ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನರಿಗೆ ಮೊದಲ ಆದ್ಯತೆ, ಇದೇ ನನ್ನ ಆಡಳಿತದ ಮೂಲಮಂತ್ರ

ನಿರೀಕ್ಷೆಯಂತೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಔದ್ಯೋಗಿಕ ಕ್ಷೇತ್ರಗಳಲ್ಲಿ ಅಮೆರಿಕನ್ನರಿಗೇ ಮೊದಲ ಪ್ರಾಶಸ್ತ್ಯ ನೀಡುವ ಘೋಷಣೆ ಮಾಡಿದ್ದಾರೆ.

|
Google Oneindia Kannada News

ವಾಷಿಂಗ್ಟನ್, ಜನವರಿ 20: "ಅಮೆರಿಕದ ಉತ್ಪನ್ನಗಳನ್ನೇ ಕೊಳ್ಳಿರಿ, ಅಮೆರಿಕನ್ನರ ಸೇವೆಗೇ ಮೊದಲ ಆದ್ಯತೆ ನೀಡಿರಿ'' ಅಮೆರಿಕದ 45ನೇ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಜನರಿಗೆ ನೀಡಿದ ಕರೆಯಿದು.

ರಾಜಧಾನಿ ವಾಷಿಂಗ್ಟನ್ ನಲ್ಲಿರುವ ಅಮೆರಿಕದ ಶಕ್ತಿ ಸೌಧವಾದ ಕ್ಯಾಪಿಟಾಲ್ ಬಳಿ ನಡೆದ ಭವ್ಯ ಸಮಾರಂಭದಲ್ಲಿ, ಭಾರತೀಯ ಕಾಲಮಾನ ರಾತ್ರಿ 10: 35ರ ಸುಮಾರಿಗೆ ಅವರು ಪ್ರಮಾಣ ವಚನ ಸ್ವೀಕರಿಸಿದರು.

Donald Trump takes oath as 45th president of United Stats of America

ಸುಮಾರು 90 ಸಾವಿರ ಸಮ್ಮುುಖದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ, ತಮ್ಮ ಮೊಟ್ಟಮೊದಲ ಅಧ್ಯಕ್ಷೀಯ ಭಾಷಣ ಆರಂಭಿಸಿದ ಅವರು, ಜನರಿಂದ ಚುನಾಯಿತವಾಗಿರುವ ಈ ಸರ್ಕಾರವನ್ನು ಜನರ ಬಳಿಗೆ ತರುವುದು ನನ್ನ ಆಡಳಿತದಲ್ಲಿ ನಾನು ಕೊಡುವ ಮೊದಲ ಆದ್ಯತೆ ಎಂದು ತಿಳಿಸಿದರಲ್ಲದೆ, ಅಮೆರಿಕದ ಉತ್ಪನ್ನಗಳಿಗೆ ಹಾಗೂ ಅಮೆರಿಕನ್ನರ ಸೇವೆಗೇ ಮೊದಲ ಆದ್ಯತೆ ನೀಡಬೇಕೆಂದು ಪ್ರಜೆಗಳಿಗೆ ಕರೆ ನೀಡಿದರು.

ಈ ಮೂಲಕ ಅಮೆರಿಕಕ್ಕೆ ವಲಸೆ ಹೋಗಿ ನೆಲೆನಿಂತಿರುವ ಲಕ್ಷಾಂತರ ಭಾರತೀಯರಿಗೆ ಪರೋಕ್ಷವಾದ ಎಚ್ಚರಿಕೆಯನ್ನೂ ಅವರು ರವಾನಿಸಿದರು. ಅವರ ಭಾಷಣದ ಪ್ರಮುಖಾಂಶಗಳು ಇಲ್ಲಿವೆ.

- ಈ ದಿನ ನನಗೆ ಅತ್ಯಂತ ಸಂತೋಷವಾದ ದಿನ.

- ನನ್ನನ್ನು ಅಮೆರಿಕದ ಅಧ್ಯಕ್ಷನನ್ನಾಗಿ ಆರಿಸಿದ ಅಮೆರಿಕದ ಜನತೆಗೂ, ಇಡೀ ವಿಶ್ವಕ್ಕೂ ನಾನು ನನ್ನ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ.

- ಈ ಸಂತೋಷದ ಸಮಯ ಕೇವಲ ನನ್ನದು ಮಾತ್ರವಲ್ಲ, ನಿಮ್ಮದೂ ಸಹ.

- ಈ 'ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ' ಎಂಬ ದೇಶ ನಮ್ಮದು.

- ಮುಂದಿನ ವರ್ಷಗಳಲ್ಲಿ ಅಮೆರಿಕವು ವಿಶ್ವದಲ್ಲೇ ಹೊಂದಿರುವ ತನ್ನ ಪ್ರತಿಷ್ಠೆಯನ್ನು ಕಾಪಿಡುವ ನಿಟ್ಟಿನಲ್ಲಿ ನಾವೆಲ್ಲರೂ ಈ ದೇಶವನ್ನು ಮತ್ತಷ್ಟು ಸರ್ವಾಂಗೀಣವಾಗಿ ಬಲಿಷ್ಠಗೊಳಿಸಬೇಕಿದೆ.

- ದೇಶವನ್ನು ಕಟ್ಟುವ ವಿಚಾರದಲ್ಲಿ ನಾವು ಹಲವಾರು ಸವಾಲುಗಳನ್ನು, ನೋವುಗಳನ್ನು ಎದುರಿಸಲು ನಾವು ಸಿದ್ಧರಾಗೋಣ.

- ಈ ಹಿಂದಿನ ಅಧ್ಯಕ್ಷರಾದ ಬರಾಕ್ ಒಬಾಮ ಹಾಗೂ ಅವರ ಪತ್ನಿ ಹಾಗೂ ಮೊದಲ ಮಹಿಳೆಯಾಗಿದ್ದ ಮಿಷೆಲ್ ಒಬಾಮ ಈ ದೇಶವನ್ನು ಸದೃಢವನ್ನಾಗಿಸಿದ್ದಾರೆ. ಆ ನಿಟ್ಟಿನಲ್ಲಿ ಅವರ ಕಾರ್ಯ ಅಮೋಘವಾದುದು. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಬಯಸುತ್ತೇನೆ.

- ಎಲ್ಲರೂ ತಿಳಿಯುತ್ತಾರೆ, ವಾಷಿಂಗ್ಟನ್ ನಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂತೆಂದು. ಆದರೆ, ನಾನು ಹೇಳುತ್ತೇನೆ. ಸರ್ಕಾರ ಜನರ ಬಳಿಯೇ ಇದೆ. ಅದನ್ನು ಅವರು ವಾಷಿಂಗ್ಟನ್ ಗೆ ಹಸ್ತಾಂತರಿಸಿರುತ್ತಾರೆ.

- ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನರಿಂದ ಹಸ್ತಾಂತರಗೊಂಡಿರುವ ಸರ್ಕಾರವನ್ನು ಪುನಃ ಜನರ ಬಳಿಯೇ ಕೊಂಡೊಯ್ಯುತ್ತೇನೆ.

- ದೇವರು ನಮ್ಮನ್ನು ಕಾಪಾಡುತ್ತಾನೆ.

- ಈ ದಿನದಿಂದ ಅಮೆರಿಕದಲ್ಲಿ ಅಮೆರಿಕನ್ನರೇ ಮೊದಲು ಎಂಬ ಧ್ಯೇಯ ವಾಕ್ಯ ಮೊಳಗಲಿದೆ. ಅದೇ ನನ್ನ ಸರ್ಕಾರದ ಆಡಳಿತದ ಮೂಲಮಂತ್ರವೂ ಆಗಿರಲಿದೆ.

- ಅಮೆರಿಕನ್ನರ ಕನಸುಗಳನ್ನು, ಅವರ ಅವಕಾಶಗಳನ್ನು ಅವರಿಗೇ ಮರಳಿಸಲು ಶ್ರಮಿಸುತ್ತೇನೆ.

- ರಾಷ್ಟ್ರವನ್ನು ಕಟ್ಟುವ ಅನನ್ಯವಾದ ಈ ಪರಿಶ್ರಮದಲ್ಲಿ ಅಮೆರಿಕದ ಮಹಾ ಜನತೆ ತನ್ನ ಶಕ್ತಿಮೀರಿದ ಸಹಭಾಗಿತ್ವವನ್ನು ನೀಡುತ್ತದೆ ಎಂದು ನಾನು ಬಲವಾಗಿ ನಂಬಿದ್ದೇನೆ.

- ಈ ಸಂದರ್ಭದಲ್ಲಿ ನಾನು ನಿಮಗೆ ನೀಡುವ ಕರೆ ಏನೆಂದರೆ - ಅಮೆರಿಕದ ವಸ್ತುಗಳನ್ನೇ ಕೊಳ್ಳಿರಿ, ಅಮೆರಿಕದವರಿಂದಲೇ ಸೇವೆ ಪಡೆಯಿರಿ.

- ಅಮೆರಿಕವು ಮತ್ತೊಮ್ಮೆ ಗೆಲ್ಲುವುದನ್ನು ಆರಂಭಿಸಲಿದೆ. ಆದರೆ, ಈ ದೇಶವು ಮುಂದೆ ಸಾಧಿಸುವ ಗೆಲವುಗಳು ಸಾಮಾನ್ಯವಲ್ಲ. ಅವೆಲ್ಲವೂ ಅಭೂತಪೂರ್ವ ಗೆಲುವುಗಳಾಗಲಿವೆ.

- ನಾವು ನಮ್ಮ ಜೀವನ ಕ್ರಮವನ್ನು ಈ ದೇಶಕ್ಕೆ ಬಂದು ನೆಲೆಸಿರುವ ಅನ್ಯರ ಮೇಲೆ ಹೇರಲು ಹೋಗುವುದಿಲ್ಲ. ಆದರೆ, ಅವರಿಂದ ನಮ್ಮ ಶೈಲಿಯು ಅನುಕರಣೆಗೊಳ್ಳಲೆಂದು ಆಶಿಸುತ್ತೇವೆ.

- ನಾವು (ಅಮೆರಿಕದ ಪ್ರಜೆಗಳು) ಕಪ್ಪಿರಬಹುದು, ಬಿಳಿಯಿರಬಹುದು ಅಥವಾ ಕಂದು ಬಣ್ಣದವರಾಗಿರಬಹುದು. ಆದರೆ, ನಮ್ಮೆಲ್ಲರಲ್ಲೂ ಹರಿಯುತ್ತಿರುವುದು ಒಂದೇ ರಕ್ತ. ಅದು ದೇಶಭಕ್ತಿಯ ರಕ್ತ.

- ನೀವು (ಪ್ರಜೆಗಳು) ನಿಮ್ಮ ಮುಕ್ತ ಮನಸ್ಸಿನವರಾಗಿದ್ದಲ್ಲಿ ಪೂರ್ವಾಗ್ರಹ ಪೀಡನೆಗೆ ಎಂದಿಗೂ ಅವಕಾಶವಿರದು.

- ಈ ಜಗತ್ತಿನ ಭೂಪಟದಿಂದ ಇಸ್ಲಾಮಿಕ್ ಉಗ್ರರನ್ನು ಅಳಿಸಿಹಾಕೋಣ.

- ಉಗ್ರದ ದಮನದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ.

- ಬರೀ ಮಾತುಗಳಲ್ಲೇ ಮನೆ ಕಟ್ಟುವ, ಅಂಗೈಯ್ಯಲ್ಲೇ ಅರಮನೆ ತೋರುವ ರಾಜಕಾರಣಿಗಳು ನಮಗೆ ಬೇಡ.

- ನುಡಿಯುವಂತೆ ನಡೆಯುವ ರಾಜಕಾರಣಿಗಳು ನಮ್ಮ ದೇಶಕ್ಕೆ ಬೇಕಾಗಿದ್ದಾರೆ.

- ಅಪರಾಧಗಳ ಮೂಲೋಚ್ಛಾಟನೆಗೆ ನನ್ನ ಸರ್ಕಾರ ಆದ್ಯತೆ ನೀಡಲಿದೆ.

- ನಾವೆಲ್ಲರೂ ಸೇರಿ ಈ ಅಮೆರಿಕವನ್ನು ಮತ್ತೊಮ್ಮೆ ಮಹಾನ್ ದೇಶವಾಗಿಸೋಣ.

English summary
US president became the 45th president of United States officially by taking the oath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X