ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಅಂಡಮಾನ್ ಸಮುದ್ರದಲ್ಲಿ ಸರಣಿ ಭೂಕಂಪನ; 5ರಷ್ಟು ತೀವ್ರತೆ

|
Google Oneindia Kannada News

ಅಂಡಮಾನ್, ಜುಲೈ 5: ಅಂಡಮಾನ್ ಸಮುದ್ರದಲ್ಲಿ ಸಂಭವಿಸಿರುವ ಸರಣಿ ಭೂಕಂಪನದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ತತ್ತರಿಸಿ ಹೋಗಿವೆ. ಅವಳಿ ದ್ವೀಪಗಳಲ್ಲಿ ಜುಲೈ 4 ಮತ್ತು ಜುಲೈ 5ರಂದು ಸರಣಿ ಭೂಕಂಪನ ಸಂಭವಿಸಿದೆ.

ಮಂಗಳವಾರ ಬೆಳಗ್ಗೆ 5:57ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯು ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಆದರೆ ಭೂಕಂಪನದಿಂದ ಯಾವುದೇ ಸಾವು-ನೋವು ಮತ್ತು ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.

Breaking: ಅಫ್ಘಾನಿಸ್ತಾನದಲ್ಲಿ ಭೂಕಂಪ, 130 ಜನರ ಸಾವು Breaking: ಅಫ್ಘಾನಿಸ್ತಾನದಲ್ಲಿ ಭೂಕಂಪ, 130 ಜನರ ಸಾವು

ಜುಲೈ 5ರ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ರಾಜಧಾನಿ ಪೋರ್ಟ್ ಬ್ಲೇರ್‌ನಿಂದ 215 ಕಿ. ಮೀ. ದೂರದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

Earthquakes in Andaman Sea jolts Andaman and Nicobar Islands

ಸೋಮವಾರ ಸಂಜೆಯೂ ಭೂಕಂಪನ: ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಸೋಮವಾರ ಸಂಜೆ 5.18ರ ವೇಳೆಯಲ್ಲೂ ದ್ವೀಪಗಳ ಸುತ್ತಲಿನ ಪ್ರದೇಶದಲ್ಲಿ ಮೊದಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ. ಕೆಲಹೊತ್ತಿನ ನಂತರದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ವರದಿಯಾಗಿದೆ.

Recommended Video

Zameer Ahmed ಅವರಿಗೆ ಸಂಬಂಧಿಸಿದ 5 ಜಾಗಗಳ ಮೇಲೆ ACB ದಾಳಿ | *Politics | OneIndia Kannada

English summary
Earthquakes in Andaman Sea jolts Andaman and Nicobar Islands. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X