ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್ ನಲ್ಲಿ ಪ್ರಬಲ ಭೂಕಂಪ

By Srinath
|
Google Oneindia Kannada News

Earthquake jolts New Zealand, no damage reported
ವೆಲ್ಲಿಂಗ್ಟನ್, ಜ. 20: ನ್ಯೂಜಿಲೆಂಡ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸೋಮವಾರ ಮಧ್ಯಾಹ್ನ 3.52ರಲ್ಲಿ (0252 GMT) ರಿಕ್ಟರ್ ಮಾಪಕದಲ್ಲಿ 6.3 ಪ್ರಮಾಣದ ಭೂಕಂಪ ಸಂಭವಿಸಿದೆ. ಇದರಿಂದ ಕಟ್ಟಡಗಳು ಕಂಪಿಸಿದ್ದು, ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಿದೆ.

ಆದರೆ ಯಾವುದೇ ಪ್ರಾಣಾಪಾತಯದ ವರದಿಗಳು ತಕ್ಷಣಕ್ಕೆ ವರದಿಯಾಗಿಲ್ಲ. ರಾಜಧಾನಿ ವೆಲ್ಲಿಂಗ್ಟನ್ ನಗರದಿಂದ ಮೂಡಣ ದಿಕ್ಕಿನಲ್ಲಿ 115 ಕಿಮೀ ದೂರದಲ್ಲಿರುವ ಉತ್ತರ ದ್ವೀಪ ಪ್ರದೇಶದಲ್ಲಿ ಭೂಕಂಪ ಕೇಂದ್ರ ಸ್ಥಾಪಿತವಾಗಿತ್ತು ಎಂದು US Geological Survey ವರದಿ ಮಾಡಿದೆ. ( ಚೀನಾ: ಮದ್ವೆ ಮನೆಯಿಂದ ಓಡ್ಹೋದ ವಧು ಮಾಡಿದ್ದೇನು? )

ಮೊದಲ ಭೂಕಂಪನದ ನಂತರ ಅನೇಕ ಮರುಕಂಪನಗಳು ಉತ್ತರ ಮತ್ತು ದಕ್ಷಿಣ ದ್ವೀಪಗಳಲ್ಲಿ ಉಂಟಾಗಿವೆ. ನ್ಯೂಜಿಲೆಂಡ್ ನ GeoNet ಪ್ರಕಾರ ಭೂಕಂಪ 6.2 ಪ್ರಮಾಣದಲ್ಲಿತ್ತು. ಆದರೆ ಇದು 10 ಕಿಮೀ ಆಳಕ್ಕೆ ಮಾತ್ರ ಸೀಮಿತಾವಗಿತ್ತು. ಹಾಗಾಗಿ ಹೆಚ್ಚಿನ ಅನಾಹುತವೇನೂ ಆಗಿಲ್ಲವೆಂದು ತಿಳಿದುಬಂದಿದೆ. Eketahuna ಪಟ್ಟಣದಲ್ಲಿ ಕೆಲವು ಮನೆಗಳು ಬಿರುಕುಬಿಟ್ಟಿವೆ. ಕಿಟಕಿಗಳು ಛಿದ್ರಗೊಂಡಿವೆ.

ಹಾಗೆಯೇ ವೆಲ್ಲಿಂಗ್ಟನ್ ವಿಮಾನ ನಿಲ್ದಾಣದಲ್ಲಿ ತೂಗುಹಾಕಲಾಗಿದ್ದ ಬೃಹತ್ ಮಾದರಿಯೊಂದು (Hobbit ಸಿನಿಮಾ ಪ್ರಚಾರಕ್ಕಾಗಿ ಬಳಸಲಾಗಿದ್ದ ದೊಡ್ಡ ಹದ್ದು ) ಕೆಳಗೆ ಬಿದ್ದಿದೆ.

ಆದರೆ ನ್ಯೂಜಿಲೆಂಡ್ ನಲ್ಲಿ ಭೂಕಂಪ ಸಂಭವಿಸುವುದು ಸಾಮಾನ್ಯದ ಸಂಗತಿಯಾಗಿದೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. ವರ್ಷಕ್ಕೆ 15,000 ಕಂಪನಗಳು ಉಂಟಾಗುತ್ತಿರುತ್ತವೆ. ಆದರೆ 2011ರಲ್ಲಿ ಕ್ರೈಸ್ಟ್ ಚರ್ಚ್ ನಗರದ ದಕ್ಷಿಣ ದ್ವೀಪದಲ್ಲಿ 6.3 ಪ್ರಮಾಣದ ಭೂಕಂಪವಾದಾಗ 185 ಮಂದಿ ಅಸುನೀಗಿದ್ದರು.

English summary
Earthquake jolts New Zealand, no damage reported. A powerful 6.3-magnitude earthquake shook New Zealand on Monday, jolting buildings and halting train services. However,no immediate reports of major damage or injuries. The quake, which struck at 3:52pm (0252 GMT), had its epicentre in the North Island about 115 kilometres (71 miles) northeast of the capital city Wellington, the US Geological Survey said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X