ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡಿನ ಕೆರ್ಮಾಡೆಕ್ ದ್ವೀಪದಲ್ಲಿ ಭೂಕಂಪ, ಸುನಾಮಿ ಭೀತಿ?

|
Google Oneindia Kannada News

ಕ್ರೈಸ್ಟ್ ಚರ್ಚ್, ಜೂನ್ 16: ಪೆಸಿಫಿಕ್ ಸಾಗರದಲ್ಲಿರುವ ಕೆರ್ಮಾಡೆಕ್ ದ್ವೀಪದಲ್ಲಿ ಭಾನುವಾರದಂದು ತೀವ್ರವಾದ ಭೂಕಂಪ ಸಂಭವಿಸಿದೆ. ಆದರೆ, ಈ ಹಿಂದೆ ನೀಡಿದ್ದ ಸುನಾಮಿ ಭೀತಿ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ.

ಸಮುದ್ರ ಭಾಗದಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ಹೊಂದಿತ್ತು. ಭೂಕಂಪ ಸಂಭವಿಸಿದ 30 ನಿಮಿಷದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.

Earthquake in Kermadecs, but no Tsunami threat to NZ

ಕೆರ್ಮಾಡೆಕ್​ನ ದ್ವೀಪ ಸಮೂಹದ ಸಮುದ್ರದ 6 ಮೈಲಿ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಗುರುತಿಸಲಾಗಿದೆ. ಭೂಕಂಪದ ತೀವ್ರತೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಭೂಕಂಪದ ಕೇಂದ್ರ ಬಿಂದು ಸ್ಥಿತವಾಗಿದ್ದ 300 ಕಿ.ಮೀ. ವ್ಯಾಪ್ತಿಯಲ್ಲಿ ಭಾರಿ ಗಾತ್ರದ ಸುನಾಮಿ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಪೆಸಿಫಿಕ್​ ಸುನಾಮಿ ಮುನ್ನೆಚ್ಚರಿಕಾ ಕೇಂದ್ರ ಎಚ್ಚರಿಕೆ ನೀಡಿತ್ತು. ಆದರೆ, ಎಚ್ಚರಿಕೆ ನೀಡಿದ 8 ನಿಮಿಷಗಳ ನಂತರ ಎಚ್ಚರಿಕೆಯನ್ನು ಹಿಂಪಡೆಯಲಾಗಿತ್ತು.

English summary
A earthquake of 7 magnitude struck in the Kermadec Islands region in the Pacific Ocean. But Civil Defence says there is no Tsunami threat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X