ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಉತ್ತರ ಭಾಗದಲ್ಲಿ ಭೂಕಂಪ, ಬೀಜಿಂಗ್ ನಲ್ಲೂ ಕಂಪನ

|
Google Oneindia Kannada News

ಬೀಜಿಂಗ್, ಜುಲೈ 12: ಚೀನಾದ ಉತ್ತರ ಭಾಗದ ಹೆಬಿಯಿ ಪ್ರಾಂತ್ಯದಲ್ಲಿ ಭಾನುವಾರ ಬೆಳಗ್ಗೆ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ಕಂಡು ಬಂದಿದೆ.

ಚೀನಾದ ಹೆಬಿಯಿಯ ತಾಂಗ್ಶಾನ್ ನಗರದಲ್ಲಿ ಭೂಕಂಪ ಉಂಟಾಗಿದ್ದು, ಬೀಜಿಂಗ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲೂ ಕಂಪನದ ಅನುಭವವಾಗಿದೆ ಎಂದು ಸರ್ಕಾರು ಸ್ವಾಮ್ಯದ ಕ್ಸಿನ್ಯೂವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಂಗಪುರ, ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪಸಿಂಗಪುರ, ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ

ಭೂಕಂಪದ ಕೇಂದ್ರ ಬಿಂದು ಗುಯೆ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ 6:38 AMರಲ್ಲಿ ದಾಖಲಾಗಿದೆ, 10 ಕಿ.ಮೀ ಆಳದಲ್ಲಿ ಕಾಣಿಸಿಕೊಂಡಿದೆ ಎಂದು ಚೀನಾದ ಭೂಕಂಪ ಜಾಲ ಕೇಂದ್ರ( ಸಿಇಎನ್ ಸಿ) ಹೇಳಿದೆ.

 5.1-magnitude quake jolts China; tremors felt in Beijing

ಎರಡನೇ ಭೂಕಂಪದ ಅನುಭವ 2.2 ತೀವ್ರತೆ ಕೂಡಾ ಇದೇ ಜಿಲ್ಲೆಯಲ್ಲಿ ಅರ್ಧಗಂಟೆಗಳಲ್ಲಿ ಕಾಣಿಸಿಕೊಂಡಿದೆ. ಸದ್ಯಕ್ಕೆ ಯಾವುದೇ ಸಾವು ನೋವಿನ ವರದಿ ಕಂಡು ಬಂದಿಲ್ಲ.

ಸದ್ಯಕ್ಕೆ ಕಂಪನದ ಅನುಭವ ಕಂಡು ಬಂದ ಪ್ರದೇಶಗಳಲ್ಲಿ ರೈಲು ಸಂಚಾರ ನಿರ್ಬಂಧಿಸಲಾಗಿದೆ. ಅಗ್ನಿ ಶಾಮಕದಳವನ್ನು ನಿಯೋಜಿಸಲಾಗಿದೆ. 1976ರಲ್ಲಿ ತಾಂಗ್ಶಾನ್ ಪ್ರಾಂತ್ಯದಲ್ಲಿ ರಿಕ್ಟರ್ ಮಾಪಕದಲ್ಲಿ ತೀವ್ರತೆ ಭೂಕಂಪ ಸಂಭವಿಸಿ240,000 ಮಂದಿ ಮೃತಪಟ್ಟಿದ್ದರು.

English summary
A 5.1-magnitude earthquake on Sunday jolted China's north Hebei province's Tangshan city, according to officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X