ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹಾಗೂ ಭಾರತೀಯರನ್ನು ವಿಶ್ವದ ಮುಂದೆ ಹೊಗಳಿದ ಟ್ರಂಪ್

|
Google Oneindia Kannada News

ವಾಷಿಂಗ್ಟನ್ , ಏಪ್ರಿಲ್ 09: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಜನತೆಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಾರತದ ಪ್ರಧಾನಿಯ ಜೊತೆಗೆ ಭಾರತದ ಜನತೆಯನ್ನು ಗುಣಗಾನ ಮಾಡಿದ್ದಾರೆ.

''ಅಸಾಧಾರಣ ಸಮಯಗಳಿಗೆ ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ. ಧನ್ಯವಾದ ಭಾರತ ಹಾಗೂ ಭಾರತದ ಜನತೆಗೆ ನೀವು ತೆಗೆದುಕೊಂಡ ಹೈಡ್ರಾಕ್ಸಿಕ್ಲೋರೋಕ್ವಿನ್ ನಿರ್ಧಾರಕ್ಕೆ. ನಾವು ನಿಮ್ಮನ್ನು ಮರೆಯುವುದಿಲ್ಲ. ಬರೀ ಭಾರತವನ್ನು ಮಾತ್ರವಲ್ಲದೆ ಮನುಷ್ಯತ್ವದಿಂದ ಸಹಾಯ ಮಾಡುತ್ತಿರುವ ನರೇಂದ್ರ ಮೋದಿ ನಿಮ್ಮ ಬಲಿಷ್ಟ ನಾಯಕಯತ್ವಕ್ಕೆ ಧನ್ಯವಾದ.'' ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್

ಕೆಲ ದಿನಗಳ ಹಿಂದೆಯಷ್ಟೇ ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧ) ಔಷಧ ನೀಡುವಂತೆ ಬೇಡಿಕೆಯಿಟ್ಟು ಮೋದಿ ಬಳಿ ಟ್ರಂಪ್ ಚರ್ಚಿಸಿದ್ದಾರೆ. ಭಾರತ ಪ್ರಧಾನಿ ಮೋದಿ ಬಳಿ ದೂರವಾಣಿಯಲ್ಲಿ ಮನವಿ ಮಾಡಿಕೊಂಡ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.

Donald Trump Thanked Narendra Modi And Indians

ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧ) ಔಷಧ ಕೊಡಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ ಅದಕ್ಕೆ ಪ್ರತಿಕಾರವೂ ಇರಬಹುದು. ಏಕೆ ಇರಬಾರದೇ?'' ಎಂದು ಅಮೆರಿಕಾ ತನ್ನ ಅಸಹಾಯಕತೆ ಹೊರಹಾಕಿತ್ತು.

ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'

ಆದರೆ, ಆ ನಂತರ ಭಾರತ ಅಗತ್ಯ ಇರುವ ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ನಿರ್ಧಾರ ಮಾಡಿತ್ತು. ಅದೇ ರೀತಿ ಅಮೆರಿಕಕ್ಕೂ ಮಾತ್ರಗಳು ಕಳುಹಿಸಿದ್ದು, ಅದು ಸದ್ಯದಲ್ಲಿಯೇ ಅಲ್ಲಿಗೆ ತಲುಪುತ್ತಿದೆ. ಇದೇ ಕಾರಣದಿಂದಲೋ ಏನು ಡೊನಾಲ್ಡ್ ಟ್ರಂಪ್ ತಮ್ಮ ವರಸೆ ಬದಲಿಸಿದ್ದಾರೆ.

English summary
America President Donald Trump thanked Indian prime ministers Narendra Modi and Indians in his twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X