ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಸ್‌ಗಳಿಗೆ ಬಿಆರ್ ಶೆಟ್ಟಿ ಉದ್ಯೋಗದ ಆಫರ್‌

By Ashwath
|
Google Oneindia Kannada News

ದುಬೈ, ಜು.6: ದುಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಡಾ.ಬಿ.ಆರ್‌.ಶೆಟ್ಟಿ ಇರಾಕ್‌ನಿಂದ ಭಾರತಕ್ಕೆ ಮರಳಿದ ನರ್ಸ್‌ಗಳಿಗೆ ಸೌದಿಯಲ್ಲಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ.

ಎನ್ಎಂಸಿ ಹೆಲ್ತ್‌‌ಕೇರ್‌ ಸಂಸ್ಥೆಯ ಸಿಇಒ ಆಗಿರುವ ಬಿ.ಆರ್‌.ಶೆಟ್ಟಿ ಇರಾಕ್‌ನಿಂದ ಭಾರತಕ್ಕೆ ಶನಿವಾರ ಮರಳಿದ ಎಲ್ಲಾ46 ನರ್ಸ್‌ಗಳಿಗೂ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಲು ಸಿದ್ದರಿದ್ದಾರೆ ಎಂದು ಎನ್ಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.[ಕನ್ನಡಿಗ ಬಿಆರ್ ಶೆಟ್ಟಿ ತೆಕ್ಕೆಗೆ ಟ್ರಾವೆಲ್ ಎಕ್ಸ್]

B.R. Shetty
ಸೌದಿ ಆರೇಬಿಯಾ, ಈಜಿಪ್ಟ್‌‌‌‌ ಮತ್ತು ಭಾರತದಲ್ಲಿ ಆಸ್ಪತ್ರೆಗಳನ್ನು ತೆರೆದಿರುವ ಬಿ.ಆರ್‌.ಶೆಟ್ಟಿಯವರು ಈ ಸಂಬಂಧವಾಗಿ ಕೇರಳದ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಂಸಾಪೀಡಿತ ಇರಾಕ್‌ನಲ್ಲಿ ಐಎಸ್‌ಐಎಸ್ ಜಿಹಾದಿಗಳ ವಶದಲ್ಲಿದ್ದ 45 ಮಂದಿ ಕೇರಳ ನರ್ಸ್‌ಗಳು, ತಮಿಳುನಾಡಿನ ಒಬ್ಬರು ನರ್ಸ್‌‌ ಭಾರತಕ್ಕೆ ಶನಿವಾರ ಮರಳಿದ್ದರು. ಈ ಹಿನ್ನಲೆಯಲ್ಲಿ ಬಿ.ಆರ್‌.ಶೆಟ್ಟಿ ಕೇರಳ ಮುಖ್ಯಮಂತ್ರಿಯವರ ಜೊತೆಗೆ ಉದ್ಯೋಗ ನೀಡುವ ಸಲುವಾಗಿ ಮಾತನಾಡಿದ್ದಾರೆ.[ಉಗ್ರರ ಕಪಿಮುಷ್ಟಿಯಿಂದ ಪಾರು, ನರ್ಸ್ ಗಳು ಭಾರತಕ್ಕೆ]

English summary
A leading UAE-based Indian businessman has offered jobs to 46 Indian nurses who returned to their homeland after being stranded for about a month in the militants-held region in Iraq.NMC Healthcare Group CEO Dr. B.R. Shetty has made the offer to nurses, assuring them he would find place for them in the UAE, an NMC official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X