ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ನ ದೀರ್ಘಕಾಲೀನ ಪರಿಣಾಮಗಳೇನು?

|
Google Oneindia Kannada News

ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ. ಈ ವೈರಸ್‌ನಿಂದ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇದರಿಂದ ಚೇತರಿಸಿಕೊಂಡು ಮನೆಗೆ ಮರಳುತ್ತಿರುವವರು ಸಹ ಅನೇಕರಿದ್ದಾರೆ. ವೈರಸ್‌ನಿಂದ ಬಳಲುತ್ತಿರುವ ಜನರು ಹಾಗೂ ದೀರ್ಘಕಾಲೀನ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಇದರ ಫಲಿತಾಂಶಗಳು ಆಶ್ಚರ್ಯಕರವಾಗಿವೆ.

ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅಥವಾ ಚೇತರಿಸಿಕೊಂಡ ನಂತರವೂ ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಮಾನಸಿಕ ಕಾಯಿಲೆಗಳಾದ ಒತ್ತಡ, ನಿದ್ರಾಹೀನತೆ, ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ, ವಾಸನೆ ಗ್ರಹಿಕೆ, ರುಚಿಯನ್ನು ಕಳೆದುಕೊಳ್ಳುವುದು, ತಲೆನೋವು, ಶೀತ, ಕಫ, ಮೈಕೈ ನೋವು ಮನಃಸ್ಥಿತಿ ಬದಲಾವಣೆ ಸೇರಿದಂತೆ ಆಘಾತಕಾರಿ ಒತ್ತಡದ ಕಾಯಿಲೆ (PTSD) ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಸಂಶೋಧನೆ ಹೇಳಿದೆ.

ಯುಕೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ನಡೆಸುತ್ತಿರುವ ಪ್ರಯೋಗವೇನು?ಯುಕೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ನಡೆಸುತ್ತಿರುವ ಪ್ರಯೋಗವೇನು?

ಕೋವಿಡ್ -19 ತೀವ್ರ ಉಸಿರಾಟದ ರೋಗ ಮತ್ತು ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (MERS) ಕಾರಣದಿಂದಾಗಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳ ಮೇಲೆ ನಡೆಸಿದ ಅಧ್ಯಯನದ ಫಲಿತಾಂಶಗಳನ್ನು ಬಹಿರಂಗಪಡಿಸಿದೆ.

SARS ಮತ್ತು MERS ಕಾರಣದಿಂದಾಗಿ ಸುಮಾರು 28 ಪ್ರತಿಶತದಷ್ಟು ರೋಗಿಗಳು ಗೊಂದಲವನ್ನು ಅನುಭವಿಸಿದ್ದಾರೆ. COVID-19 ರೋಗಿಗಳಲ್ಲಿ ಸನ್ನಿವೇಶವು ಸಾಮಾನ್ಯ ಸಮಸ್ಯೆಯಾಗಿರಬಹುದು ಎಂದು ಆರಂಭಿಕ ಫಲಿತಾಂಶಗಳು ಸೂಚಿಸುತ್ತವೆ. ಹೀಗಾಗಿ ಆದಷ್ಟು ಕೊರೊನಾ ಸೋಂಕು ತಗುಲದಂತೆ ನೋಡಿಕೊಳ್ಳಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಪದೇ ಪದೇ ಕೈತೊಳೆದುಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.

ದೀರ್ಘಕಾಲೀನ ಅಪಾಯಗಳು

ದೀರ್ಘಕಾಲೀನ ಅಪಾಯಗಳು

COVID-19 ನಿಂದ ಚೇತರಿಸಿಕೊಂಡ ಬಳಿಕ ಹಲವು ಪರಿಣಾಮವನ್ನು ಎದುರಿಸಬೇಕಾಗುತ್ತದೆ. ತಲೆನೋವು, ಮಾನಸಿಕ ಒತ್ತಡ, ಉಸಿರಾಟದ ತೊಂದರೆ, ಮೈಕೈನೋವು ಇನ್ನಿತರೆ ತೊಂದರೆಗಳು ಕಾಣಿಸಿಕೊಳ್ಳಬಹುದು.

ಕೋವಿಡ್ -19 ಹೊಂದಿರುವ ಹೆಚ್ಚಿನ ಜನರು ಯಾವುದೇ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದಿಲ್ಲ. ಅವರ ಸ್ಥಿತಿ ಗಂಭೀರವಾಗಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದರೂ ಸಹ ಅವರಿಗೆ ಯಾವುದೇ ರೀತಿಯ ಮಾನಸಿಕ ಆರೋಗ್ಯದಂತಹ ಸಮಸ್ಯೆಗಳು ಇರುವುದಿಲ್ಲ. ಆದರೆ ಇಷ್ಟು ದೊಡ್ಡ ಸಂಖ್ಯೆಯ ಜನರು ಅನಾರೋಗ್ಯಕ್ಕೆ ಒಳಗಾಗುವುದರಿಂದ ಮಾನಸಿಕ ಆರೋಗ್ಯದ ಮೇಲೆ ಜಾಗತಿಕ ಪರಿಣಾಮವು ಸ್ವಾಭಾವಿಕವಾಗಿ ಸಂಭವಿಸಬಹುದು ಎಂದು ಅದು ಹೇಳಿದೆ.

ದೈಹಿಕ ಆರೋಗ್ಯ ಸಮಸ್ಯೆ

ದೈಹಿಕ ಆರೋಗ್ಯ ಸಮಸ್ಯೆ

ಸರಾಸರಿ SARS ಅಥವಾ MERS ಹೊಂದಿರುವ ಮೂವರು ರೋಗಿಗಳಲ್ಲಿ ಒಬ್ಬರು ಮೂರು ವರ್ಷಗಳಲ್ಲಿ PTSD ಹೊಂದಿದ್ದರು ವಿಶೇಷವಾಗಿ ಅವರು ಹೆಚ್ಚು ದೈಹಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎನ್ನಲಾಗಿದೆ.

ಖಿನ್ನತೆ ಪ್ರಮಾಣ ಹೆಚ್ಚು

ಖಿನ್ನತೆ ಪ್ರಮಾಣ ಹೆಚ್ಚು

ಖಿನ್ನತೆ ಮತ್ತು ಆತಂಕದ ಪ್ರಮಾಣವೂ ಹೆಚ್ಚಿತ್ತು. ಸುಮಾರು 15 ಪ್ರತಿಶತ ಜನರಲ್ಲಿ ಖಿನ್ನತೆಯ ಲಕ್ಷಣಗಳು ಕಂಡುಬಂದಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಸೋಂಕಿತ ಜನರಲ್ಲಿ ಶೇಕಡಾ 15ಕ್ಕಿಂತ ಹೆಚ್ಚು ಜನರು ದೀರ್ಘಕಾಲದ ಆಯಾಸ, ಮನಸ್ಥಿತಿ ಬದಲಾವಣೆಗಳು, ನಿದ್ರಾಹೀನತೆ ಅಥವಾ ವಿಷಯಗಳನ್ನು ಕೇಂದ್ರೀಕರಿಸಲು ಮತ್ತು ಯಾವುದೇ ವಿಷಯವನ್ನಾದರೂ ಮರೆಯುವ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರಜ್ಞೆ ಕಳೆದುಕೊಳ್ಳುವುದು

ಪ್ರಜ್ಞೆ ಕಳೆದುಕೊಳ್ಳುವುದು

ಆಸ್ಪತ್ರೆಯಲ್ಲಿ, ಕೊರೊನಾ ಸೋಂಕಿನಿಂದ ಬಳಲುತ್ತಿರುವ ಕೆಲವರು ಗೊಂದಲ, ಹೆದರಿಕೆ ಮತ್ತು ಪ್ರಜ್ಞೆ ಕಳೆದುಕೊಳ್ಳುವಂತಹ ಲಕ್ಷಣಗಳನ್ನು ಅನುಭವಿಸಿರುವ ಬಗ್ಗೆ ಸಂಶೋಧನೆ ಉಲ್ಲೇಖಿಸಿದೆ.

Recommended Video

Modi ಭಾಷಣ ಹೇಗಿತ್ತು ಗೊತ್ತಾ?? | Oneindia Kannada

English summary
The acute or short-term symptoms of COVID-19, the disease caused by the new coronavirus, are a persistent cough, a fever or an acute or sudden loss in your sense of smell or taste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X