ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ ; ಭೂಮಿಗೆ ಬಂದ ಗಗನ ಯಾತ್ರಿಗೆ ಎಂಥ ಸ್ವಾಗತ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 14 : ಗಗನಯಾತ್ರಿ ಮನೆಗೆ ಬರುತ್ತಿದ್ದಂತೆ ಶ್ವಾನ ಅಪ್ಪಿ ಮುದ್ದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಗನಯಾತ್ರಿ ಕ್ಟಿಸ್ಟನ್ ಕೋಚ್ 328 ದಿನಗಳ ಬಳಿಕ ಭೂಮಿಗೆ ವಾಪಸ್ ಆಗಿದ್ದಾರೆ.

ಕ್ಟಿಸ್ಟನ್ ಕೋಚ್ ಮನೆಗೆ ಆಗಮಿಸಿದಾಗ ಶ್ವಾನ ಬಾಗಿಲಲ್ಲಿಯೇ ಅಪ್ಪಿ ಮುದ್ದಾಡಿದೆ. 'ಅವಳು ನನ್ನನ್ನು ನೆನಪಿಕೊಟ್ಟುಕೊಂಡಿದ್ದಾಳೆ" ಎಂದು ಕ್ರಿಸ್ಟನ್ ಸಂತೋಷದಿಂದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನೂರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಬಾಹ್ಯಾಕಾಶ ನಡಿಗೆ: ನಾಸಾದ ಮಹಿಳಾ ಗಗನಯಾನಿಗಳಿಂದ ಇತಿಹಾಸ ಸೃಷ್ಟಿಬಾಹ್ಯಾಕಾಶ ನಡಿಗೆ: ನಾಸಾದ ಮಹಿಳಾ ಗಗನಯಾನಿಗಳಿಂದ ಇತಿಹಾಸ ಸೃಷ್ಟಿ

ನಾಸಾದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕ್ರಿಸ್ಟನ್ ಕೋಚ್ 2019ರ ಮಾರ್ಚ್ 14ರಂದು ಬಾಹ್ಯಾಕಾಶಕ್ಕೆ ಹೋಗಿದ್ದರು. 328 ದಿನಗಳ ಬಳಿಕ ಅವರು ಫೆಬ್ರವರಿ 6ರಂದು ಭೂಮಿಗೆ ವಾಪಸ್ ಆಗಿದ್ದರು. ಫೆಬ್ರವರಿ 15ರಂದು ಅವರು ಮನೆಗೆ ವಾಪಸ್ ಹೋಗಿದ್ದಾರೆ.

ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ ಹಿಡಿದ ನಾಸಾವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ ಹಿಡಿದ ನಾಸಾ

328 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಕ್ರಿಸ್ಟನ್ ಕೋಚ್ ಐತಿಹಾಸಿಕ ದಾಖಲೆಯನ್ನು ಮಾಡಿದ್ದಾರೆ. 289 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಮಹಿಳೆ ಎಂದು ದಾಖಲೆ ಬರೆದಿದ್ದ ಪೆಗ್ಗಿ ವಿಟ್ಸನ್ ದಾಖಲೆಯನ್ನು ಕ್ರಿಸ್ಟನ್ ಕೋಚ್ ಮುರಿಸಿದ್ದಾರೆ.

NASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರNASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರ

30 ಸೆಕೆಂಡ್ ವಿಡಿಯೋ

30 ಸೆಕೆಂಡ್ ವಿಡಿಯೋ

ಕ್ರಿಸ್ಟನ್ ಕೋಚ್ ಮನೆಯೊಳಗೆ ಕಾಲಿಡುವ ಮುನ್ನವೇ ಮುದ್ದಿನ ನಾಯಿ ಬಾಗಿಲಲ್ಲಿ ಕಾದು ನಿಂತಿತ್ತು. ಮನೆಗೆ ಬಂದೊಡನೆ ಖುಷಿಯಿಂದ ಕುಣಿದಾಡಿದೆ. ಮನೆಯೊಡತಿ ಆಗಮಿಸಿದ್ದನ್ನು ಕಂಡು ಅಪ್ಪಿಕೊಂಡು ಮುದ್ದಾಡಿದೆ. ಈ ವಿಡಿಯೋ 30 ಸೆಕೆಂಡ್ ಇದೆ.

2013ರಿಂದ ನಾಸಾದಲ್ಲಿ ಕೆಲಸ

2013ರಿಂದ ನಾಸಾದಲ್ಲಿ ಕೆಲಸ

ಅಮೆರಿಕ ಮೂಲದ ಕ್ರಿಸ್ಟನ್ ಕೋಚ್ 2013ರಿಂದ ನಾಸಾದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 2019ರ ಮಾರ್ಚ್ 14ರಂದು ಅವರು ಬಾಹ್ಯಾಕಾಶಕ್ಕೆ ಹೋಗಿದ್ದರು. 2020ರ ಫೆಬ್ರವರಿ 6ರಂದು ಭೂಮಿಗೆ ವಾಪಸ್ ಆಗಿದ್ದಾರೆ. ಈ ಮೂಲಕ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ದಿನ ಇದ್ದ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.

ಕ್ರಿಸ್ಟನ್ ಕೋಚ್ ಟ್ವೀಟ್

ಯಾರು ಹೆಚ್ಚು ಉತ್ಸುಕರಾಗಿದ್ದಾರೋ ತಿಳಿಯದು. ಒಂದು ವರ್ಷದ ನಂತರ ಅವಳು ನನ್ನನ್ನು ನೆನಪಿಕೊಟ್ಟುಕೊಂಡಿದ್ದಾಳೆ ಎಂದು ಕ್ರಿಸ್ಟನ್ ಕೋಚ್ ಟ್ವೀಟ್ ಮಾಡಿದ್ದಾರೆ.

ಸ್ಪೇಸ್ ವಾಕ್ ಮಾಡಿದ್ದಾರೆ

ಸ್ಪೇಸ್ ವಾಕ್ ಮಾಡಿದ್ದಾರೆ

ಕ್ರಿಸ್ಟನ್ ಕೋಚ್ ಅತಿ ಹೆಚ್ಚು ದಿನ ಬಾಹ್ಯಾಕಾಶದಲ್ಲಿದ್ದ ದಾಖಲೆ ಮಾತ್ರವಲ್ಲ. ಸ್ಪೇಸ್ ವಾಕ್ ಮಾಡಿದ ಕೀರ್ತಿಯನ್ನು ಪಡೆದಿದ್ದಾರೆ. ಕ್ರಿಸ್ಟನ್ ಮತ್ತು ಇತರ ಇಬ್ಬರು ಫೆಬ್ರವರಿ 6ರಂದು ಭೂಮಿಗೆ ವಾಪಸ್ ಆಗಿದ್ದಾರೆ.

English summary
Christina Koch welcomed by dog at her house now video viral on social media. Christina H.Koch NASA astronaut returned to earth on February 6 after 328 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X