ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ: ಪಾಕಿಸ್ತಾನಕ್ಕೆ ಟ್ರಂಪ್ ಭರವಸೆ

|
Google Oneindia Kannada News

Recommended Video

ಕಾಶ್ಮೀರ ವಿಚಾರದಲ್ಲಿ ಟ್ರಂಪ್ ಮಧ್ಯಸ್ತಿಕೆ | Donald Trump | Kashmir | India | Oneindia kannada

ದಾವೋಸ್, ಜನವರಿ 22: ಕಾಶ್ಮೀರ ವಿವಾದ ಬಗೆಹರಿಸಲು ತಾವು 'ಸಹಾಯ' ಮಾಡಲು ಸಿದ್ಧರಿರುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿದ್ದರೂ ಭಾರತ ಅದಕ್ಕ ನಿರಾಕರಿಸಿತ್ತು. ಫೆಬ್ರವರಿಯಲ್ಲಿ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದು, ಅದಕ್ಕೆ ಕೆಲವು ವಾರಗಳ ಮುನ್ನವೇ ಕಾಶ್ಮೀರ ವಿಚಾರದ ಕುರಿತು ಪಾಕಿಸ್ತಾನದೊಂದಿಗೆ ಮತ್ತೆ ಪ್ರಸ್ತಾಪಿಸಿದ್ದಾರೆ.

ಸ್ವಿಟ್ಜರ್ಲ್ಯಾಂಡ್‌ನಲ್ಲಿ ಯಡಿಯೂರಪ್ಪ-ಟ್ರಂಪ್ ಮುಖಾಮುಖಿ!ಸ್ವಿಟ್ಜರ್ಲ್ಯಾಂಡ್‌ನಲ್ಲಿ ಯಡಿಯೂರಪ್ಪ-ಟ್ರಂಪ್ ಮುಖಾಮುಖಿ!

ಭಾರತವು ಗಡಿ ಭಾಗದಲ್ಲಿ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಪಾಕಿಸ್ತಾನ, ಅದನ್ನು ಬಗೆಹರಿಸಲು ಅಮೆರಿಕ ಸಹಾಯ ಮಾಡಬೇಕೆಂದು ಕೋರುವುದರ ಜತೆಗೆ ತನ್ನ ಕಂಪೆನಿಗಳನ್ನು ಆರ್ಥಿಕ ಕಾರ್ಯಪಡೆಯ ಪಟ್ಟಿಯಿಂದ ಹೊರಗಿಡುವ ಕುರಿತು ಪ್ರಸ್ತಾಪಿಸಿದೆ.

ಕಾಶ್ಮೀರ ಸ್ಥಿತಿ ಗಮನಿಸುತ್ತಿದ್ದೇವೆ

ಕಾಶ್ಮೀರ ಸ್ಥಿತಿ ಗಮನಿಸುತ್ತಿದ್ದೇವೆ

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಒಕ್ಕೂಟದ ಶೃಂಗಸಭೆ ವೇಳೆ ಮಂಗಳವಾರ ಡೊನಾಲ್ಡ್ ಟ್ರಂಪ್ ಮತ್ತು ಇಮ್ರಾನ್ ಖಾನ್ ಮಾತುಕತೆ ನಡೆಸಿದರು. 'ನಾವು ಕಾಶ್ಮೀರ ವಿಚಾರದ ಕುರಿತು ಮತ್ತು ಪಾಕಿಸ್ತಾನ ಹಾಗೂ ಭಾರತದ ಸಂಬಂಧದ ನಡುವೆ ಏನಾಗುತ್ತಿದೆ ಎಂಬುದರ ಕುರಿತು ಚರ್ಚಿಸುತ್ತಿದ್ದೇವೆ. ನಮ್ಮಿಂದ ಸಹಾಯ ಮಾಡಬಹುದಾದರೆ ನಾವು ಖಂಡಿತಾ ಮಾಡುತ್ತೇವೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಅದನ್ನು ತುಂಬಾ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದೇವೆ' ಎಂದು ಮಾತುಕತೆಗೂ ಮುನ್ನ ಟ್ರಂಪ್ ಹೇಳಿದರು.

ಅಮೆರಿಕ ಸಹಾಯ ಮಾಡಲಿದೆ

ಅಮೆರಿಕ ಸಹಾಯ ಮಾಡಲಿದೆ

'ಅಫ್ಘಾನಿಸ್ತಾನದಂತಹ ಅನೇಕ ವಿಚಾರಗಳ ಬಗ್ಗೆ ನಾವು ಮಾತನಾಡಲು ಬಯಸಿದ್ದೇವೆ. ಅದೃಷ್ಟವಶಾತ್ ಇದೇ ವೇಳೆ ನಾವು ಕೂಡ ಅದೇ ಸ್ಥಾನದಲ್ಲಿದ್ದೇವೆ. ಭಾರತ ಸಹ, ಏಕೆಂದರೆ ಇದು ದೊಡ್ಡ ವಿಷಯ. ಅಮೆರಿಕವು ಈ ವಿವಾದ ಪರಿಹರಿಸುವಲ್ಲಿ ತನ್ನ ಪಾತ್ರ ವಹಿಸಲಿದೆ ಎಂದು ನಾವು ಯಾವಾಗಲೂ ಭರವಸೆ ಹೊಂದಿರುತ್ತೇವೆ. ಏಕೆಂದರೆ ಬೇರೆ ಯಾವ ದೇಶವೂ ಹೀಗೆ ಪಾತ್ರ ವಹಿಸಲು ಸಾಧ್ಯವಿಲ್ಲ' ಎಂದು ಇಮ್ರಾನ್ ಖಾನ್ ಹೇಳಿದರು.

ಭಾರತ-ಚೀನಾ ಗಡಿ ವಿಚಾರದಲ್ಲಿ ಮೋದಿಗೆ ಕೋಪ ತರಿಸಿದ್ದ ಟ್ರಂಪ್ಭಾರತ-ಚೀನಾ ಗಡಿ ವಿಚಾರದಲ್ಲಿ ಮೋದಿಗೆ ಕೋಪ ತರಿಸಿದ್ದ ಟ್ರಂಪ್

ಪಾಕಿಸ್ತಾನಕ್ಕೆ ಭೇಟಿ ಇಲ್ಲ

ಪಾಕಿಸ್ತಾನಕ್ಕೆ ಭೇಟಿ ಇಲ್ಲ

ಭಾರತಕ್ಕೆ ಬರುವಾಗ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೀರಾ ಎಂಬ ಪ್ರಶ್ನೆಗೆ ಟ್ರಂಪ್, 'ನಾವು ಈಗಾಗಲೇ ಭೇಟಿ ನೀಡುತ್ತಿದ್ದೇವೆ. ಹೀಗಾಗಿ ಅಲ್ಲಿಗೆ ಹೋಗಲೇಬೇಕಾಗಿಲ್ಲ. ಆದರೆ ಎರಡೂ ದೇಶಗಳಿಗೆ ಸಂಬಂಧ ವೃದ್ಧಿಸಿಕೊಳ್ಳುವಲ್ಲಿ ಶುಭ ಹಾರೈಸುತ್ತೇನೆ. ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ' ಎಂದರು.

ಟ್ರಂಪ್ ತಲೆಗೆ 21 ಕೋಟಿ ರೂ ಬಹುಮಾನ

ಟ್ರಂಪ್ ತಲೆಗೆ 21 ಕೋಟಿ ರೂ ಬಹುಮಾನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಮಾಡಿದವರಿಗೆ 3 ದಶಲಕ್ಷ ಡಾಲರ್ (31 ಕೋಟಿ ರೂ) ಬಹುಮಾನ ನೀಡುವುದಾಗಿ ಇರಾನ್‌ನ ಸಂಸದರೊಬ್ಬರು ಘೋಷಿಸಿದ್ದಾರೆ. ತನ್ನ ಸೇನಾಧಿಕಾರಿ ಖಾಸಿಂ ಸೋಲೆಮನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದೆ. ಅದಕ್ಕೆ ಪೂರಕವಾಗಿ ಇರಾಕ್‌ನಲ್ಲಿನ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಈಗ ಸೋಲೆಮನಿ ಅವರದೇ ಪಟ್ಟಣದವರಾದ ಸಂಸದ ಅಹ್ಮದ್ ಹಮ್ಜೆ ಟ್ರಂಪ್ ತಲೆಗೆ ಬಹುಮಾನ ಘೋಷಿಸಿದ್ದಾರೆ.

English summary
US President Donald Trump repeated his offer to help on Kashmir issue with India and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X