ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನಿನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಭೂಕಂಪ

|
Google Oneindia Kannada News

ತೆಹ್ರಾನ್, ಜನವರಿ 8: ಇರಾನಿನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಬುಧವಾರ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲಾಗಿದೆ. ಈಗಾಗಲೇ ಇರಾನ್ ಅಮೆರಿಕದ ಸೇನಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಇನ್ನೊಂದೆಡೆ ಟೆಹ್ರಾನ್‌ನಿಂದ ಹೊರಟಿದ್ದ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿ 180 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಕೊಯ್ನಾ ಜಲಾಶಯದ ಸಮೀಪ ಭೂಕಂಪ: ಕರ್ನಾಟಕಕ್ಕೂ ಆಪತ್ತು ಕೊಯ್ನಾ ಜಲಾಶಯದ ಸಮೀಪ ಭೂಕಂಪ: ಕರ್ನಾಟಕಕ್ಕೂ ಆಪತ್ತು

ಇದೀಗ ಭೂಕಂಪವೂ ಕೂಡ ಸಂಭವಿಸಿದ್ದು, ಇರಾನ್ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಭೂಕಂಪವು ಬೊರಝಾನ್ ನಗರದಿಂದ ಆಗ್ನೇಯಕ್ಕೆ 10 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಸಂಭವಿಸಿದೆ.

Earthquake Near Nuclear Plant In Iran

ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಬುಶೆಹರ್ ವಿದ್ಯುತ್ ಸ್ಥಾವರವನ್ನು ರಷ್ಯ ನಿರ್ಮಿಸಿದೆ. ಸ್ಥಾವರವನ್ನು 2013 ಸೆಪ್ಟೆಂಬರ್ ನಲ್ಲಿ ಇರಾನ್‌ಗೆ ಹಸ್ತಾಂತರಿಸಲಾಗಿತ್ತು.

English summary
A natural, 4.9-magnitude earthquake struck Iran near the Bushehr nuclear plant Wednesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X