ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನಗೆ ಹೃದಯಾಘಾತವಾಗುತ್ತದೆ ಎಂದು ನಾನು ಭಾವಿಸಿದೆ' ಮೆಕ್ಸಿಕೋ ಭೂಕಂಪನದ ಬಗ್ಗೆ ಸ್ಥಳೀಯರ ಹೇಳಿಕೆ

|
Google Oneindia Kannada News

ಸೋಮವಾರದಂದು ಪಶ್ಚಿಮ ಮೆಕ್ಸಿಕೋದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ವಿನಾಶಕಾರಿ ಭೂಕಂಪನ ಮೆಕ್ಸಿಕೋ ನಗರದಲ್ಲಿ ನೂರಾರು ಕಿಲೋಮೀಟರ್ ದೂರದಲ್ಲಿ ಭಯಭೀತಿಯನ್ನು ಹುಟ್ಟು ಹಾಕಿದೆ. ಸೆಪ್ಟೆಂಬರ್ 19 ರಂದು ಸಂಭವಿಸಿದ ಭೂಕಂಪ ಲ್ಯಾಟಿನ್ ಅಮೇರಿಕನ್ ದೇಶದಲ್ಲಿ ಸಂಭವಿಸಿದ ಮೂರನೇ ಅತಿ ದೊಡ್ಡ ಭೂಕಂಪನವಾಗಿದೆ.

ರಾಷ್ಟ್ರೀಯ ಭೂಕಂಪನ ಸಂಸ್ಥೆ ಪ್ರಕಾರ 7.7 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಕಟ್ಟಡಗಳು ಅಲುಗಾಡುತ್ತಿದ್ದಂತೆ ಜನರು ರಸ್ತೆಗಳಿಗೆ ಓಡಿ ಬಂದಿದ್ದಾರೆ. ಇನ್ನೂ ಭೂಕಂಪನದ ತೀವ್ರತೆ ಹೇಗಿತ್ತು ಎನ್ನುವ ಬಗ್ಗೆ ಸ್ಥಳೀಯರು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

ಮೆಕ್ಸಿಕೋ ನಗರದ 58 ವರ್ಷದ ನಿವಾಸಿ ಗೇಬ್ರಿಯೆಲಾ ರಾಮಿರೆಜ್ ಅವರು 'ನನಗೆ ಹೃದಯಾಘಾತವಾಗುತ್ತದೆ ಎಂದು ನಾನು ಭಾವಿಸಿದೆ' ಎಂದು ಹೇಳಿದರು. ಐದು ವರ್ಷಗಳ ಹಿಂದೆ ಸಂಭವಿಸಿದ ಭೂಕಂಪನದಿಂದಾಗಿ ನೂರಾರು ಜನ ಸಾವನ್ನಪ್ಪಿದ್ದರು. ಈ ಅಘಾತದಿಂದ ಅನೇಕರು ಹೊರಬಂದಿಲ್ಲ. ಅದಾಗಲೇ ಮತ್ತೊಂದು ಭೂಕಂಪ ಸಂಭವಿಸಿದೆ.

7.7 ತೀವ್ರತೆಯ ಭೂಕಂಪನ ಬಗ್ಗೆ ಜನ ಹೇಳುವುದೇನು?

7.7 ತೀವ್ರತೆಯ ಭೂಕಂಪನ ಬಗ್ಗೆ ಜನ ಹೇಳುವುದೇನು?

"ಈ ಪ್ರದೇಶವು ತುಂಬಾ ದುರ್ಬಲವಾಗಿದೆ. ಏಕೆಂದರೆ 2017 ರ ಭೂಕಂಪದಲ್ಲಿ ಹಾನಿಗೊಳಗಾದ ಅನೇಕ ಕಟ್ಟಡಗಳನ್ನು ದುರಸ್ತಿ ಮಾಡಲಾಗಿಲ್ಲ. ಆದ್ದರಿಂದ ಕಟ್ಟಡಗಳು ಕೆಲವು ಬಿದ್ದಿವೆ ಕೆಲವು ಭಾಗಶ: ಉಳಿದಿವೆ. ಭೂಕಂಪನದ ವೇಳೆ ಈ ಕಟ್ಟಡಗಳು ಸಂಪೂರ್ಣ ಧರೆಗುರುಳಿ ಸುತ್ತಮುತ್ತಲಿನ ಪ್ರದೇಶವನ್ನು ಹಾನಿ ಮಾಡುವ ಭಯವಿದೆ. ದುರಸ್ಥಿಗೊಂಡ ಕಟ್ಟಡಗಳು ಹೆಚ್ಚಿನ ತೀವ್ರತೆಯಲ್ಲಿ ಭೂಮಿ ಕಂಪಿಸಿದರೆ ಧರೆಗುರುಳುವ ಭೀತಿ ಇದೆ" ಎಂದು ಗೇಬ್ರಿಯೆಲಾ ರಾಮಿರೆಜ್ ಅವರು ಹೇಳಿದರು. "ಇದೊಂದು ಭಯಾನಕ ಕಾಕತಾಳೀಯ" ಎಂದು ಮೆಕ್ಸಿಕೊ ನಗರದಲ್ಲಿ ವಾಸಿಸುವ 73 ವರ್ಷದ ಲಾರಾ ರೆಸೆಂಡಿಜ್ ಅವರು ಹೇಳಿದರು.

ಭೂಕಂಪಕ್ಕೆ ಓರ್ವ ವ್ಯಕ್ತಿ ಸಾವು

ಭೂಕಂಪಕ್ಕೆ ಓರ್ವ ವ್ಯಕ್ತಿ ಸಾವು

ಪಶ್ಚಿಮ ರಾಜ್ಯ ಕೊಲಿಮಾದ ಮಂಜನಿಲ್ಲೊದಲ್ಲಿನ ಶಾಪಿಂಗ್ ಸೆಂಟರ್‌ನಲ್ಲಿ ಅವಶೇಷಗಳು ಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಆದರೆ ಮೆಕ್ಸಿಕೋ ನಗರದಲ್ಲಿ ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ ಎಂದು ಅವರು ಹೇಳಿದರು.

ಭೂಕಂಪಶಾಸ್ತ್ರಜ್ಞರ ಪ್ರಕಾರ, ಭೂಕಂಪನದ ಕೇಂದ್ರವು ಪೆಸಿಫಿಕ್ ಕರಾವಳಿಯ ಸಮೀಪದಲ್ಲಿದೆ. ರಾಜಧಾನಿಯ ಪಶ್ಚಿಮಕ್ಕೆ 400 ಕಿಲೋಮೀಟರ್ (250 ಮೈಲುಗಳು) ಮತ್ತು ಕೋಲ್ಕೋಮನ್‌ನಿಂದ ದಕ್ಷಿಣಕ್ಕೆ 59 ಕಿಲೋಮೀಟರ್ ದೂರದಲ್ಲಿದೆ ಎಂದು ಭೂಕಂಪಶಾಸ್ತ್ರಜ್ಞರು ಹೇಳಿದ್ದಾರೆ. ಆಳವನ್ನು 15 ಕಿಲೋಮೀಟರ್ (ಒಂಬತ್ತು ಮೈಲುಗಳು) ಎಂದು ಅಂದಾಜಿಸಲಾಗಿದೆ.

ಮೆಕ್ಸಿಕೋ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಮೆಕ್ಸಿಕೋ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಮೈಕೋವಾಕನ್‌ನಲ್ಲಿ ಗಾಜು ಬೀಳುವ ಮೂಲಕ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಮತ್ತು ಮನೆಗಳು ಮತ್ತು ಗ್ರಾಮೀಣ ಆಸ್ಪತ್ರೆಗೆ ಸಣ್ಣ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಕ್ಸಿಕೋ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿದೆ. ಇದು ಮುಖ್ಯವಾಗಿ ಸುರಂಗ ಮಾರ್ಗದ ಮೇಲೆ ಪರಿಣಾಮ ಬೀರಿದೆ.

ಮೆಕ್ಸಿಕೋ ವಿಶ್ವದ ಅತ್ಯಂತ ಭೂಕಂಪನ ಮತ್ತು ಜ್ವಾಲಾಮುಖಿ ಸಕ್ರಿಯ ವಲಯವಾಗಿದೆ. ಇದನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಅಲ್ಲಿ ಪೆಸಿಫಿಕ್ ಪ್ಲೇಟ್ ಸುತ್ತಮುತ್ತಲಿನ ಟೆಕ್ಟೋನಿಕ್ ಪ್ಲೇಟ್‌ಗಳನ್ನು ಸಂಧಿಸುತ್ತದೆ. ಸೆಪ್ಟೆಂಬರ್ 19, 1985 ರಂದು ಮೆಕ್ಸಿಕೋ ನಗರದಲ್ಲಿ 8.1 ತೀವ್ರತೆಯ ಭೂಕಂಪವು 10,000 ಕ್ಕೂ ಹೆಚ್ಚು ಜನರನ್ನು ಕೊಂದಿತು ಮತ್ತು ನೂರಾರು ಕಟ್ಟಡಗಳನ್ನು ನಾಶಪಡಿಸಿದೆ.

370 ಜನ ಬಲಿ

370 ಜನ ಬಲಿ

2017 ರಲ್ಲಿ ಸಂಭವಿಸಿದ 7.1 ತೀವ್ರತೆಯ ಭೂಕಂಪ ಸುಮಾರು 370 ಜನರನ್ನು ಬಲಿ ತೆಗೆದುಕೊಂಡಿತು. ಮೆಕ್ಸಿಕೋ ನಗರವನ್ನು ಹಿಂದಿನ ಸರೋವರದ ಕೆಸರು ತುಂಬಿದ ನೈಸರ್ಗಿಕ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ಭೂಕಂಪಗಳಿಂದ ದುರ್ಬಲವಾಗಿರುತ್ತದೆ.

ಮೆಕ್ಸಿಕೊ ಸುತ್ತಮುತ್ತಲಿನ ನಗರ ಪ್ರದೇಶಗಳೊಂದಿಗೆ 20 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ. ಭೂಕಂಪನ ಮಾನಿಟರ್‌ಗಳನ್ನು ಬಳಸಿಕೊಂಡು ಎಚ್ಚರಿಕೆಯ ವ್ಯವಸ್ಥೆಯನ್ನು ಹೊಂದಿದೆ. ಇದು ನಿವಾಸಿಗಳಿಗೆ ಕಟ್ಟಡಗಳನ್ನು ಸ್ಥಳಾಂತರಿಸಲು ಸಾಕಷ್ಟು ಸಮಯವನ್ನು ನೀಡುವ ಗುರಿಯನ್ನು ಹೊಂದಿದೆ.

English summary
A powerful earthquake struck western Mexico on Monday, killing one person. What do the locals say about the 7.7 magnitude earthquake?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X