• search
For Quick Alerts
ALLOW NOTIFICATIONS  
For Daily Alerts

  ಟ್ರಂಪ್ ಯು ಟರ್ನ್: ಪಾಕ್ ಗಷ್ಟೇ ಅಲ್ಲ, ಅಮೆರಿಕಕ್ಕೂ ಮುಖಭಂಗ!

  |
    ಪಾಕಿಸ್ತಾನದ ಬಗ್ಗೆ ತಾನೇ ಆಡಿದ ಮಾತಿಗೆ ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್ | Oneindia Kannada

    ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೊದಲು, ಭಯೋತ್ಪಾದನೆಯ ದಮನವೇ ನನ್ನ ಮೊದಲ ಆದ್ಯತೆ ಎಂದಿದ್ದವರು ಡೊನಾಲ್ಡ್ ಟ್ರಂಪ್! ಅಧಿಕಾರಕ್ಕೆ ಬರುವ ಮೊದಲು ಹಲವು ಮುಸ್ಲಿಂ ದೇಶಗಳ ನಿಷ್ಠುರ ಕಟ್ಟಿಕೊಂಡಿದ್ದ ಟ್ರಂಪ್, ಸಿಂಹಾಸನಾರೂಢರಾಗುತ್ತಿದ್ದಂತೆಯೇ ವರಸೆಯನ್ನೇ ಬದಲಿಸಿದ್ದರು! ಪಾಕಿಸ್ತಾನವನ್ನು ತನ್ನದೇ ಪುಟ್ಟ ಕೂಸು ಎಂಬಂತೆ ಹೊಗಳಿದ್ದೋ ಹೊಗಳಿದ್ದು, ಆರೈಕೆ ಮಾಡಿದ್ದೋ ಮಾಡಿದ್ದು! ಆದರೆ ಇದೀಗ ಅಚಾನಕ್ಕಾಗಿ ಯು ಟರ್ನ್ ಹೊಡೆದಿದ್ದಾರೆ!

    ಟ್ರಂಪ್, ಪಾಕ್ ವಿರೋಧಿ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿ ಬೆಂಬಲ

    ಪಾಕಿಸ್ತಾನದ ಕುತಂತ್ರದ ಅರಿವಾದ ನಂತರ, ಅದು ಅಮೆರಿಕದಂಥ ಅಮೆರಿಕವನ್ನೇ ಮೂರ್ಖನನ್ನಾಗಿ ಮಾಡುತ್ತಿದೆ ಎಂಬುದು ತಿಳಿದ ನಂತರ ತಮ್ಮ ವರಸೆಯನ್ನು ಮತ್ತೊಮ್ಮೆ ಬದಲಿಸಿದ್ದಾರೆ! ಪಾಕಿಸ್ತಾನಕ್ಕೆ ಇನ್ನು ಮೇಲೆ ಯಾವುದೇ ನೆರವು ನೀಡುವುದಿಲ್ಲ ಎಂದು ಘಂಟಾಘೋಷವಾಗಿ ಟ್ವೀಟಿಸಿದ ಟ್ರಂಪ್ ನಡೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೂ ಮುನ್ನ, ಅಂದರೆ ಕಳೆದ ಅಕ್ಟೋಬರ್ 14 ರಂದು ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, "ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಅಮೆರಿಕ ಸದಾ ಉತ್ಸುಕವಾಗಿದೆ. ನಮಗೆ ಹಲವು ವಿಧಗಳಲ್ಲಿ ನೆರವು ನೀಡುತ್ತಿರುವ ಪಾಕಿಸ್ತಾನಕ್ಕೆ ನಮ್ಮ ಧನ್ಯವಾದ" ಎಂದಿದ್ದರು.

    ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ಧ ಟ್ರಂಪ್

    ಇದೀಗ ಯು ಟರ್ನ್ ಹೊಡೆದು, "ಪಾಕಿಸ್ತಾನ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ. ನಾವು ಅವರಿಗೆ ಕಳೆದ 15 ವರ್ಷಗಳಿಂದ ನೆರವು ನೀಡುತ್ತಿದ್ದೇವೆ. ಆದರೆ ಪಾಕಿಸ್ತಾನ ನಮಗೆ ಸುಳ್ಳು ಮತ್ತು ಮೋಸವನ್ನು ಬಿಟ್ಟರೆ ಬೇರೇನೂ ನೀಡಿಲ್ಲ. ಇನ್ನು ಮೇಲೆ ನಾವು ಅವರಿಗೆ ನೆರವು ನೀಡುವುದಿಲ್ಲ" ಎಂದು ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷರ ಗೊಂದಲದ ಹೇಳಿಕೆಗಳು ಒಂದಷ್ಟು ವಿಡಂಬನೆಗೂ ಜಾಗಮಾಡಿಕೊಟ್ಟಿದೆ. ಏನೇ ಇದ್ದರೂ ಅಮೆರಿಕದ ಈ ನಡೆಯನ್ನಂತೂ ಭಾರತ ಅತ್ಯಂತ ಸಂತಸದಿಂದ ಸ್ವಾಗತಿಸುವುದು ಸತ್ಯ.

    ಇವರಿಗೆ ಏನೋ ಆಗಿದೆ!

    ಈ ವ್ಯಕ್ತಿಗೆ ಏನೋ ಸಮಸ್ಯೆಯಿದ್ದಂತಿದೆ! ಡೊನಾಲ್ಡ್ ಟ್ರಂಪ್ ಕೇವಲ ಎರಡೇ ತಿಂಗಳಿನಲ್ಲಿ ತಮ್ಮ ಹೇಳಿಕೆಗಳನ್ನು ಬದಲಿಸುತ್ತಿದ್ದಾರೆ! ಎಂದು ಟ್ವೀಟ್ ಮಾಡಿರುವ ರಾಮಶಾ ಖಾನ್ ಎಂಬುವವರು, ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಕುರಿತು ಟ್ವೀಟಿಸಿದ ಎರಡೂ ಟ್ವಿಟ್ಟರ್ ಗಳ ಚಿತ್ರವನ್ನು ತಮ್ಮ ಟ್ವಿಟ್ಟರ್ ನೊಂದಿಗೆ ಲಗತ್ತಿಸಿದ್ದಾರೆ!

    ಅಮೆರಿಕದ ಬಹುದೊಡ್ಡ ಶತ್ರು ಡೊನಾಲ್ಡ್ ಟ್ರಂಪ್!

    ಅಮೆರಿಕದ ಬಹುದೊಡ್ಡ ಶತ್ರು ಎಂದರೆ ಉತ್ತರ ಕೋರಿಯವಲ್ಲ, ಬದಲಾಗಿ ಡೊನಾಲ್ಡ್ ಟ್ರಂಪ್ ಎಂದು ಉದ್ವೇಗದಿಂದ ಟ್ವೀಟ್ ಮಾಡಿದ್ದಾರೆ ಟ್ರೇಸಿ ಟಾರ್ಸ್ ಎಂಬುವವರು. ಇದರೊಂದಿಗೆ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, 'ನಾನು ಅಮೆರಿಕವನ್ನು ನಾಶ ಮಾಡುತ್ತೇನೆ' ಎನ್ನುತ್ತಿರುವ ಚಿತ್ರವನ್ನೂ ಹಾಕಲಾಗಿದೆ. ಅದಕ್ಕೆ 'ನೀವು ಬಹಳ ತಡಮಾಡಿದಿರಿ' ಎಂದು ಡೊನಾಲ್ಡ್ ಟ್ರಂಪ್ ಹೇಳುತ್ತಿರುವಂತೆ ಮತ್ತೊಂದು ಚಿತ್ರ ಹಾಕಲಾಗಿದೆ!

    ನಮ್ಮ ಅಧ್ಯಕ್ಷರ ಬಗ್ಗೆ ಹೆಮ್ಮೆಯಾಗುತ್ತಿದೆ

    ಪಾಕಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದ ಡೊನಾಲ್ಡ್ ಟ್ರಂಪ್ ನಡೆಯ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಭಯೋತ್ಪಾದನೆಗೆ ನೆಲೆ ನೀಡಿದ ಮತ್ತು ಬಿನ್ ಲಾಡೆನ್ ನನ್ನು ಕಾಪಾಡಿದ ದೇಶಕ್ಕೆ ಇನ್ನು ಉಳಿಗಾಲವಿಲ್ಲ ಎಂದು ಚಾರ್ಲಿ ಕಿರ್ಕ್ ಎಂಬುವವರು ಟ್ವೀಟ್ ಮಾಡಿದ್ದಾರೆ.

    ನಮಗೆ ನಿಮ್ಮ ನೆರವು ಬೇಕಿಲ್ಲ!

    "ನಿಮ್ಮ ನೆರವನ್ನು ನೀವೇ ಇಟ್ಟುಕೊಳ್ಳಿ, ನಮಗೆ ಅದರ ಅಗತ್ಯವಿಲ್ಲ. ಭಯೋತ್ಪಾದನೆಯ ದಮನದ ಹೆಸರಿನಲ್ಲಿ ಎಲ್ಲ ದೇಶಗಳ ಸಂಪತ್ತನ್ನು ಕೊಳ್ಳೆಹೊಡೆಯುತ್ತಿರುವುದು ಅಮೆರಿಕ. ನಂತರ ನಮ್ಮದೇ ಹಣವನ್ನು ನಮಗೆ ನೀಡಿ ನೆರವು ಎನ್ನುತ್ತೀರಾ?!" ಎಂದು ಪಾಕಿಸ್ತಾನದ ಹಿಜಾಬ್ ಖಾನ್ ಎಂಬ ಮಹಿಳೆ ಟ್ವೀಟ್ ಮಾಡಿದ್ದಾರೆ.

    ಲಿವರ್ ಲಿಪ್ ಲೂಯಿ

    ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವನ್ನು ಡೊನಾಲ್ಡ್ ಟ್ರಂಪ್ ಹಿಂಪಡೆದಿದ್ದಾರೆ. ಈ ಇಲಿಗಳಿಗೆ ನಾವು ಭಯೋತ್ಪಾದನೆಯ ದಮನಕ್ಕಾಗಿ ಪ್ರತಿವರ್ಷ ನೂರಾರು ಕೋಟಿ ಡಾಲರ್ ನೀಡುತ್ತಿದ್ದೆವು. ಆದರೆ ಅವರು ಮಾತ್ರ ಭಯೋತ್ಪಾದನೆಯನ್ನೇ ಬೆಂಬಲಿಸಿಕೊಂಡು ಬಂದಿದ್ದರು, ಬಿನ್ ಲಾಡೆನ್ ನನ್ನು ರಕ್ಷಿಸಿದ್ದರು. ಇದನ್ನು ನಾನು ಹಲವು ಕಾಲದಿಂದ ಹೇಳುತ್ತ ಬಂದಿದ್ದೆ. ಈಗಲಾದರೂ ಅಮೆರಿಕ್ಕೆ ಬುದ್ಧಿ ಬಂತಲ್ಲ. ನಮ್ಮನ್ನು ದ್ವೇಷಿಸುವ ದೇಶಗಳಿಗೆ ನೆರವು ನೀಡುವುದನ್ನು ನಿಲ್ಲಿಸಿ ಎಂದು ಲಿವರ್ ಲಿಪ್ ಲೂಯಿ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    America President Donald Trump's tweet against pakistan becomes a international matter of debate now. Of course India welcomes his statement, but many people, including Americans question his confusinf steps. On October 2017, Trump himslef praised Pakistan and now he is blaming that nation.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more