ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಡತೆಗಳನ್ನು ತಿಂದ್ರೆ, ಕೊರೊನಾವೈರಸ್ ಹೋಗುತ್ತೆ ಎಂದ ಪಾಕಿಸ್ತಾನದ ಸಂಸದ..!

|
Google Oneindia Kannada News

ಇಸ್ಲಮಾಬಾದ್, ಜೂನ್ 25: ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಇಡೀ ವಿಶ್ವವೇ ಔಷಧಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಸಂಶೋಧನೆಯನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಮಿಡತೆಗಳನ್ನು ತಿನ್ನುವುದರಿಂದ ಕೊರೊನಾವೈರಸ್ ಗುಣಮುಖವಾಗುತ್ತದೆ ಎಂದು ಪಾಕಿಸ್ತಾನದ ಸಂಸದ ಹೇಳಿದ್ದಾರೆ.

ಮಿಡತೆ ತಿಂದರೆ ಕೊರೊನಾ ಸೋಂಕಿಗೆ ತುತ್ತಾಗಿರುವ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಎಂದು ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖಂಡ ರಿಯಾಜ್ ಫತ್ಯಾನ ಹೇಳಿದ್ದಾರೆ.

ಒಳ್ಳೆ ಸುದ್ದಿ: ಭಾರತದಲ್ಲಿ ಕೊವಿಡ್ 19ನಿಂದ ಗುಣಮುಖರಾದವರ ಸಂಖ್ಯೆ ಏರಿಕೆ ಒಳ್ಳೆ ಸುದ್ದಿ: ಭಾರತದಲ್ಲಿ ಕೊವಿಡ್ 19ನಿಂದ ಗುಣಮುಖರಾದವರ ಸಂಖ್ಯೆ ಏರಿಕೆ

ಸಂಸದರಾಗಿರುವ ರಿಯಾಜ್‌ ಸಂಸತ್ತಿನಲ್ಲಿ ಈ ಕುರಿತು ಚರ್ಚಿಸುತ್ತಾ ''ಮಿಡತೆಗಳನ್ನು ಸೇವಿಸುವುದರಿಂದ ಕೊರೊನಾವೈರಸ್ ಗುಣಪಡಿಸಬಹುದು. ಸಂಶೋಧನೆ ಮಾಡಬಹುದಾದರೆ ಮತ್ತು ಮಿಡತೆಗಳು (ಟಿಡ್ಡಿ) ತಿನ್ನುವುದರಿಂದ ಕೊರೊನಾವೈರಸ್ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ ಎಂಬುದು ನಿಜವೆಂದು ಸಾಬೀತಾದರೆ, ಪಾಕಿಸ್ತಾನದ ಜನರು ಸ್ವತಃ ಮಿಡತೆಗಳ ಸಮಸ್ಯೆಯನ್ನು ಪರಿಹರಿಸುತ್ತಾರೆ ಮತ್ತು ಸರ್ಕಾರವು ಹೆಚ್ಚಿನದನ್ನು ಮಾಡಬೇಕಾಗಿಲ್ಲ "ಎಂದು ಫತ್ಯಾನಾ ಸಂಸತ್ತಿನಲ್ಲಿ ಹೇಳಿದರು.

Eating Locust Can Cure Coronavirus:Pakistan MP Riyaz Fatyana Urges Parliment

ಸಂಸದ ರಿಯಾಜ್ ಮಾತನಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 56,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

English summary
Pakistan's Member of Parliament Riaz Fatyana said Coronavirus can be cured by eating locusts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X