• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಲಿಯ ಅಂಟಾರ್ಕ್ಟಿಕಾ ಕರಾವಳಿಯಲ್ಲಿ ಭಾರಿ ಭೂಕಂಪ, ಸುನಾಮಿ ಅಲರ್ಟ್

|

ಸ್ಯಾಂಟಿಯಾಗೋ, ಜನವರಿ 24: ಚಿಲಿಯ ಅಂಟಾರ್ಕ್ಟಿಕಾ ಕರಾವಳಿಯಲ್ಲಿ ಶನಿವಾರದಂದು ಭಾರಿ ಪ್ರಮಾಣದ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 7.0 ತೀವ್ರತೆ ಕಂಡು ಬಂದಿದೆ. ಚಿಲಿಯ ಎಡ್ವರ್ಡೊ ಫ್ರೀ ಬೇಸ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಡ್ವರ್ಡೊ ಫ್ರೀ ಬೇಸ್‌ ನಿಂದ ಪೂರ್ವಕ್ಕೆ 210 ಕಿಲೋಮೀಟರ್ (130 ಮೈಲಿ) ದೂರದಲ್ಲಿ ಶನಿವಾರ ರಾತ್ರಿ 8: 36 ಕ್ಕೆ (23:36 ಜಿಎಂಟಿ) 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಚಿಲಿಯ ರಾಷ್ಟ್ರೀಯ ತುರ್ತು ಕಚೇರಿ (Onemi) ಎಚ್ಚರಿಕೆ ನೀಡಿದೆ.

ದುರಾಸೆಗೆ ಬಲಿಯಾಗುತ್ತಿದೆ ಭೂಮಿ, ಪೆಂಗ್ವಿನ್ ಸಂತತಿಯೂ ಸರ್ವನಾಶದುರಾಸೆಗೆ ಬಲಿಯಾಗುತ್ತಿದೆ ಭೂಮಿ, ಪೆಂಗ್ವಿನ್ ಸಂತತಿಯೂ ಸರ್ವನಾಶ

ಅಂಟಾರ್ಕ್ಟಿಕ್‌ ಕರಾವಳಿ ಪ್ರದೇಶದಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಚಿಲಿಯ ವಾಯುನೆಲೆಯ ಸುತ್ತಾ ಹಳ್ಳಿ, ಆಸ್ಪತ್ರೆ, ಶಾಲೆ, ಬ್ಯಾಂಕ್, ಅಂಚೆ ಕಚೇರಿ ಮತ್ತು ಪ್ರಾರ್ಥನಾ ಮಂದಿರಗಳಿದ್ದು, ಅಂಟಾರ್ಕ್ಟಿಕಾದಲ್ಲಿ ದೇಶದ ಅತಿದೊಡ್ಡ ಜನನಿಬಿಡ ಪ್ರದೇಶ ಎನಿಸಿಕೊಂಡಿದೆ. ಬೇಸಿಗೆಯಲ್ಲಿ ಗರಿಷ್ಠ ಜನಸಂಖ್ಯೆ 150 ಜನ, ಮತ್ತು ಚಳಿಗಾಲದಲ್ಲಿ ಸರಾಸರಿ ಜನಸಂಖ್ಯೆ 80 ದಾಟಲ್ಲ.

ಇದಲ್ಲದೆ, ಸ್ಯಾಂಟಿಯಾಗೊ ಬಳಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ, ಆದರೆ ಯಾವುದೇ ಹಾನಿ ಅಥವಾ ನಂತರದ ಪರಿಣಾಮ ಸಂಭವಿಸಿಲ್ಲ ಎಂದು ಒನೆಮಿ ಹೇಳಿದೆ. ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಚಿಲಿ ಕೂಡಾ ಒಂದಾಗಿದೆ. ಫೆಬ್ರವರಿ 27, 2010 ರಂದು ಕಾನ್ಸೆಪ್ಷನ್ ನಗರದಲ್ಲಿ ರಿಕ್ಟರ್ ಮಾಪಕದಲಿ 8.8-ಪ್ರಮಾಣದ ಭೂಕಂಪದಿಂದಾಗಿ 500 ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ವಾಲ್ಡಿವಿಯಾ ನಗರದಲ್ಲಿ 9.6 ತೀವ್ರತೆಯ ಭೂಕಂಪ ಸಂಭವಿಸಿ, 60 ವರ್ಷಗಳು ಕಳೆದಿದ್ದು, ಇಲ್ಲಿ ತನಕದ ಅತ್ಯಂತ ಪ್ರಬಲ ಕಂಪನ ಎನಿಸಿಕೊಂಡಿದೆ.

English summary
A 7.0-magnitude earthquake struck Saturday off the coast of Antarctica, with authorities issuing a tsunami warning for Chile's Eduardo Frei base.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X