ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 16ರಂದು ಬಹುನಿರೀಕ್ಷಿತ ಪುಟಿನ್-ಟ್ರಂಪ್ ಭೇಟಿ

By Sachhidananda Acharya
|
Google Oneindia Kannada News

ವಾಷಿಂಗ್ಟನ್, ಜೂನ್ 28: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಭೇಟಿಗೆ ದಿನ ನಿಗದಿಯಾಗಿದೆ. ಫಿನ್ಲೆಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಜುಲೈ 16ರಂದು ರಷ್ಯಾ-ಅಮೆರಿಕಾ ಶೃಂಗಸಭೆ ನಡೆಯಲಿದೆ.

"ಎರಡೂ ದೇಶದ ನಾಯಕರು ಅಮೆರಿಕಾ ಮತ್ತು ರಷ್ಯಾ ನಡುವಿನ ಸಂಬಂಧದ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ," ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಟ್ರಂಪ್ ಮುಂದೆ ಬಿಕ್ಕುತ್ತಿರುವ ಪುಟ್ಟ ಕಂದನ ನೋಡಿ ತೇವವಾದ ಕಣ್ಣಾಲಿ!ಟ್ರಂಪ್ ಮುಂದೆ ಬಿಕ್ಕುತ್ತಿರುವ ಪುಟ್ಟ ಕಂದನ ನೋಡಿ ತೇವವಾದ ಕಣ್ಣಾಲಿ!

ಈ ಹಿಂದೆ ಬುಧವಾರ ಹೇಳಿಕೆ ನೀಡಿದ್ದ ಟ್ರಂಪ್ ಜುಲೈ 11-12ರ ಬಳಿಕ ನ್ಯಾಟೋ ನಾಯಕರ ಶೃಂಗಸಭೆ ನಡೆಯಲಿದೆ. ಫಿನ್ಲೆಂಡ್ ರಾಜಧಾನಿ ಇದಕ್ಕೆ ಸಂಭಾವ್ಯ ಸ್ಥಳ ಎಂದಿದ್ದರು. ಇದೀಗ ಏಕಕಾಲಕ್ಕೆ ಮಾಸ್ಕೊ ಮತ್ತು ವಾಷಿಂಗ್ಟನ್ ಶೃಂಗ ಸಭೆ ನಿಗದಿಯಾಗಿರುವ ಬಗ್ಗೆ ಪ್ರಕಟಣೆ ಹೊರಡಿಸಿವೆ.

Donald Trump and Vladimir Putin to meet on July 16 in Helsinki

ಈ ಹಿಂದೆಯೇ ಎರಡೂ ದೇಶಗಳ ನಡುವೆ ಶೃಂಗಸಭೆ ನಡೆಸುವುದೆಂದು ನಿರ್ಧಾರವಾಗಿತ್ತು. ಆದರೆ ಇದಕ್ಕೆ ಸಮಯ ನಿಗದಿಯಾಗಿರಲಿಲ್ಲ.

English summary
United Status President Donald Trump and Russian President Vladimir Putin will hold a summit on July 16 in Helsinki, the capital of Finland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X