ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮಾಣು ಶಸ್ತ್ರ ಪರೀಕ್ಷಿಸಿದ ಉತ್ತರ ಕೊರಿಯಾದಲ್ಲಿ ಭೂಕಂಪ

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 24: ಉತ್ತರ ಕೊರಿಯಾದಲ್ಲಿ ಶನಿವಾರ ಬೆಳಗ್ಗೆ ಸುಮಾರು 8: 42ರ ಸುಮಾರಿಗೆ ಸಂಭವಿಸಿರುವ ಭೂಕಂಪ, ಯಾವುದೇ ಮಹಾ ಸ್ಫೋಟದಿಂದ ಉಂಟಾಗಿದೆ ಎಂದು ಚೀನಾ ಅನುಮಾನ ವ್ಯಕ್ತಪಡಿಸಿದೆ.

ಜಮ್ಮು ಕಾಶ್ಮೀರದಲ್ಲಿ ಲಘುಭೂಕಂಪ: 4.5 ತೀವ್ರತೆ ದಾಖಲು ಜಮ್ಮು ಕಾಶ್ಮೀರದಲ್ಲಿ ಲಘುಭೂಕಂಪ: 4.5 ತೀವ್ರತೆ ದಾಖಲು

ಉತ್ತರ ಕೊರಿಯಾದ ಹ್ಯಾಂಮ್ ಗ್ಯೊಂಗ್ ಪ್ರಾಂತ್ಯದ ಉತ್ತರ ಭಾಗದಲ್ಲಿ ಶನಿವಾರ ಬೆಳಗ್ಗೆ ಲಘು ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 3.4ರಷ್ಟಿತ್ತು. ಇತರ ಕೇಂದ್ರವು ಈ ಪ್ರಾಂತ್ಯಕ್ಕೆ ಹತ್ತಿರದಲ್ಲೇ ಇದೆ. ಸೆ. 3ರಂದು ಸಂಭವಿಸಿದ್ದ ಲಘು ಭೂಕಂಪದ ಕೇಂದ್ರಬಿಂದುವೂ ಇದೇ ಆಗಿತ್ತು.

Earthquake in North Korea not a natural calamity says China

ಕುತೂಹಲದ ವಿಚಾರವೆಂದರೆ, ಇದೇ ಪ್ರಾಂತ್ಯದ ಬಳಿಯೇ ಉತ್ತರ ಕೊರಿಯಾ ಸರ್ಕಾರದ ಪರಮಾಣು ಶಸ್ತ್ರಾಸ್ತ್ರ ಪರೀಕ್ಷಾ ಕೇಂದ್ರವೂ ಇದೆ. ಅಲ್ಲದೆ, ಕಳೆದ ಕೆಲವಾರು ದಿನಗಳಿಂದ ಉತ್ತರ ಕೊರಿಯಾವು ಜಪಾನ್ ವಿರುದ್ಧ ಅಣು ಬಾಂಬ್ ಗಳನ್ನು ಪರೀಕ್ಷೆಯನ್ನು ನಡೆಸುತ್ತಲೇ ಇದೆ.

ಹಾಗಾಗಿಯೇ, ಚೀನಾ, ಈ ಎರಡೂ ಭೂಕಂಪಗಳು ನೈಸರ್ಗಿಕ ಪ್ರಕೋಪಗಳಲ್ಲ. ಇದು ಉತ್ತರ ಕೊರಿಯಾದಲ್ಲಿ ನಡೆಸಲಾಗಿರುವ ಯಾವುದೋ ಮಹಾ ಸ್ಫೋಟದ ಪರಿಣಾಮವೆಂದು ಹೇಳಿದೆ.

English summary
China's earthquake administration says a minor earthquake detected in North Korea, was due to a explosion, raising fears the communist nation had tested nuclear bomb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X