ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭಯದಿಂದ ಕುಟುಂಬದಿಂದ ದೂರವಾದ ನಾಯಿ ಸಾವು

|
Google Oneindia Kannada News

ಹಾಂಗ್ ಕಾಂಗ್, ಮಾರ್ಚ್ 18: ಕೊರೊನಾ ವೈರಸ್ ಹರಡುವ ಭಯದಿಂದ ನಾಯಿಯೊಂದು ಮೃತಪಟ್ಟಿದೆ. ಹಾಂಗ್ ಕಾಂಗ್ ನಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.

ಫೆಬ್ರವರಿ ತಿಂಗಳಿನಲ್ಲಿ 17 ವರ್ಷದ ಹಾಂಗ್ ಕಾಂಗ್ ನಾಯಿಗೆ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಕೊರೊನಾ 'ಲೋ ಪಾಸಿಟಿವ್' ಎಂದು ವರದಿ ಬಂದಿತ್ತು. ಕೊರೊನಾ ವರದಿ ಬಂದ ನಂತರ ನಾಯಿ ಮಾಲೀಕರು ನಾಯಿಯನ್ನು ಪ್ರತ್ಯೇಕವಾಗಿ ಇಟ್ಟಿದ್ದರು.

ಕೊರೊನಾ ಪತ್ತೆಯಾದರೂ, ಸಮುದ್ರದಲ್ಲಿ ಬ್ರಿಟಿಷ್ ಮಹಿಳೆ ಮೋಜುಕೊರೊನಾ ಪತ್ತೆಯಾದರೂ, ಸಮುದ್ರದಲ್ಲಿ ಬ್ರಿಟಿಷ್ ಮಹಿಳೆ ಮೋಜು

ಕೆಲವು ದಿನಗಳ ನಂತರ ನಾಯಿ ಮತ್ತೆ ಮಾಲೀಕರ ಮನೆಗೆ ಮರಳಿತು. ಶನಿವಾರ ಬಂದ ನಾಯಿ ಎರಡು ದಿನಗಳ ನಂತರ ಸಾವನಪ್ಪಿದೆ. ಭಯ ಹಾಗೂ ಒತ್ತಡದಿಂದ ನಾಯಿ ಮೃತಪಟ್ಟಿದೆ ಎಂದು ಪಶು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

Coronavirus A 17 Year Old Dog In Hong Kong Dies

ಈ ಹಿಂದೆಯೇ ನಾಯಿಯ ಮಾಲೀಕರಿಗು ಕೊರೊನಾ ಪರೀಕ್ಷೆ ಆಗಿದ್ದು, ನೆಗೆಟಿವ್ ಎಂದು ವರದಿ ಬಂದಿತ್ತು. ನಾಯಿಗೆ ' ಲೋ ಪಾಸಿಟಿವ್' ಎಂದು ವರದಿ ಬಂದ ಕಾರಣ ಕೆಲವು ದಿನಗಳು ಅದನ್ನು ಪ್ರತ್ಯೇಕವಾಗಿ ಇಟ್ಟಿದ್ದರು.

ಸಾಮಾನ್ಯವಾಗಿ ಕೆಲವು ಶ್ವಾನಗಳು ತಮ್ಮ ಮಾಲೀಕರಿಂದ ದೂರವಾಗಿ, ಒಬ್ಬಂಟಿಯಾಗಿ ಇದ್ದಾಗ ಅದರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬದಿಂದ ಒಂಟಿಯಾದ ನಾಯಿಗಳು ಭಯಗೊಳ್ಳುತ್ತದೆ. ಅದೇ ರೀತಿ ಹಾಂಗ್ ಕಾಂಗ್ ಶ್ವಾನ ಕೂಡ ಮಾಲೀಕರಿಂದ ದೂರವಾಗಿ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ಅದೇ ಪರಿಸ್ಥಿತಿಯಲ್ಲಿ ನಾಯಿ ಮೃತಪಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಮನುಷ್ಯನಿಂದ ಪ್ರಾಣಿಗಳಿಗೆ ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ ತಿಳಿಸಿದೆ.

English summary
Coronavirus A 17 year old dog in Hong Kong dies two days after it was released from quarantin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X