ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

|
Google Oneindia Kannada News

ವೆಲ್ಲಿಂಗ್ಟನ್, ಮಾರ್ಚ್ 4: ನ್ಯೂಜಿಲ್ಯಾಂಡ್‌ನ ಉತ್ತರ ದ್ವೀಪದ ಪೂರ್ವ ಭಾಗದಲ್ಲಿ ಶುಕ್ರವಾರ ನಸುಕಿನಲ್ಲಿ ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯೂಸಿ) ಸುನಾಮಿ ಎಚ್ಚರಿಕೆ ನೀಡಿದೆ.

ಗಿಸ್ಬರ್ನ್ ನಗರದ ಈಶಾನ್ಯ ದಿಕ್ಕಿನಿಂದ ಸುಮಾರು 178 ಕಿಮೀ ದೂರದಲ್ಲಿ, 10 ಕಿಮೀ ಆಳದಲ್ಲಿ (ಆರು ಮೈಲು) ಭೂಕಂಪನದ ಕೇಂದ್ರ ಬಿಂದು ಇದ್ದು, ಪ್ರಾಥಮಿಕವಾಗಿ ಇದನ್ನು 6.9 ತೀವ್ರತೆಯಲ್ಲಿದೆ ಎಂದು ಮಾಪನ ಮಾಡಲಾಗಿತ್ತು ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೇ ತಿಳಿಸಿದೆ.

 Earthquake Hits New Zealand With Magnitude 7.3: Tsunami Warning Issued

ವಿವಿಧ ದೇಶಗಳಲ್ಲಿ ಭಾರಿ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆ ವಿವಿಧ ದೇಶಗಳಲ್ಲಿ ಭಾರಿ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆ

ಗಿಸ್ಬರ್ನ್ ನಗರದ ನಿವಾಸಿಗಳಿಗೆ ಸಾಧಾರಣ ಪ್ರಮಾಣದಲ್ಲಿ ಭೂಮಿ ನಡುಗಿನ ಅನುಭವವಾಗಿದೆ. ದೇಶಕ್ಕೆ ಅಪಾಯ ಉಂಟುಮಾಡುವ ಮಟ್ಟದಲ್ಲಿ ಸುನಾಮಿ ಏಳುವಂತೆ ಮಾಡುವಷ್ಟು ಭೂಕಂಪನ ಪ್ರಬಲವಾಗಿತ್ತೇ ಎಂಬುದನ್ನು ಇನ್ನೂ ಮಾಪನ ಮಾಡುತ್ತಿರುವುದಾಗಿ ನ್ಯೂಜಿಲ್ಯಾಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಭೂಕಂಪನದ ತೀವ್ರತೆ 7.3ರಷ್ಟಿದೆ ಎಂದು ಅದು ಹೇಳಿದೆ.

ಪ್ರಬಲ ಭೂಕಂಪನ: ಕಂಗಾಲಾಗಿ ಮನೆಯಿಂದ ಹೊರಬಂದ ಜನರು ಪ್ರಬಲ ಭೂಕಂಪನ: ಕಂಗಾಲಾಗಿ ಮನೆಯಿಂದ ಹೊರಬಂದ ಜನರು

2011ರಲ್ಲಿ ನ್ಯೂಜಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ 6.3ರ ತೀವ್ರತೆಯ ಭೂಕಂಪ ಭಾರಿ ಅನಾಹುತಕ್ಕೆ ಕಾರಣವಾಗಿತ್ತು. ಕೆಳಮಟ್ಟದ ಪಟ್ಟಣವಾಗಿದ್ದರಿಂದ 185 ಜನರು ಜೀವ ಕಳೆದುಕೊಂಡಿದ್ದರು. ಕಳೆದ ಫೆಬ್ರವರಿ 10ರಂದು ಸಹ ನ್ಯೂಜಿಲ್ಯಾಂಡ್ ಸೇರಿದಂತೆ ದಕ್ಷಿಣ ಪೆಸಿಫಿಕ್ ಭಾಗಗಳಲ್ಲಿ ಭೂಕಂಪ ಸಂಭವಿಸಿತ್ತು.

English summary
A strong earthquake hits New Zealand with magnitude of 7.3 on Friday, triggered tsunami warning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X