ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕ ನಿಷೇಧ: ಮಸೂದೆ ಹಿಂಪಡೆದ ಟ್ರಂಪ್

ಅಮೆರಿಕದ ಅಧ್ಯಕ್ಷರಾದ ಬೆನ್ನಲ್ಲೇ ಕೈಗೊಂಡಿದ್ದ ಏಳು ರಾಷ್ಟ್ರಗಳಿಗೆ ಅಮೆರಿಕ ಪ್ರವೇಶ ನಿಷೇಧದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸ ನೀತಿ ಪ್ರಕಟಿಸಲು ನಿರ್ಧರಿಸಿದ ಟ್ರಂಪ್.

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ ಕೋ, ಫೆಬ್ರವರಿ 17: ಜಗತ್ತಿನ ಏಳು ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕದ ಪ್ರವಾಸದಿಂದ ನಿರ್ಬಂಧ ವಿಧಿಸಿದ್ದ ಡೊನಾಲ್ಡ್ ಟ್ರಂಪ್, ಅಮೆರಿಕ ನ್ಯಾಯಾಂಗವು ತಮ್ಮ ಮಸೂದೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆ ಮಸೂದೆಯನ್ನು ಹಿಂಪಡೆದಿದ್ದಾರೆ . ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅವರು ಈ ನಿರ್ಬಂಧದದ ನಿರ್ಧಾರ ಕೈಗೊಂಡಿದ್ದರು.

ಅದರಂತೆ, ಏಳು ಮುಸ್ಲಿಂ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮೆನ್ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವಾಸದಿಂದ ನಿರ್ಬಂಧ ವಿಧಿಸಲಾಗಿತ್ತು.

Donald Trump To Unveil New Version Of Travel Ban Order Next Week

ಆದರೆ, ಟ್ರಂಪ್ ಅವರ ನಿರ್ಧಾರ ತಿರಸ್ಕರಿಸಿದ್ದ ಅಮೆರಿಕದ ನ್ಯಾಯಾಂಗ, ಈ ನಿರ್ಧಾರ ಜಾರಿಗೆ ತರದಂತೆ ಟ್ರಂಪ್ ಸರ್ಕಾರಕ್ಕೆ ತಾಕೀತು ಮಾಡಿತ್ತು. ನ್ಯಾಯಾಲಯದ ಈ ನಿರ್ಧಾರದ ವಿರುದ್ಧ ಟ್ರಂಪ್ ಮೇಲ್ಮನವಿಯನ್ನೂ ಸಲ್ಲಿಸಿದ್ದರು. ಆದರೀಗ, ಮೇಲ್ಮನವಿಯನ್ನು ಹಿಂಪಡೆಯಲು ಟ್ರಂಪ್ ತೀರ್ಮಾನಿಸಿದ್ದಾರೆ.

ಮಸೂದೆಗೆ ಹೊಸ ರೂಪ: ಆದರೂ, ಸೋಲೊಪ್ಪಿಕೊಳ್ಳದ ಟ್ರಂಪ್, ತಾವು ರೂಪಿಸಿರುವ ಪ್ರವಾಸ ನಿರ್ಬಂಧ ನಿಯಮಕ್ಕೆ ಸೂಕ್ತ ತಿದ್ದುಪಡಿ ತಂದು ಹೊಸ ಸ್ವರೂಪದ ಮಸೂದೆಯನ್ನು ಮುಂದಿನ ವಾರದಲ್ಲಿ ಮಂಡಿಸುವುದಾಗಿ ತಿಳಿಸಿದ್ದಾರೆ.

ಮುಸ್ಲಿಂ ರಾಷ್ಟ್ರಗಳಿಗೆ ಅಮೆರಿಕ ಪ್ರವಾಸವನ್ನು ನಿರ್ಬಂಧಗೊಳಿಸಿದ ಟ್ರಂಪ್ ಅವರ ನಿರ್ಧಾರ ಭಾರೀ ಚರ್ಚೆ ಹಾಗೂ ವಿವಾದಗಳನ್ನು ಹುಟ್ಟುಹಾಕಿತ್ತು. ಅಮೆರಿಕದ ದೈತ್ಯ ಐಟಿ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್ ಸೇರಿದಂತೆ ಸುಮಾರು ಹತ್ತಾರು ಕಂಪನಿಗಳು ಅಮೆರಿಕದ ನ್ಯಾಯಾಲಯದಲ್ಲಿ ಟ್ರಂಪ್ ಅವರ ನಿರ್ಧಾರದ ವಿರುದ್ಧ ದಾವೆ ಹೂಡಿದ್ದವು.

ಟ್ರಂಪ್ ಅವರ ನಿರ್ಧಾರದಿಂದ ಅಮೆರಿಕದ ಐಟಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಅವರ ವಾದವಾಗಿತ್ತು.

English summary
US President Donald Trump said he will issue a new version next week of his executive order banning citizens of seven mostly Muslim countries and all refugees from travelling to the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X