನಿಯಂತ್ರಣ ಹೇಗೆ ಸಾಧ್ಯ ಎಂದು ಆಫ್ರಿಕಾದಲ್ಲಿನ ವೈದ್ಯರು ಕೈಚೆಲ್ಲಿದ್ದಾರೆ.

ಇಡೀ ವಿಶ್ವವೇ ಇದರ ವಿರುದ್ಧ ಹೋರಾಡಬೇಕಾಗಿದೆ

ಇಡೀ ವಿಶ್ವವೇ ಇದರ ವಿರುದ್ಧ ಹೋರಾಡಬೇಕಾಗಿದೆ

ಎಬೋಲಾ ಆಫ್ರಿಕಾ ರಾಷ್ಟ್ರಗಳಿಗಷ್ಟೇ ಸೀಮಿತವಾಗಿಲ್ಲ. ಇಡೀ ವಿಶ್ವವೇ ಇದರ ವಿರುದ್ಧ ಹೋರಾಡಬೇಕಾಗಿದೆ. ರೋಗ ನಿಯಂತ್ರಣ ಸಾಧ್ಯವಾಗದ ಕಾರಣ. ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಈ ಪಿಡುಗು ತೊಲಗಿಸಲು ಸಾಂಘಿಕ ಹೋರಾಟ ಅಗತ್ಯ ಎಂದು ಮಾರ್ಗರೇಟ್ ಚಾನ್ ಮನವಿ ಮಾಡಿದ್ದಾರೆ.

ಅಫ್ರಿಕಾಕ್ಕೆ ಘೋರ ಶಾಪವಾಗಿದೆ

ಅಫ್ರಿಕಾಕ್ಕೆ ಘೋರ ಶಾಪವಾಗಿದೆ

ಎಬೋಲಾ ಪೀಡಿತ ಪಶ್ಚಿಮ ಆಫ್ರಿಕಾ ರಾಷ್ಟ್ರಗಳಿಗೆ ಎಲ್ಲಾ ಕಡೆಯಿಂದಲೂ ನಾಗರಿಕ ವಿಮಾನ ಯಾನ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ, ಪಶ್ಚಿಮ ಆಫ್ರಿಕಾಕ್ಕೆ ಘೋರ ಶಾಪವಾಗಿ ಪರಿಣಮಿಸಿದೆ. ಅಗತ್ಯ ಸಿಬ್ಬಂದಿ, ಔಷಧಿ ಸಾಮಗ್ರಿಗಳು, ಸೇವೆಗಳನ್ನು ಸೂಕ್ತ ಸಮಯಕ್ಕೆ ಒದಗಿಸಲಾಗುತ್ತಿಲ್ಲ. ಇದೊಂದು ಭಾರೀ ಸಮಸ್ಯೆಯಾಗಿದೆ ಎಂದು ಚಾನ್ ಬೇಸರ ವ್ಯಕ್ತಪಡಿಸಿದ್ದಾರೆ.

English summary
The Ebola virus outbreak in West Africa is racing ahead of efforts to control it and at least $600 million is needed to get the unprecedented epidemic under control, UN health officials said Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X