ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆನೆಜುವೆಲಾದ ಜೈಲಲ್ಲಿ ಮಾರಾಮಾರಿ, 46 ಮಂದಿ ಸಾವು

|
Google Oneindia Kannada News

ವೆನೆಜುವೆಲಾ, ಮೇ 03: ಪಶ್ಚಿಮ ವೆನೆಜುವೆಲಾದ ರಾಜ್ಯ ಪೋರ್ತುಗೀಸಾದ ಜೈಲಿನಲ್ಲಿ ನಡೆದ ಮಾರಾಮಾರಿಯಲ್ಲಿ 46 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಾಸ್ ಲಿಯಾನೊಸ್ ಪೆನಿಟೆನ್ಶಿನರಿಯಲ್ಲಿ ನಡೆದ ಎಸ್ಕೇಪ್ ಪ್ರಯತ್ನದಲ್ಲಿ ಬಂದೀಖಾನೆ ನಿರ್ದೇಶಕರಿಗೆ ಗುಂಡು ತಗುಲಿದೆ.

ಕೈದಿಗಳಿಗೆ ಮನೆಯಿಂದ ಊಟ ಪೂರೈಕೆಗೆ ನಿರ್ಬಂಧ ಹೇರಿದ್ದನ್ನು ಕೈದಿಗಳು ವಿರೋಧಿಸಿದ್ದರು. ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಇದು ಅಗತ್ಯ ಕ್ರಮ ಎಂದು ಸರ್ಕಾರ ಹೇಳಿತ್ತು.

ವೆನೆಜುವೆಲ್ಲಾದಲ್ಲಿ 335 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 10 ಮಂದಿ ಕೊವಿಡ್ 19ಕ್ಕೆ ಬಲಿಯಾಗಿದ್ದಾರೆ. ಒಂದುಕಾಲದಲ್ಲಿ ತೈಲ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ವೆನೆಜುವೆಲಾ ಈಗ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. 5 ಲಕ್ಷಕ್ಕೂ ಅಧಿಕ ಮಂದಿ ವಲಸೆ ಹೋಗಿದ್ದಾರೆ.

Dozens killed in Venezuela prison riot

ವೆನೆಜುವೆಲಾದಲ್ಲಿ 500 ಜೈಲುಗಳಲ್ಲಿ 110,000 ಕೈದಿಗಳನ್ನು ಹೊಂದುವ ಸಾಮರ್ಥ್ಯವಿದೆ. ಡ್ರಗ್ಸ್ ಮಾಫಿಯಾ, ಅಕ್ರಮ ಶಸ್ತ್ರಾಸ್ತ್ರ ಆರೋಪ ಹೊತ್ತ ಕೈದಿಗಳೆ ಆಧಿಕವಾಗಿದ್ದಾರೆ.

ಸುಮಾರು 750 ಕೈದಿಗಳ ಸಾಮರ್ಥ್ಯವುಳ್ಳ ಜೈಲಿನಲ್ಲಿ 2,500 ಕೈದಿಗಳನ್ನು ತುಂಬಲಾಗಿತ್ತು. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿದ್ದರು ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ.ಒಂದು ವರ್ಷದ ಕೆಳಗೆ ಇದೇ ರೀತಿ ದುರ್ಘಟನೆ ನಡೆದು, 29 ಮಂದಿ ಮೃತರಾಗಿದ್ದರು.

English summary
A prison riot in the western Venezuelan state of Portuguesa has left at least 46 people dead and 60 injured, according to a rights group and an opposition lawmaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X