• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ವೀಟ್ಸ್ : ಭೂಕಂಪಕ್ಕೆ ತತ್ತರಿಸಿದ ಕ್ರಿಕೆಟರ್ ಸೆಹ್ವಾಗ್

By Mahesh
|

ನವದೆಹಲಿ, ಅ.26: ಉತ್ತರ ಪಾಕಿಸ್ತಾನದಲ್ಲಿ ಭೂಕಂಪವಾದ ಪರಿಣಾಮ ಉತ್ತರ ಭಾರತದಲ್ಲಿ ಭಾರಿ ಕಂಪನ ಉಂಟಾಗಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಭಾಗದ ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿ ಕೇಂದ್ರ ಸ್ಥಾನವಾಗಿರುವ ಈ ಭೂಕಂಪದ ತೀವ್ರತೆ ರಿಕ್ಚರ್ ಮಾಪಕದಲ್ಲಿ 7.7ರಷ್ಟಿದೆ. ಭೂಕಂಪದ ಅನುಭವಗಳು, ಮುಂದೇನು ಮಾಡಬೇಕು ಎಂಬುದರ ಬಗ್ಗೆ ಕ್ರಿಕೆಟರ್ ಸೆಹ್ವಾಗ್ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ.

ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ (after shock)ದ ಬಗ್ಗೆ ಅನೇಕ ಸಂದೇಶಗಳು ಹರಿದು ಬರುತ್ತಿವೆ. ಹಿಂದೂ ಕುಶ್ ಪರ್ವತಪ್ರದೇಶದಲ್ಲಿ ಹಿಮಪಾತದಿಂದ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸುಮಾರು ನಾಲ್ಕು ಮಂದಿ ಸಾವು ಹಾಗೂ 20 ಮಂದಿಗೆ ಗಾಯವಾಗಿರುವ ಪ್ರಾಥಮಿಕ ವರದಿ ಸ್ವಾತ್ ಪ್ರದೇಶದಿಂದ ಬಂದಿದೆ.[ಬೆಂಗಳೂರು ಭೂಕಂಪದ ಆತಂಕದಿಂದ ಮುಕ್ತವಲ್ಲ!]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Earthquake. Sitting outside n having lunch. सब हिल रहा है भाई

Posted by Virender Sehwag on26 October 2015

ದೆಹಲಿಯಲ್ಲಿರುವ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಅವರು ಸುಮಾರು 2.30ರ ನಂತರ ಭೂಕಂಪದ ಅನುಭವವನ್ನು ಹಂಚಿಕೊಂಡಿದ್ದಾರೆ. ಊಟ ಮಾಡುತ್ತಾ ಕುಳಿತ್ತಿದ್ದೆ. ಎಲ್ಲವೂ ಅಲ್ಲಾಡುತ್ತಿದೆ ಎಂದಿದ್ದಾರೆ. [ಭೂಕಂಪದ ಬಗ್ಗೆ ಇನ್ನಷ್ಟು, ಅದರ ಆಳ ಮತ್ತು ಅಗಲ]

ಉತ್ತರ ಭಾರತದಲ್ಲಿ ಜನರು ಕಚೇರಿ ಹಾಗೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ದೆಹಲಿ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಮುಂಬೈ, ಕೋಲ್ಕತ್ತ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವೆಡೆ ಭೂಮಿ ಕಂಪನದ ಅನುಭವವಾಗಿದೆ.

ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ

ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ

ಭೂಕಂಪದ ತೀವ್ರತೆಗಿಂತ ನಂತರದ ಪರಿಣಾಮ (after shock)ದ ಬಗ್ಗೆ ಅನೇಕ ಸಂದೇಶಗಳು ಹರಿದು ಬರುತ್ತಿವೆ. ಹಿಂದೂ ಕುಶ್ ಪರ್ವತಪ್ರದೇಶದಲ್ಲಿ ಹಿಮಪಾತದಿಂದ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಸುಮಾರು ನಾಲ್ಕು ಮಂದಿ ಸಾವು ಹಾಗೂ 20 ಮಂದಿಗೆ ಗಾಯವಾಗಿರುವ ಪ್ರಾಥಮಿಕ ವರದಿ ಸ್ವಾತ್ ಪ್ರದೇಶದಿಂದ ಬಂದಿದೆ.

ಸೆಹ್ವಾಗ್ ಅವರು ಎಲ್ಲಿದ್ದರೂ ಭೂಕಂಪ

ಸೆಹ್ವಾಗ್ ಅವರು ಮೈದಾನದಲ್ಲಿದ್ದಾಗ ಬೌಲರ್ ಗಳಿಗೆ ಭೂಕಂಪದ ಅನುಭವವಾಗುತ್ತಿತ್ತು ಎಂದು ಟ್ವೀಟ್.

ನಿಮ್ಮ ಅನುಭವವನ್ನು ಟ್ವೀಟ್ ಮಾಡಿ

ನಿಮ್ಮ ಅನುಭವವನ್ನು ಟ್ವೀಟ್ ಮಾಡಿ, ದೆಹಲಿ, ಕಾಶ್ಮೀರ, ಹರ್ಯಾಣ ಹಾಗೂ ಪಂಜಾಬ್ ನಿಂದ ಟ್ವೀಟ್ ಗಳು ಹೀಗಿವೆ. ನಿಮ್ಮ ಅನುಭವವನ್ನು ಟ್ವೀಟ್ ಮಾಡಿ

ಸ್ವಾತ್ ನಲ್ಲಿ ಕಂಪನ, ಮರು ಕಂಪನ

ಸ್ವಾತ್ ನಲ್ಲಿ ಕಂಪನ, ಮರು ಕಂಪನ ಪಾಕಿಸ್ತಾನದಲ್ಲಿ 10 ಜನ ಸಾವು ಹಾಗೂ 20 ಜನಕ್ಕೆ ಗಾಯವಾಗಿದೆ.

ಭೂಕಂಪಕ್ಕೆ ತತ್ತರಿಸಿದ ಜನರು

ಉತ್ತರ ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಭೂಕಂಪಕ್ಕೆ ತತ್ತರಿಸಿದ ಜನರು.

ಭೂಕಂಪ ಆದಾಗ ಏನು ಮಾಡಬೇಕು

ಭೂಕಂಪ ಆದಾಗ ಏನು ಮಾಡಬೇಕು? ಟ್ವೀಟ್ ಮಾಡುವುದನ್ನು ಬಿಟ್ಟು ಕಟ್ಟಡದ ಹೊರಗೆ ಬನ್ನಿ.

ಭೂಕಂಪದ ವಿವಿಧ ಮೂಲಗಳಿಂದ ಟ್ವೀಟ್ಸ್

ಭೂಕಂಪದ ವಿವಿಧ ಮೂಲಗಳಿಂದ ಟ್ವೀಟ್ಸ್

ದೆಹಲಿಯ ಮಾಧ್ಯಮ ಕಚೇರಿಯಲ್ಲಿ ಕಂಪನ

ದೆಹಲಿಯ ಮಾಧ್ಯಮ ಕಚೇರಿಯಲ್ಲಿ ಕಂಪನದ ಅನುಭವದ ವಿಡಿಯೋ ತುಣುಕು

ಲೂಧಿಯಾನದಿಂದ ಬಂದ ಕಂಪನ ವಿಡಿಯೋ

ಲೂಧಿಯಾನದಿಂದ ಬಂದ ಕಂಪನ ವಿಡಿಯೋ ತುಣುಕು, ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ಭಾರತವನ್ನು ಕಂಪನದಿಂದ ಕಾಪಾಡಿತೆ?

English summary
A massive earthquake measuring 7.7 magnitude on Monday, Oct 26, shook Pakistan, Afghanistan and parts of north India, including the national capital New Delhi and NCR region, triggering massive panic. Tweet your images and videos like cricketer Virender Sehwag who posted about his experience on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more