ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಸಂಪುಟದಲ್ಲಿ ಮತ್ತೊಬ್ಬ ಭಾರತೀಯೆ; ಆರತಿ ಪ್ರಭಾಕರ್ ವಿಜ್ಞಾನ ಸಲಹೆಗಾರ್ತಿ

|
Google Oneindia Kannada News

ವಾಷಿಂಗ್ಟನ್, ಜೂನ್ 22: ಭಾರತ ಮೂಲದ ಡಾ. ಆರತಿ ಪ್ರಭಾಕರ್ ಅವರನ್ನು ಅಮೆರಿಕ ಸರಕಾರದ ವಿಜ್ಞಾನ ಸಲಹೆಗಾರ್ತಿಯಾಗಿ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ.

"ಆಫೀಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯ (OSTP) ನಿರ್ದೇಶಕಿಯಾಗಿ ಸೇವೆ ಸಲ್ಲಿಸಲು ಮತ್ತು ಅಧ್ಯಕ್ಷರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯಕಿಯಾಗಿ ಡಾ. ಆರತಿ ಪ್ರಭಾಕರ್ ಅವರನ್ನು ನಾಮನಿರ್ದೇಶನ ಮಾಡುವ ಉದ್ದೇಶವನ್ನು ಅಧ್ಯಕ್ಷ ಬೈಡನ್ ಇಂದು ಪ್ರಕಟಿಸಿದ್ದಾರೆ," ಎಂದು ಶ್ವೇತಭನವದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಭಾರತೀಯ ಅಮೆರಿಕನ್ ಸಮುದಾಯದವರು ಒಎಸ್‌ಟಿಪಿಯನ್ನು ಮುನ್ನಡೆಸಿ ವಿಜ್ಞಾನ, ತಂತ್ರಜ್ಞಾನಕ್ಕೆ ಪುಷ್ಟಿ ಕೊಡುತ್ತಾರೆ. ನಮ್ಮ ಅತ್ಯಂತ ಕಠಿಣ ಸವಾಲುಗಳಿಗೆ ಪರಿಹಾರ ಹುಡುಕುತ್ತಾರೆ, ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತಾರೆ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ವೇಳೆ ಭಾರತೀಯ ಅಮೆರಿಕನ್ ಸಮುದಾಯದವರ ಗುಣಗಾನ ಮಾಡಿದ್ದಾರೆ.

Dr Arati Prabhakar Nominated As US Presidents Science Advisor

ಆರತಿ ಪ್ರಭಾಕರ್ ಯಾವ ಊರಿನವರು?
1959, ಫೆಬ್ರವರಿ 2ರಂದು ದೆಹಲಿಯಲ್ಲಿ ಹುಟ್ಟಿದ ಆರತಿ ಪ್ರಭಾಕರ್ ಮೂರು ವರ್ಷದವರಿದ್ದಾಗ ಅಮೆರಿಕಕ್ಕೆ ತಮ್ಮ ಕುಟುಂಬದ ಜೊತೆ ಹೋಗಿ ಅಲ್ಲಿಯೇ ನೆಲಸಿದ್ಧಾರೆ. ಶಿಕಾಗೋದಲ್ಲಿ ಬಾಲ್ಯ ಕಳೆದ ಅವರು ೧೦ನೇ ವಯಸ್ಸಿನಲ್ಲಿ ಟೆಕ್ಸಾಸ್ ರಾಜ್ಯಕ್ಕೆ ಹೋದರು. ಅಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.

ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆರತಿ ಪ್ರಭಾಕರ್ ಅನ್ವಯಿಕ ಭೌತಶಾಸ್ತ್ರ (Applied Physics) ದಲ್ಲಿ ಪಿಎಚ್‌ಡಿ ಪಡೆದು ಡಾ. ಆರತಿ ಪ್ರಭಾಕರ್ ಎನಿಸಿದರು. ಇಲ್ಲಿ ಈ ಸಬ್ಜೆಕ್ಟ್‌ನಲ್ಲಿ ಪಿಎಚ್‌ಡಿ ಪಡೆದ ಮೊದಲ ಮಹಿಳೆ ಎಂಬ ಗೌರವವೂ ಅಗದ್ದಾಗಿದೆ. ಅದೇ ಶಿಕ್ಷಣ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಕೂಡ ಮಾಡಿದರು.

Dr Arati Prabhakar Nominated As US Presidents Science Advisor

ಡಾ. ಆರತಿ ಪ್ರಭಾಕರ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಪಕ್ವತೆ ಮತ್ತು ಅನುಭವ ಹೊಂದಿದ್ದಾರೆ. ಅಮೆರಿಕದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಸ್ಟ್ಯಾಂಡರ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದಾರೆ. ಅಂಥದ್ದೊಂದು ಹುದ್ದೆ ನಿಭಾಯಿಸಿದ ಮೊದಲ ಮಹಿಳೆ ಅವರು. ರಕ್ಷಣಾ ಯೋಜನೆಯ ಡಿಎಆರ್‌ಪಿಎ ಸಂಸ್ಥೆಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಸ್ಟೀಲ್ತ್ ಏರ್‌ಕ್ರಾಫ್ಟ್ (Stealth Aircraft) ಮೊದಲಾದ ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು ಈ ಸಂಸ್ಥೆಯಲ್ಲೇ. ಸ್ಟೀಲ್ತ್ ಏರ್‌ಕ್ರಾಫ್ಟ್ ಎಂದರೆ ರಾಡಾರ್ ಕಣ್ಣಿಗೆ ಬೀಳದಂತೆ ಮುನ್ನುಗ್ಗಿ ಹೋಗಬಲ್ಲ ಯುದ್ಧವಿಮಾನ.

ಕ್ಯಾಬಿನೆಟ್ ಸ್ಥಾನ:
ಜೋ ಬೈಡನ್ ಸರಕಾರದ ಸಂಪುಟದಲ್ಲಿ ಡಾ. ಆರತಿ ಪ್ರಭಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಸಿಕ್ಕಿದೆ. ಬೈಡನ್ ಸಂಪುಟಕ್ಕೆ ಈಗ ಇಬ್ಬರು ಭಾರತೀಯ ಮೂಲದವರು ಸಿಕ್ಕಂತಾಗಿದೆ. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

Virat Kohli ಗೆ Covid Positive: BCCI ಮಾಡಿದ್ದೇನು? ನೆಕ್ಸ್ಟ್ ಮ್ಯಾಚ್ ಕಥೆ ಏನು? | *Cricket | OneIndia

English summary
America President Joe Biden has nominated Indian American Dr. Arati Prabhakar as his Science advisor. She becomes member of President's cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X