ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷರಫ್‌ ದೇಹವನ್ನು ಎಳೆದು ತಂದು ಸಂಸತ್‌ನಲ್ಲಿ ನೇಣು ಹಾಕಿ:ಪಾಕ್ ಕೋರ್ಟ್‌

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 19: ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ ಗೆ ಪಾಕಿಸ್ತಾನ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಮರಣ ದಂಡನೆ ಹೇಗಿರಬೇಕು ಎಷ್ಟು ಹಿಂಸಾತ್ಮಕವಾಗಿರಬೇಕು ಎಂದು ಸಹ ಕೋರ್ಟ್‌ ವಿವರಿಸಿದೆ.

'ಮರಣ ದಂಡನೆಗೆ ಗುರಿ ಆಗುವ ಮುನ್ನವೇ ಪರ್ವೇಜ್ ಮುಷರಫ್ ಏನಾದರೂ ಸತ್ತು ಹೋದರೆ ಆತನ ದೇವನ್ನು ರಸ್ತೆಯಲ್ಲಿ ಎಳೆದು ಸಂಸತ್‌ ಗೆ ತಂದು ಸಂಸತ್‌ ಮುಂದಿನ ಡಿ-ಚೌಕದಲ್ಲಿ ಎಲ್ಲರಿಗೂ ಕಾಣುವಂತೆ ಮೂರು ದಿನಗಳ ಕಾಲ ಸತ್ತ ದೇಹವನ್ನು ನೇಣಿಗೆ ಹಾಕಿ' ಎಂದು ಕೋರ್ಟ್‌ ಆದೇಶದಲ್ಲಿ ಹೇಳಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಮರಣ ದಂಡನೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಮರಣ ದಂಡನೆ

ನ್ಯಾಯಾಲಯ ನೀಡಿರುವ ಈ ನಿರ್ದೇಶನ 'ಅಸಾಂವಿಧಾನಿಕ' ಎಂದು ಮುಷರಫ್ ಪರ ವಕೀಲರು ಹೇಳಿದ್ದಾರೆ. ಅಲ್ಲದೆ, ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಗೆ ಮನವಿ ಸಲ್ಲಿಸುವುದಾಗಿಯೂ ಅವರು ಹೇಳಿದ್ದಾರೆ.

Drag Parvez Mushrraf Dead Body To Parliament And Hang For Three Days: Pakistan Court

ಸರಣಿ ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬನಿಗೆ ಇದೇ ಮಾದರಿಯ ಹಿಂಸಾತ್ಮಕ ಶಿಕ್ಷೆ ನೀಡಲಾಗಿತ್ತು. "ಅಪರಾಧಿಯನ್ನು ಬಹಿರಂಗವಾಗಿ ನೇಣಿಗೆ ಏರಿಸಿ, ಆತನ ಮೃತದೇಹವನ್ನು ಆತನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಮುಂದೆ ನೂರು ತುಂಡುಗಳಾಗಿ ಕತ್ತರಿಸಬೇಕು' ಎಂದು ಪಾಕ್ ನ್ಯಾಯಾಲಯ ತೀರ್ಪು ನೀಡಿದ್ದು, ಆದರೆ ಈ ಆದೇಶವನ್ನು ಪಾಲಿಸಲಿಲ್ಲ.

ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಬಲವಂತವಾಗಿ ಹೇರಿಕೆ, ದೇಶದ್ರೋಹ ಎಸಗಿದ ಆರೋಪವಿತ್ತು. ಆರೋಪ ಸಾಬೀತಾದ ಹಿನ್ನಲೆಯಲ್ಲಿ ನವೆಂಬರ್ 19ರಂದು ವಿಚಾರಣೆ ಅಂತ್ಯಗೊಂಡು ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿತ್ತು, ಡಿಸೆಂಬರ್ 17ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ. ಸದ್ಯ ಅನಾರೋಗ್ಯ ಪೀಡಿತರಾಗಿರುವ ಮುಷರಫ್ ಅವರು ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮ ವಿರುದ್ಧದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಮುಷರಫ್, 'ತೀರ್ಪು ರಾಜಕೀಯ ದುರುದ್ದೇಶದಿಂದ ಕೂಡಿದೆ' ಎಂದು ಹೇಳಿದ್ದಾರೆ.

English summary
Pakistan special court give death sentence to Parvez Mushrraf it also instructed that 'If Mushraf dies early his dead body should drag on the road and bring to parliament and hang for three days in front of parliament'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X