ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಚುನಾವಣೆ : ಕನ್ನಡಿಗ ನೀರಜ್ ಪಾಟೀಲಗೆ ಸೋಲು

By Prasad
|
Google Oneindia Kannada News

ಲಂಡನ್, ಜೂನ್ 09 : ಲ್ಯಾಂಬೆತ್ ಮೇಯರ್ ಆಗಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ ಅವರು ಬ್ರಿಟನ್ನಿನ ಸಂಸತ್ ಚುನಾವಣೆಯಲ್ಲಿ ಶಿಕ್ಷಣ ಸಚಿವರಾಗಿದ್ದ ಜಸ್ಟೈನ್ ಗ್ರೀನಿಂಗ್ ವಿರುದ್ಧ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.

ಲಂಡನ್ ನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ತ್ವರಿತ ಚಿಕಿತ್ಸೆ ತಜ್ಞರಾಗಿ ಸೇವೆ ಸಲ್ಲಿಸಿ ಮತ್ತು ಮೇಯರ್ ಆಗಿಯೂ ಜನಪ್ರಿಯರಾಗಿದ್ದ ನೀರಜ್ ಪಾಟೀಲ ಅವರು ಲೇಬರ್ ಪಕ್ಷದ ಪರವಾಗಿ ಪುಟ್ನಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

Dr Neeraj Patil loses narrowly to Education Minister of Britain Justine Greening

2005ರಿಂದಲೂ ಸತತವಾಗಿ ಪುಟ್ನಿ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಜಸ್ಟೈನ್ ಗ್ರೀನಿಂಗ್ ಅವರ ವಿರುದ್ಧ ಕೇವಲ 1554 ಮತಗಳ ಅಂತರದಿಂದ ನೀರಜ್ ಅವರು ಸೋತಿದ್ದಾರೆ. ಗ್ರೀನಿಂಗ್ ಅವರು 20,679 ಮತಗಳನ್ನು ಪಡೆದರೆ, ಪಾಟೀಲ ಅವರು ಪಡೆದಿರುವ ಮತಗಳು 19,1254.

[ಎನ್ನಾರೈ ನೀರಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ][ಎನ್ನಾರೈ ನೀರಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ]

ಫಲಿತಾಂಶ ಹೊರಬಿದ್ದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ನೀರಜ್ ಅವರು, ಜಯಶಾಲಿಯಾದ ಗ್ರೀನಿಂಗ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಬ್ರಿಟಿಷ್ ಪಾರ್ಲಿಮೆಂಟಿಗೆ ಸ್ಪರ್ಧಿಸಿದ್ದವರಲ್ಲಿ ನೀರಜ್ ಅವರು ಕರ್ನಾಟಕದ ಮೊಟ್ಟ ಮೊದಲ ವ್ಯಕ್ತಿಯಾಗಿದ್ದಾರೆ.

ತಮ್ಮ ಪರವಾಗಿ ಪ್ರಚಾರ ಮಾಡಿದ ಲೇಬರ್ ಪಕ್ಷದ ಎಲ್ಲ ಪದಾಧಿಕಾರಿಗಳಿಗೆ ಅವರು ಧನ್ಯವಾದ ಅರ್ಪಿಸಿದರು. ಚುನಾವಣೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಯಾರಿಗೂ ದೊರೆಯುವುದಿಲ್ಲ ಎಂದು ಈ ಸಮಯದಲ್ಲಿ ಹಾಸ್ಯಚಟಾಕಿಯನ್ನೂ ಹಾರಿಸಿ ನೆರೆದವರನ್ನು ನಗೆಗಡಲಲ್ಲಿ ಮುಳುಗಿಸಿದರು.

Dr Neeraj Patil loses narrowly to Education Minister of Britain Justine Greening

ಬ್ರಿಟನ್ ಪಾರ್ಲಿಮೆಂಟಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷದಿಂದ 14 ಭಾರತೀಯರು, ಕನ್ಸರ್ವೆಟೀವ್ ಪಕ್ಷದಿಂದ 13 ಮತ್ತು ಡೆಮೊಕ್ರಾಟ್ ಪಕ್ಷದಿಂದ 9 ಭಾರತೀಯರು ಸ್ಪರ್ಧಿಸಿದ್ದರು. ಬ್ರೆಕ್ಸಿಟ್ ನಂತರ ಬ್ರಿಟಿಷ್ ಪಾರ್ಲಿಮೆಂಟಿಗೆ ನಡೆದ ಮೊದಲ ಚುನಾವಣೆಯಿದು.

ಪ್ರೀತ್ ಕೌರ್ ಗಿಲ್ ಆಯ್ಕೆ : ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಎಗ್ಬಸ್ಟನ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಾರತೀಯ ಸಂಜಾತೆ ಪ್ರೀತ್ ಕೌರ್ ಗಿಲ್ ಅವರು ಕನ್ಸರ್ವೆಟೀವ್ ಪಕ್ಷದ ಕಾರೋಲಿನ್ ಸ್ಕ್ವೈರ್ ಅವರನ್ನು ಸೋಲಿಸಿದ್ದು, ಸಂಸತ್ತಿಗೆ ಆಯ್ಕೆಯಾದ ಮೊದಲ ಸಿಖ್ ಎಂಪಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

English summary
Dr Neeraj Patil, The Former Mayor of The London Borough of Lambeth lost to Justine Greening, the Education Minister of Britain in the British Parliamentary elections held on 8th June 2017. He was selected by the Labour Party to represent the constituency of Putney.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X