ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಹೆಸರಿನಲ್ಲಿ ಮೋಸ, ಯಾಮಾರಬೇಡಿ!

|
Google Oneindia Kannada News

ಯುನೈಟೆಡ್ ಕಿಂಗ್ಡಮ್, ಮಾರ್ಚ್ 4: ಕೊರೊನಾ ವೈರಸ್ ಎಲ್ಲರಿಗೂ ಭಯ ಹುಟ್ಟಿಸಿದೆ. ಈ ಭಯವನ್ನೆ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತಿದ್ದಾರೆ. ಅದರಲ್ಲಿಯೂ ಆನ್‌ಲೈನ್ ನಲ್ಲಿ ಕೊರೊನಾ ವೈರಸ್ ಹೆಸರಿನಲ್ಲಿ ಯಾಮಾರಿಸುವವರು ಹೆಚ್ಚಾಗಿದ್ದಾರೆ.

ಕೊರೊನಾ ವೈರಸ್ ಆನ್ ಲೈನ್ ಸರ್ಚ್ ಜಾಸ್ತಿಯಾಗಿದೆ. ಕೊರೊನಾ ವೈರಸ್ ನ್ಯೂಸ್, ಕೊರೊನಾ ವೈರಸ್ ಬೆಂಗಳೂರು, ಕೊರೊನಾ ವೈರಸ್ ಮಾಸ್ಕ್, ಕೊರೊನಾ ವೈರಸ್ ಮೆಡಿಸಿನ್ ಎನ್ನುವ ಹುಡುಕಾಟಗಳು ಅಂತರ್ಜಾಲದಲ್ಲಿ ಜಾಸ್ತಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ ಕೊರೊನಾ ವೈರಸ್ ಬಗ್ಗೆ ಇರುವ ಆತಂಕ, ಕುತೂಹಲ, ಪ್ರಶ್ನೆಗಳನ್ನು ಕೆಲವು ಕಂಪನಿಗಳು ಹಣ ಮಾಡಲು ಬಳಸಿಕೊಳ್ಳಲಾಗುತ್ತಿದೆ.

ಕೊರೊನಾ ಮಾಸ್ಕ್ ಮೋಸ

ಕೊರೊನಾ ಮಾಸ್ಕ್ ಮೋಸ

ಕೊರೊನಾ ವೈರಸ್ ನಿಂದ ದೂರ ಇರಲು ಅನೇಕರು ಮಾಸ್ಕ್ ಮೊರೆ ಹೋಗುತ್ತಿದ್ದಾರೆ. ಮಾಸ್ಕ್ ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಆನ್ ಲೈನ್ ನಲ್ಲಿಯೂ ಮಾಸ್ಕ್ ಮಾರಾಟ ಜೋರಾಗಿ ನಡೆಯುತ್ತಿದೆ. ಆದರೆ, ವಾಸ್ತವವಾಗಿ ಕೊರೊನಾ ವೈರಸ್ ತಡೆಯುವ ಮಾಸ್ಕ್ ಆನ್ ಲೈನ್ ನಲ್ಲಿ ಲಭ್ಯವಿಲ್ಲ. ಹೀಗಾಗಿ, ವೈದ್ಯರ ಸಂಪರ್ಕ ಮಾಡಿ, ನೇರವಾಗಿ ಖರೀದಿ ಮಾಡುವುದೇ ಒಳ್ಳೆಯದು.

ಕೊರೊನಾಕ್ಕೆ 'Arsenic Alb 30 P' ಮಾತ್ರೆಗಳು ಮದ್ದಂತೆ!ಕೊರೊನಾಕ್ಕೆ 'Arsenic Alb 30 P' ಮಾತ್ರೆಗಳು ಮದ್ದಂತೆ!

ಮಾಕ್ಸ್ ಜಾಹಿರಾತು ಬ್ಯಾನ್

ಮಾಕ್ಸ್ ಜಾಹಿರಾತು ಬ್ಯಾನ್

ಮಾಕ್ಸ್ ಗೆ ಬಂದ ಬೇಡಿಕೆ ಗಮನಿಸಿದ ಕೆಲವು ಕಂಪನಿಗಳು ತಮ್ಮ ಮಾಸ್ಕ್ ಧರಿಸಿದರೆ, ಕೊರೊನಾ ವೈರಸ್ ಬರುವುದಿಲ್ಲ ಎಂದು ಸುಳ್ಳು ಜಾಹಿರಾತು ನೀಡುತ್ತಿದೆ. ಈ ಜಾಹಿರಾತುಗಳನ್ನು ಅಡ್ವರ್ಟೈಸಿಂಗ್ ಸ್ಟಾಂಡರ್ಸ್ ಅಥಾರಿಟಿ ಬ್ಯಾನ್ ಮಾಡಿದೆ. ಈಜಿ ಶಾಪಿಂಗ್ ಫಾರ್ ಹೋಮ್ ಲಿಮಿಟೆಡ್ ಹಾಗೂ ನೋವಾಡ್ಸ್ ಕಂಪನಿಗಳ ಜಾಹಿರಾತುಗಳು ಬ್ಯಾನ್ ಆಗಿವೆ.

ಔಷದಿ ಹೆಸರಿನಲ್ಲಿ ಟೋಪಿ

ಔಷದಿ ಹೆಸರಿನಲ್ಲಿ ಟೋಪಿ

ಕೊರೊನಾದಿಂದ ಭಯಪಟ್ಟಿರುವ ಜನರು, ಆನ್ ಲೈನ್ ಔಷದಿ ಹುಡುಕುತ್ತಿದ್ದಾರೆ. 'ಕೊರೊನಾ ವೈರಸ್ ಮೆಡಿಸಿನ್' ಎಂಬ ಸರ್ಚ್ ಗೂಗಲ್ ನಲ್ಲಿ ಹೆಚ್ಚಿದೆ. ಕೆಲವು ವೆಬ್ ಸೈಟ್ ನಲ್ಲಿ ಔಷದಿ ಹೆಸರಿನಲ್ಲಿ ಟೋಪಿ ಹಾಕಲಾಗುತ್ತಿದೆ. ಆದರೆ, ಕೊರೊನಾ ವೈರಸ್ ಗೆ ಯಾವುದೇ ಔಷದಿ ಇನ್ನು ಬಹಿರಂಗವಾಗಿ ತಿಳಿದಿಲ್ಲ. ಹೀಗಾಗಿ ಆನ್ ಲೈನ್ ನಲ್ಲಿ ಅದು ಸಿಗಲು ಸಾಧ್ಯವೇ ಇಲ್ಲ.

Infographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿInfographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿ

ತಪ್ಪು ಮಾಹಿತಿಗಳು ಹೆಚ್ಚು

ತಪ್ಪು ಮಾಹಿತಿಗಳು ಹೆಚ್ಚು

ಕೊರೊನಾ ವೈರಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ. ರೋಗದ ಬಗ್ಗೆ ತಪ್ಪು ಮಾಹಿತಿ ನೀಡುವ ವಿಡಿಯೋಗಳು, ಲೇಖನಗಳು ಪ್ರಕಟ ಆಗುತ್ತಿವೆ. ಜನರಲ್ಲಿ ಭಯ ಹುಟ್ಟಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಹೀಗಾಗಿ, ಅದನೆಲ್ಲ ನಂಬಬೇಡಿ, ಎಚ್ಚರಿಕೆಯಿಂದ ಇರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಕೊರೊನಾ ವೈರಸ್ ಆತಂಕ!9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಕೊರೊನಾ ವೈರಸ್ ಆತಂಕ!

English summary
Don't believe in false online advertisement about coronavirus medicine and mask says World Health Organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X