ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತವರು ವುಹಾನ್ ನಿಂದ ಬಂದ ಹೊಸ ಆಘಾತಕಾರಿ ಸುದ್ದಿ ಇದು.!

|
Google Oneindia Kannada News

ಬೀಜಿಂಗ್, ಜೂನ್ 3: ವಿಶ್ವದಾದ್ಯಂತ ಇಲ್ಲಿಯವರೆಗೂ ಒಟ್ಟು 64,52,391 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈವರೆಗೆ ಜಗತ್ತಿನಾದ್ಯಂತ 3,82,479 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ.

Recommended Video

ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

ಇಡೀ ವಿಶ್ವವೇ ಜರ್ಜರಿತಗೊಂಡಿರುವ ನೋವೆಲ್ ಕೊರೊನಾ ವೈರಸ್ ಸೋಂಕು ಮೊದಲು ಸ್ಫೋಟಗೊಂಡಿದ್ದು ಚೀನಾದ ವುಹಾನ್ ನಲ್ಲಿ. ಮಹಾಮಾರಿ ಕೋವಿಡ್-19 ಗೆ ವುಹಾನ್ ವೊಂದರಲ್ಲೇ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು.

ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!

ಎರಡ್ಮೂರು ತಿಂಗಳ ಕಠಿಣ ಲಾಕ್ ಡೌನ್ ಬಳಿಕ ವುಹಾನ್ ನಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಕಳೆದ ಒಂದು ತಿಂಗಳಿನಿಂದ ವುಹಾನ್ ನ ಯಾವುದೇ ಆಸ್ಪತ್ರೆಯಲ್ಲೂ ಕೋವಿಡ್-19 ರೋಗಿಗಳಿಲ್ಲ ಎಂದು ಚೀನಾ ಹೇಳಿಕೊಂಡಿತ್ತು.

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

ಆದ್ರೀಗ, ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಆಘಾತಕಾರಿ ಸುದ್ದಿ ವುಹಾನ್ ನಿಂದ ಹೊರಬಿದ್ದಿದೆ. ಕೊರೊನಾ ವೈರಸ್ ಸೋಂಕಿನಿಂದಾಗಿ ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯರೊಬ್ಬರು ಜೂನ್ 2 ರಂದು ಕೊನೆಯುಸಿರೆಳೆದಿದ್ದಾರೆ.

ಯಾರು 'ಆ' ವೈದ್ಯ.?

ಯಾರು 'ಆ' ವೈದ್ಯ.?

ಮಹಾಮಾರಿ ಕೋವಿಡ್-19 ವಿರುದ್ಧ ನಾಲ್ಕು ತಿಂಗಳ ಕಾಲ ಸುದೀರ್ಘ ಹೋರಾಟ ನಡೆಸಿದ ಡಾ.ಹು ವೈಫೆಂಗ್ ಜೂನ್ 2 ರಂದು ಸಾವನ್ನಪ್ಪಿದ್ದಾರೆ.

ಕೋವಿಡ್-19 ಮೊದಲು ಪತ್ತೆಯಾದ ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ಡಾ.ಹು ವೈಫೆಂಗ್ ಯೂರಾಲಜಿಸ್ಟ್ ಆಗಿದ್ದರು. ಜನವರಿ ತಿಂಗಳಲ್ಲಿ ಡಾ.ಹು ವೈಫೆಂಗ್ ಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಅಂದಿನಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ.ಹು ವೈಫೆಂಗ್ ನಿನ್ನೆ (ಜೂನ್ 2) ರಂದು ಮೃತಪಟ್ಟಿದ್ದಾರೆ.

ಚರ್ಮ ಕಪ್ಪಾಗಿತ್ತು.!

ಚರ್ಮ ಕಪ್ಪಾಗಿತ್ತು.!

ಕೊರೊನಾ ವೈರಸ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಡಾ.ಹು ವೈಫೆಂಗ್ ಮಾರ್ಚ್ ನಲ್ಲಿ ಸುದ್ದಿಯಾಗಿದ್ದು ಬೇರೆಯದ್ದೇ ಕಾರಣಕ್ಕೆ. ಮಾರ್ಚ್ ಮಧ್ಯಭಾಗದ ಹೊತ್ತಿಗೆ ಡಾ.ಹು ವೈಫೆಂಗ್ ರವರ ಚರ್ಮ ಏಕಾಏಕಿ ಸಂಪೂರ್ಣವಾಗಿ ಕಪ್ಪಾಗಿಬಿಡ್ತು. ಇದಕ್ಕೆ ಕಾರಣ ಲಿವರ್ ಡಿಸ್ಫಂಕ್ಷನ್ ಎಂದು ಹೇಳಲಾಗಿತ್ತು.

ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!

ಸಾವಿಗೆ ಕಾರಣ ಏನು.?

ಸಾವಿಗೆ ಕಾರಣ ಏನು.?

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸೆರೆಬ್ರಲ್ ರಕ್ತಸ್ರಾವದಿಂದ ಬಳಲಿದ್ದ ಡಾ.ಹು ವೈಫೆಂಗ್ ಇದೀಗ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣವೇನು ಎಂಬುದನ್ನು ಚೀನಾ ಸರ್ಕಾರ ಮಾತ್ರ ಬಹಿರಂಗ ಪಡಿಸಿಲ್ಲ. ಇದರಿಂದ ಚೀನಾದ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಡಾ.ಯಿ ಫ್ಯಾನ್ ಗೂ ಹಾಗೇ ಆಗಿತ್ತು.!

ಡಾ.ಯಿ ಫ್ಯಾನ್ ಗೂ ಹಾಗೇ ಆಗಿತ್ತು.!

ಡಾ.ಹು ವೈಫೆಂಗ್ ಸ್ನೇಹಿತ, ಕಾರ್ಡಿಯಾಲಜಿಸ್ಟ್ ಡಾ.ಯಿ ಫ್ಯಾನ್ ರವರಿಗೂ ಕೊರೊನಾ ವೈರಸ್ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ.ಯಿ ಫ್ಯಾನ್ ರವರ ಚರ್ಮ ಕೂಡ ಏಕಾಏಕಿ ಕಪ್ಪಾಗಿತ್ತು.

ಡಾ.ಯಿ ಫ್ಯಾನ್ ಮೇ 6 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಆದರೆ, ಡಾ.ಹು ವೈಫೆಂಗ್ ಮಾತ್ರ ಚೇತರಿಸಿಕೊಳ್ಳಲೇ ಇಲ್ಲ.

ವುಹಾನ್ ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ: ಅಸಲಿ ಸಾವಿನ ಪ್ರಮಾಣ ಎಷ್ಟು?ವುಹಾನ್ ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ: ಅಸಲಿ ಸಾವಿನ ಪ್ರಮಾಣ ಎಷ್ಟು?

ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಹೋರಾಡಿದ ಈ ಇಬ್ಬರೂ ವೈದ್ಯರು ''ಕಪ್ಪು ಮುಖದ ವುಹಾನ್ ಡಾಕ್ಟರ್ಸ್'' ಎಂದೇ ಚೀನಾದಲ್ಲಿ ಗುರುತಿಸಿಕೊಂಡರು.

ಚೀನಾದಲ್ಲಿ ಕೊರೊನಾ ವೈರಸ್ ಔಟ್ ಬ್ರೇಕ್ ಆದಾಗ ಫ್ರಂಟ್ ಲೈನ್ ನಲ್ಲಿದ್ದು ಹೋರಾಡಿದ ವೈದ್ಯರೇ ಆಸ್ಪತ್ರೆಯಲ್ಲಿ ನರಳುವಂತಾಗಿದ್ದು ಮಾತ್ರ ದುರಂತ.

ಮೊದಲು ವಾರ್ನಿಂಗ್ ಕೊಟ್ಟಿದ್ದ ವೈದ್ಯ ಕೂಡ ಸಾವು.!

ಮೊದಲು ವಾರ್ನಿಂಗ್ ಕೊಟ್ಟಿದ್ದ ವೈದ್ಯ ಕೂಡ ಸಾವು.!

ಅಷ್ಟಕ್ಕೂ, ಕಳೆದ ವರ್ಷದ ಡಿಸೆಂಬರ್ ನಲ್ಲಿ ನೋವೆಲ್ ಕೊರೊನಾ ವೈರಸ್ ಔಟ್ ಬ್ರೇಕ್ ಆದಾಗ ಅದರ ಬಗ್ಗೆ ಮೊದಲು ಎಚ್ಚರಿಕೆ ನೀಡಿದವರು ವುಹಾನ್ ಸೆಂಟ್ರಲ್ ಆಸ್ಪತ್ರೆಯ ವೈದ್ಯ ಲೀ ವೆನ್ ಲಿಯಾಂಗ್.

ಆದರೆ, ಡಾ.ಲೀ ವೆನ್ ಲಿಯಾಂಗ್ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಚೀನಾದ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದರು. ದುರಂತ ಅಂದ್ರೆ, ಅದೇ ಡಾ.ಲೀ ವೆನ್ ಲಿಯಾಂಗ್ ಗೆ ಕೊರೊನಾ ವೈರಸ್ ಸೋಂಕು ತಗುಲಿ, ಸಾವನ್ನಪ್ಪಿದರು.

ನೋವೆಲ್ ಕೊರೊನಾ ವೈರಸ್ ಮೊದಲು ಪತ್ತೆಯಾದ ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ 68 ಸಿಬ್ಬಂದಿಗಳಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು ಎಂದು ವರದಿಯಾಗಿದೆ.

ಚೀನಾದಲ್ಲಿ ವ್ಯಾಪಕ ಆಕ್ರೋಶ

ಚೀನಾದಲ್ಲಿ ವ್ಯಾಪಕ ಆಕ್ರೋಶ

ಕೊರೊನಾ ವೈರಸ್ ಸೋಂಕಿನಿಂದ ಡಾ.ಲೀ ವೆನ್ ಲಿಯಾಂಗ್ ಮೃತಪಟ್ಟಾಗ, ಚೀನಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಡಾ.ಹು ವೈಫೆಂಗ್ ಸಾವಿನ ಬಳಿಕವೂ ಚೀನಾದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ಈವರೆಗೂ ಐವರು ಮೆಡಿಕಲ್ ವರ್ಕರ್ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ವೈರಸ್ ಔಟ್ ಬ್ರೇಕ್ ಆದಾಗ ಬಂದ ವಾರ್ನಿಂಗ್ ಗಳನ್ನು ಗಂಭೀರವಾಗಿ ಪರಿಗಣಿಸದೆ, ಸುರಕ್ಷತಾ ಕ್ರಮಗಳಿಲ್ಲದೆ ವೈದ್ಯಕೀಯ ಸಿಬ್ಬಂದಿಯನ್ನು ಅಪಾರ ಪ್ರಮಾಣದ ವೈರಸ್ ಗೆ ಒಡ್ಡಿಕೊಳ್ಳುವಂತೆ ಹಿರಿಯ ಸಿಬ್ಬಂದಿ ವಾತಾವರಣ ಸೃಷ್ಟಿಸಿದ್ದರು ಎಂದು ದಿನಪತ್ರಿಕೆಯೊಂದು ವರದಿ ಮಾಡಿತ್ತು.

ಹೀಗಾಗಿ, ವುಹಾನ್ ಸೆಂಟ್ರಲ್ ಆಸ್ಪತ್ರೆಯ ಆಡಳಿತ ಮತ್ತು ಮಾಹಿತಿಯ ಪಾರದರ್ಶಕತೆ ಬಗ್ಗೆ ಅಲ್ಲಿನ ಜನರಿಗೆ ನಂಬಿಕೆ ಇಲ್ಲದಾಗಿದೆ.

ಹಲವು ಅನುಮಾನಗಳಿಗೆ ದಾರಿ

ಹಲವು ಅನುಮಾನಗಳಿಗೆ ದಾರಿ

ವುಹಾನ್ ನಲ್ಲಿ ಯಾವುದೇ ಆಸ್ಪತ್ರೆಯಲ್ಲೂ ಕೊರೊನಾ ವೈರಸ್ ಸೋಂಕಿತರಿಲ್ಲ ಎಂದು ಹೇಳಲಾಗಿತ್ತು. ಎಲ್ಲಾ ಕೊರೊನಾ ವೈರಸ್ ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಏಪ್ರಿಲ್ 27 ರಂದು ನ್ಯಾಷನಲ್ ಹೆಲ್ತ್ ಕಮಿಷನ್ ಘೋಷಿಸಿತ್ತು. ಆದ್ರೀಗ, ಕೋವಿಡ್-19 ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಡಾ.ಹು ವೈಫೆಂಗ್ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

English summary
Dr Hu Weifeng has become the latest Wuhan Doctor to die after Contracting Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X