ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಡೋಸ್ ಲಸಿಕೆ ಪಡೆದವರಲ್ಲಿ ದೀರ್ಘಕಾಲೀನ ಪರಿಣಾಮ ಕಡಿಮೆ

|
Google Oneindia Kannada News

ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪಡೆಯದವರಲ್ಲಿ, 20 ಜನರಲ್ಲಿ ಒಬ್ಬರಿಗೆ ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಂಡರೆ ಆ ಲಕ್ಷಣಗಳು ಎಂಟು ವಾರಗಳವರೆಗೂ ಉಳಿಯುತ್ತವೆ. 50 ಮಂದಿಯಲ್ಲಿ ಒಬ್ಬರಿಗೆ ಮೂರು ತಿಂಗಳವರೆಗೂ ಸೋಂಕಿನ ಲಕ್ಷಣಗಳು ಉಳಿದುಕೊಳ್ಳುತ್ತವೆ.

ಈ ನಿಟ್ಟಿನಲ್ಲಿ ಕೊರೊನಾ ಲಸಿಕೆ ದೀರ್ಘಕಾಲೀನ ರೋಗಲಕ್ಷಣಗಳನ್ನು ತಡೆಯಬಹುದೇ ಎಂಬ ಕುರಿತು ಹಲವು ಅಧ್ಯಯನಗಳು ನಡೆದಿವೆ. ಬ್ರಿಟನ್‌ನಲ್ಲಿ ಕೂಡ ಈ ಸಂಬಂಧ ಅಧ್ಯಯನ ನಡೆದಿದ್ದು, ಕೊರೊನಾ ಲಕ್ಷಣಗಳ ಅಧ್ಯಯನ ನಡೆಸಿದ ಸುಮಾರು ದಶಲಕ್ಷ ಮಂದಿಯ ದತ್ತಾಂಶಗಳನ್ನು ಪರಿಗಣಿಸಲಾಗಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ಶೇ.66ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ18 ವರ್ಷಕ್ಕಿಂತ ಮೇಲ್ಪಟ್ಟ ಶೇ.66ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ

ಅಧ್ಯಯನದ ಮಾಹಿತಿಯ ಇತ್ತೀಚಿನ ವಿಶ್ಲೇಷಣೆ, ಸುಮಾರು ಎರಡು ಮಿಲಿಯನ್ ಲಸಿಕೆ ಡೋಸ್‌ಗಳನ್ನು ಒಳಗೊಂಡಂತೆ ಲಸಿಕೆಗಳು ಕೊರೊನಾ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸುತ್ತದೆ. ಸಂಪೂರ್ಣ ಲಸಿಕೆ ಪಡೆದುಕೊಂಡವರಲ್ಲಿ 0.2% ಜನರು ಮಾತ್ರ ವೈರಸ್‌ಗೆ ತುತ್ತಾಗಿರುವುದು ಕಂಡುಬಂದಿದೆ.

Double Vaccination Reduces Risk Of Developing Long Lasting Symptoms

ಲಸಿಕೆ ಪಡೆದುಕೊಂಡ ನಂತರವೂ ನಿಮಗೆ ಸೋಂಕು ತಗುಲಿದರೆ ತೀವ್ರ ಅನಾರೋಗ್ಯ ಅಥವಾ ಮರಣ ಪ್ರಮಾಣ ಲಸಿಕೆಯಿಂದಾಗಿ ತಗ್ಗಿರುವುದು ಕಂಡುಬಂದಿದೆ. ಎರಡು ಡೋಸ್ ಲಸಿಕೆ ಪಡೆದುಕೊಂಡ ಜನರು ತೀವ್ರ ಕೊರೊನಾ ಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಶೇ 31ರಷ್ಟು ಕಡಿಮೆಯಿದೆ ಹಾಗೂ ಆಸ್ಪತ್ರೆಗೆ ಸೇರುವ ಪ್ರಮಾಣವು 73%ರಷ್ಟು ತಗ್ಗುತ್ತದೆ ಎಂಬುದನ್ನು ತಿಳಿಸಿದೆ.

ಬ್ರಿಟನ್‌ನಲ್ಲಿ ಈಗ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದರೂ ಆಸ್ಪತ್ರೆ ಸೇರುತ್ತಿರುವವರ ಪ್ರಮಾಣ ಹಾಗೂ ಮರಣ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಲಸಿಕೆ ಪಡೆದುಕೊಂಡಿರುವುದೇ ಕಾರಣ ಎನ್ನಲಾಗಿದೆ.

ಕೋವಿಡ್ ಲಸಿಕೆ ಅಭಿಯಾನ; ಸಿಬ್ಬಂದಿಗೆ ಭಾನುವಾರ ವಿರಾಮಕೋವಿಡ್ ಲಸಿಕೆ ಅಭಿಯಾನ; ಸಿಬ್ಬಂದಿಗೆ ಭಾನುವಾರ ವಿರಾಮ

ಲಸಿಕೆ ಪಡೆದ ನಂತರ ಕೊರೊನಾ ಸೋಂಕಿನೊಂದಿಗೆ ಅನಾರೋಗ್ಯಕ್ಕೆ ಒಳಗಾದವರಿಗೆ ಕೇವಲ 5% ಜನರಲ್ಲಿ ನಾಲ್ಕು ವಾರಗಳಿಗಿಂತ ಹೆಚ್ಚು ಅವಧಿ ರೋಗಲಕ್ಷಣಗಳನ್ನು ಹೊಂದಿದ್ದರು. ಅಂದರೆ ದೀರ್ಘ ಕೋವಿಡ್ ಲಕ್ಷಣಗಳ ಪ್ರಭಾವ ಅರ್ಧಕ್ಕರ್ಧ ಇಳಿದಿರುವುದು ಕಂಡುಬಂದಿದೆ. ಹೀಗಾಗಿ ದೀರ್ಘ ಕೊರೊನಾ ಲಕ್ಷಣಗಳನ್ನು ತಡೆಯಬೇಕಾದರೆ ಇರುವ ಒಂದು ಮಾರ್ಗವೆಂದರೆ ಎರಡು ಡೋಸ್‌ಗಳ ಲಸಿಕೆಯನ್ನು ಪಡೆದುಕೊಳ್ಳುವುದು ಎಂದು ವಿಶ್ಲೇಷಣೆ ನೀಡಲಾಗಿದೆ.

Double Vaccination Reduces Risk Of Developing Long Lasting Symptoms

ಭಾರತದಲ್ಲಿ 84.15 ಕೋಟಿ ಮಂದಿಗೆ ಕೊರೊನಾ ಲಸಿಕೆ ವಿತರಣೆ:

ಕೊರೊನಾ ಲಸಿಕೆ ಅಭಿಯಾನವನ್ನು ಭಾರತದಲ್ಲಿ ವೇಗಗತಿಯಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿ 84.15 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 250 ದಿನಗಳಾಗಿದೆ. ಕಳೆದ 24 ಗಂಟೆಗಳಲ್ಲಿ 72,20,642 ಮಂದಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದ್ದು, ಈವರೆಗೂ 84,15,18,026 ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 81,39,33,785 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Recommended Video

ಕೊನೆ ಕ್ಷಣದಲ್ಲಿ ಪಂದ್ಯಕ್ಕೆ ತಿರುವು ಕೊಟ್ಟ ಹರ್ಷಲ್ | Oneindia Kannada

ದೇಶದಲ್ಲಿ ಈವರೆಗೂ 62,24,19,377 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 21,84,01,813 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Double vaccination reduces risk of developing long lasting symptoms
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X