ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಡ್ರೋನ್ ಮೂಲಕ ಗಾಂಜಾ ಡೆಲಿವರಿ..!

|
Google Oneindia Kannada News

ಇಸ್ರೇಲ್‌ನಲ್ಲಿ ದಿಢೀರ್ ಅಂತಾ 'ಗಾಂಜಾ ಮಳೆ' ಬಿದ್ದಿದೆ. ಇಸ್ರೇಲ್‌ನ ಅತಿಹೆಚ್ಚು ಜನಸಂಖ್ಯೆ ಇರುವ ನಗರ ಟೆಲ್ ಅವೀವ್‌ನಲ್ಲಿ ಈ ಘಟನೆ ನಡೆದಿದೆ. ಗಾಂಜಾ ಪ್ಯಾಕೇಟ್‌ಗಳನ್ನು ಹೊತ್ತಿದ್ದ ಡ್ರೋನ್ ಕಂಡ ಕಂಡಲ್ಲಿ ಗಾಂಜಾ ಮಳೆ ಸುರಿಸಿದೆ. ಇದನ್ನು ನೋಡಿ ಕೆಲವರಿಗೆ ಶಾಕ್ ಆದರೆ, ಇನ್ನೂ ಕೆಲವರು ಸಿಕ್ಕಿದ್ದೇ ಚಾನ್ಸ್ ಅಂತಾ ಕೆಳಗೆ ಬಿದ್ದ ಗಾಂಜಾ ಪ್ಯಾಕೇಟ್‌ಗಳನ್ನ ಎತ್ತಿಕೊಂಡು ಓಡಿದ್ದಾರೆ.

ಹೀಗೆ ಟೆಲ್ ಅವೀವ್‌ನಲ್ಲಿ ಡ್ರೋನ್ ಗಾಂಜಾ ಮಳೆಯನ್ನು ಸುರಿಸಿರೋ ವೀಡಿಯೋ ಫುಲ್ ವೈರಲ್ ಆಗಿದೆ. ಗಾಂಜಾ ಪ್ಯಾಕೇಟ್‌ಗಳು ಡ್ರೋನ್‌ನಿಂದ ಬೀಳುವ ದೃಶ್ಯವನ್ನು ಇಸ್ರೇಲಿ ಪೊಲೀಸರು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ಘಟನೆ ಹಿಂದೆ ಗಾಂಜಾ ಪರ ಹೋರಾಟಗಾರರ ಕೈವಾಡವಿದೆಯಾ ಎಂಬ ಅನುಮಾನ ಕಾಡುತ್ತಿದೆ.

ಗಾಂಜಾಗೆ ಮಾನ್ಯತೆ, ಸೊಪ್ಪು ಮಾರಾಟಕ್ಕೆ ಮುಂದಾದ ಪಾಕಿಸ್ತಾನ..!ಗಾಂಜಾಗೆ ಮಾನ್ಯತೆ, ಸೊಪ್ಪು ಮಾರಾಟಕ್ಕೆ ಮುಂದಾದ ಪಾಕಿಸ್ತಾನ..!

ಏಕೆಂದರೆ ಇಸ್ರೇಲ್‌ನಲ್ಲಿ ಗಾಂಜಾ ಅಥವಾ ಮರಿಜುನಾ ಬಳಕೆಗೆ ಅನುಮತಿ ನೀಡಿ ಅಂತಾ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಆದರೆ ಇಸ್ರೇಲ್ ಸರ್ಕಾರ ಮಾತ್ರ ಅನುಮತಿ ನೀಡಿಲ್ಲ. ಔಷಧಗಳ ಉಪಯೋಗಕ್ಕೆ ಮಾತ್ರ ಅನುಮತಿ ಇದೆ. ಈ ಕಾರಣಕ್ಕೆ ಗಾಂಜಾ ಪರ ಹೋರಾಟಗಾರರು ಇಸ್ರೇಲ್‌ನಲ್ಲಿ ಈ ರೀತಿ ಮಾಡಿದ್ದಾರಾ ಎಂಬ ಅನುಮಾನ ಮೂಡಿದೆ.

Drone Drops Packets Of Weed In Israel

ಜಗತ್ತಿನಾದ್ಯಂತ 'ಗಾಂಜಾ' ಪರ ಹೋರಾಟ..!

ಗಾಂಜಾ ಕಾನೂನುಬದ್ಧಗೊಳಿಸಲು ಇಸ್ರೇಲ್ ಮಾತ್ರವಲ್ಲ, ಜಗತ್ತಿನ ಹತ್ತಾರು ರಾಷ್ಟ್ರಗಳಲ್ಲಿ ಒತ್ತಾಯ ಕೇಳಿಬರುತ್ತಿದೆ. ಈಗಾಗಲೇ ಕೆಲ ದೇಶಗಳಲ್ಲಿ ಅನುಮತಿ ನೀಡಿದ್ದು, ವೈದ್ಯಕೀಯ ಸಂಶೋಧನೆ ಹಾಗೂ ಬಳಕೆಗೆ ಹತ್ತಾರು ದೇಶಗಳು ಒಪ್ಪಿವೆ. ಅಮೆರಿಕದ ಕೆಲ ರಾಜ್ಯಗಳಲ್ಲಿ ಜಾ ಬಳಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಅಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ ಎಂಬುದು ತಜ್ಞರ ವಾದ.

ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ

ಆಲ್ಕೋಹಾಲ್ ಸೇರಿದಂತೆ ನೋವು ನಿವಾರಕ ಔಷಧ ಹಾಗೂ ಸಿಗರೇಟ್‌ನಿಂದ ಲಕ್ಷಾಂತರ ಮಂದಿ ಮುಕ್ತಿ ಹೊಂದಲು ಗಾಂಜಾ ಕಾರಣವಾಗಿದೆ ಎಂಬುದು ಆಯುರ್ವೇದ ತಜ್ಞರ ವಾದವಾಗಿದೆ. ಈ ಕಾರಣಕ್ಕೆ ಗಾಂಜಾ ಬಳಕೆಗೆ ಅನುಮತಿ ಕೋರಿ ಹಲವು ದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್ ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ ಬಹುಪಾಲು ದೇಶಗಳಲ್ಲಿ ಮರಿಜುನಾ ಈಗಲೂ ನಿಷೇಧಿತ ವಸ್ತು. ಆದರೆ 40ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಜಾ ಬೆಳೆಯುವುದಕ್ಕೆ ಹಾಗೂ ಬಳಸುವುದಕ್ಕೆ ಅನುಮತಿ ಇದೆ. ಕೆನಡಾ ಸೇರಿದಂತೆ ಹಲವು ದೈತ್ಯ ರಾಷ್ಟ್ರಗಳಲ್ಲಿ ಗಾಂಜಾ ಗಿಡಕ್ಕೆ ಲೀಗಲ್ ಪಟ್ಟಕಟ್ಟಲಾಗಿದೆ. ಭಾರತದಲ್ಲೂ ಕೂಡ ಗಾಂಜಾ ಬಳಕೆಗೆ ಅನುಮತಿ ಕೋರಿ ಕೇಂದ್ರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಔಷಧ ಕಂಪನಿಗಳು ಹಾಗೂ ಲಿಕ್ಕರ್ ಲಾಬಿ ಗಾಂಜಾ ಬ್ಯಾನ್ ಆಗಲು ಕಾರಣ ಅನ್ನೋದು ಆಯುರ್ವೇದ ತಜ್ಞರ ವಾದವಾಗಿದೆ.

English summary
In an unusual incident, residents of Israel’s Tel Aviv claimed it was raining weed after a huge load of an illegal consignment was dropped on the city by drones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X