ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿಚಾರದಲ್ಲಿ WHO ವಿರುದ್ಧ ತಿರುಗಿಬಿದ್ದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 8: ಜಗತ್ತಿನಾದ್ಯಂತ ಕಾಡುತ್ತಿರುವ ಕೊರೊನಾ ವೈರಸ್‌ ವಿರುದ್ಧ ಬಹುತೇಕ ಎಲ್ಲ ದೇಶಗಳು ಹೋರಾಡುತ್ತಿದೆ. ಚೀನಾದಲ್ಲಿ ಸೃಷ್ಠಿಯಾದ ಈ ವೈರಸ್‌ ಅಮೆರಿಕದಲ್ಲಿ ಹೆಮ್ಮರವಾಗಿ ಬೆಳೆದಿದೆ. ಹೀಗಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಕೈ ಮೀರಿ ಪ್ರಯತ್ನ ಮಾಡ್ತಿದ್ದಾರೆ.

ಭಾರತದ ಬಳಿ ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧ) ಔಷಧಕ್ಕಾಗಿ ಬೇಡಿಕೆಯಿಟ್ಟಿದ್ದ ಟ್ರಂಪ್, ಮನವಿ ತಿರಸ್ಕರಿಸಿದರೆ ಪ್ರತೀಕಾರ ಎಂದು ಎಚ್ಚರಿಕೆ ನೀಡಿದ್ದಾರೆ. ಅದಕ್ಕೂ ಮುಂಚೆ ವೈರಸ್‌ ಹರಡಿಸಿದ ಕಾರಣಕ್ಕಾ ಚೀನಾ ವಿರುದ್ಧ ಮುಗಿಬಿದ್ದಿದ್ದರು.

ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'

ಇದೀಗ, ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚೀನಾ ವಿಚಾರದಲ್ಲಿ ಡಬ್ಲ್ಯೂಎಚ್‌ಒ ಸಂಸ್ಥೆ ಪಕ್ಷಪಾತ ಮಾಡುತ್ತಿದೆ, ಕೊರೊನಾ ವೈರಸ್‌ ಜಗತ್ತಿಗೆ ಹರಡಿಸಿರುವ ಚೀನಾದ ಬೆನ್ನಿಗೆ ನಿಂತಿದೆ ಎಂದು ಆರೋಪಿಸಿರುವ ಟ್ರಂಪ್, 'ಅಮೆರಿಕದಿಂದ WHOಗೆ ನೀಡಲಾಗುತ್ತಿರುವ ದೇಣಿಗೆಯನ್ನು ರದ್ದು ಮಾಡುತ್ತೇನೆ' ಎಂದು ವಾರ್ನಿಂಗ್ ಮಾಡಿದ್ದಾರೆ.

Donald Trump Decided To Cut Funds To WHO

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್ ''ವಿಶ್ವಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳಿಗೆ ಅತಿ ಹೆಚ್ಚು ದೇಣಿಗೆ ನೀಡುತ್ತಿರುವ ರಾಷ್ಟ್ರ ನಮ್ಮದು. ಡಬ್ಲ್ಯೂಎಚ್‌ಒ ಚೀನಾದ ಕೇಂದ್ರಿತ ಸಂಸ್ಥೆ ಎಂಬ ಕಾಣುತ್ತಿದೆ. ಮುಂದಿನ ದಿನದಲ್ಲಿ ನಮ್ಮಿಂದ WHOಗೆ ನೀಡಲಾಗುತ್ತಿರುವ ಹಣ ಕಡಿತಗೊಳಿಸುತ್ತೇವೆ'' ಎಂದು ಎಚ್ಚರಿಕೆ ನೀಡಿದ್ದಾರೆ.

ಡಬ್ಲ್ಯೂಎಚ್‌ಒ ಎಷ್ಟು ಹಣ ನೀಡಲಾಗುತ್ತಿದೆ ಮತ್ತು ಎಷ್ಟು ಹಣವನ್ನು ತಡೆಹಿಡಿಯಲಾಗುತ್ತೆ ಎಂಬುದರ ಬಗ್ಗೆ ಮಾಹಿತಿ ಹೇಳದ ಟ್ರಂಪ್ ''ನಾನು ಹೇಳಲ್ಲ, ಮಾಡಿ ತೋರಿಸುತ್ತೇನೆ'' ಎಂದು ಕಿಡಿಕಾರಿದ್ದಾರೆ.

ಅಮೆರಿಕದ ಪ್ರಮುಖ ನಗರದಲ್ಲಿ ಒಂದೇ ದಿನ 800+ ಕೊರೊನಾ ಸಾವುಅಮೆರಿಕದ ಪ್ರಮುಖ ನಗರದಲ್ಲಿ ಒಂದೇ ದಿನ 800+ ಕೊರೊನಾ ಸಾವು

ಈ ಹಿಂದೆ ಟ್ವಿಟ್ಟರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದ್ದ ಡೊನಾಲ್ಡ್ ಟ್ರಂಪ್ ''ಡಬ್ಲ್ಯೂಎಚ್‌ಒ ಚೀನಾ ಕೇಂದ್ರಿತ'' ಎಂದು ಟೀಕಿಸಿದ್ದರು. ಚೀನಾ ದೇಶವೇ ಉದ್ದೇಶ ಪೂರ್ವಕವಾಗಿ ವೈರಸ್‌ ಹರಡಿಸಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

English summary
WHO seemed to be very China-centric. We're going to put a hold on money spent to WHO: US President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X