ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಕಿಯೋದಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ ಸದ್ಯಕ್ಕಿಲ್ಲ

|
Google Oneindia Kannada News

ಟೋಕಿಯಾ, ಜೂನ್ 1: ಜಪಾನ್ ರಾಜಧಾನಿ ಟೋಕಿಯಾದಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 5.8 ದಾಖಲಾಗಿದ್ದು, ಈಶಾನ್ಯ ಟೋಕಿಯೋದಲ್ಲಿ ಕೇಂದ್ರ ಬಿಂದು ಕಂಡು ಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಟೋಕಿಯಾದಲ್ಲಿ ಭೂಕಂಪದ ಜೊತೆಗೆ ಸುನಾಮಿ ಎಚ್ಚರಿಕೆ ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಸೋಮವಾರದ ಭೂಕಂಪದ ಜೊತೆಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ. ಹೊಕೈಡು ದ್ವೀಪದ ಈಶಾನ್ಯ ಭಾಗದಲ್ಲಿ ಭೂಕಂಪ ಸಂಭವಿಸಿದೆ, ಸದ್ಯಕ್ಕೆ ಸುನಾಮಿ ಭೀತಿಯಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

Earthquake struck Northeast of Tokyo, Japan

ಹೊಕೈಡು, ಕುಶಿರೋ ಹಾಗೂ ನೆಮುರೋ ಭಾಗದಲ್ಲಿ ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ಹೇಳಿದೆ.

30 ಮೀಟರ್ ದೈತ್ಯ ಅಲೆಯ ಅಪ್ಪಳಿಸುವ ಭೀತಿಯಲ್ಲಿದೆ ಈ ಅಣು ಸ್ಥಾವರ30 ಮೀಟರ್ ದೈತ್ಯ ಅಲೆಯ ಅಪ್ಪಳಿಸುವ ಭೀತಿಯಲ್ಲಿದೆ ಈ ಅಣು ಸ್ಥಾವರ

2011ರ ಭೂಕಂಪ, ಸುನಾಮಿ ಹೊಡೆತದಿಂದ ಇನ್ನು ಚೇತರಿಸಿಕೊಳ್ಳದ ಫುಕುಶಿಮಾ ದೈಚಿ ಘಟಕ ಇನ್ನೊಂದು ಆಘಾತವನ್ನು ಎದುರಿಸಲು ಸಿದ್ಧವಾಗಬೇಕಿದೆ. ರಿಕ್ಟರ್ ಮಾಪಕದಲ್ಲಿ 9 ರಷ್ಟು ತೀವ್ರವಾದ ಭೂಕಂಪ ಹಾಗೂ 30 ಮೀಟರ್ ಎತ್ತರ ದೈತ್ಯ ಅಲೆಗಳು ಹೊಕೈಡುವನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎಂಬ ಎಚ್ಚರಿಕೆಯನ್ನು ಏಪ್ರಿಲ್ ತಿಂಗಳಿನಲ್ಲಿ ನೀಡಲಾಗಿತ್ತು.

ಹೊಕೈಡು, ಐವಾತೆ, ಮಿಯಾಗಿ, ಫುಕುಶಿಮಾ, ಐಬಾರಾಕ್, ಅಯೋಮೊರಿ ಹಾಗೂ ಚಿಬಾ ಪ್ರದೇಶಗಳಲ್ಲಿ ಭೂಕಂಪ ಹಾಗೂ ಸುನಾಮಿ ತೀವ್ರತೆ ಹೆಚ್ಚಾಗಿ ಬಾಧಿಸಲಿದೆ ಎಂದು ಸಿಸ್ಮೋಲಾಜಿಸ್ಟ್ ಕೆಂಜಿ ಸತಾಕೆ ಹೇಳಿದ್ದಾರೆ.

English summary
An earthquake measuring 5.8 on the richter Scale struck Northeast of Tokyo, Japan on Monday(June 1).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X