ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಲೋಕದ ಅಚ್ಚರಿ: ಈಕೆ ಬೆವೆತರೆ ನೀರಿನಂತೆ ರಕ್ತ ಸುರಿಯುತ್ತದೆ!

|
Google Oneindia Kannada News

ಆಕೆಗೆ ಇಪ್ಪತ್ತೊಂದು ವರ್ಷ. ಇಟಲಿಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಆಕೆಯ ಅನಾರೋಗ್ಯ ಸಮಸ್ಯೆಯೇ ಬಹಳ ವಿಚಿತ್ರವಾಗಿಯೂ ವೈದ್ಯಕೀಯ ಲೋಕಕ್ಕೆ ಸವಾಲಾಗಿಯೂ ಇದೆ. ಏನು ಆಕೆಯ ಸಮಸ್ಯೆ ಅಂತೀರಾ? ಬೆವರಿದರೆ ಹಣೆ, ಕೈ- ಕಾಲುಗಳ ಮೇಲೆ ನೀರಾಗಿ ಹರಿಯುವುದನ್ನು ನೋಡಿರ್ತೀರಿ. ಆದರೆ ಈಕೆ ಬೆವರಿದರೆ ಮುಖ, ಕೈಗಳ ಮೇಲೆ ರಕ್ತ ಹರಿಯುತ್ತದೆ.

ವೈದ್ಯಲೋಕದ ಅದ್ಭುತ; ಯುವತಿಗೆ ಹುಡುಗನ ಕೈಗಳ ಕಸಿವೈದ್ಯಲೋಕದ ಅದ್ಭುತ; ಯುವತಿಗೆ ಹುಡುಗನ ಕೈಗಳ ಕಸಿ

ಫ್ಲೋರೆನ್ಸ್ ವಿಶ್ವವಿದ್ಯಾಲಯದ ವೈದ್ಯರು ನೀಡಿದ ಮಾಹಿತಿ ಪ್ರಕಾರ ಹೇಳುವುದಾದರೆ, ಕಳೆದ ಮೂರು ವರ್ಷದಿಂದ ಆಕೆ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ವೈದ್ಯರಂತೂ ರಕ್ತ ಎಲ್ಲಾದರೂ ಬೆವರಿನ ರೀತಿ ಬರುವುದಕ್ಕೆ ಸಾಧ್ಯವಾ ಎಂದು ಅಚ್ಚರಿ ಪಟ್ಟಿದ್ದಾರೆ. ಇನ್ನೂ ಕೆಲವರು ಬೇರೇನೋ ಕಾಯಿಲೆ ಈಕೆಗಿದೆ. ಅದನ್ನು ಮುಚ್ಚಿಟ್ಟುಕೊಂಡು ಸುಳ್ಳು ಹೇಳುತ್ತಿದ್ದಾಳೆ ಅಂತ ಕೂಡ ಅಭಿಪ್ರಾಯ ಪಟ್ಟಿದ್ದಾರೆ.

Doctors Stunned By Rare Case Of Italian Woman Who Sweats Blood

ಆ ಮಹಿಳೆ ಮಲಗಿರುವ ವೇಳೆ, ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವೇಳೆ ಹೀಗೆ ಯಾವಾಗಲಾದರೂ ರಕ್ತ ಬೆವರಿನಂತೆ ಸುರಿಯುತ್ತದೆ. ಈ ಬಗ್ಗೆ ಕೆನಡಾ ಮೆಡಿಕಲ್ ಅಸೋಸಿಯೇಷನ್ ನ ನಿಯತಕಾಲಿಕೆಯಲ್ಲಿ ಈಚೆಗೆ ಲೇಖನ ಕೂಡ ಪ್ರಕಟವಾಗಿದೆ. ಈ ರೀತಿ ರಕ್ತ ಹರಿಯುವುದು ತೀರಾ ಹೆಚ್ಚಾಗಿ ಕೂಡ ಆಗುತ್ತದೆ ಎಂದು ಆಕೆ ಹೇಳಿದ್ದಾರೆ.

ಒತ್ತಡ ಹೆಚ್ಚಾಗಿ ಕಂಡುಬಂದಾಗ ಈ ರೀತಿ ರಕ್ತ ಬೆವರು ಹರಿಯುವುದು ಒಂದರಿಂದ ಐದು ನಿಮಿಷದವರೆಗೆ ಇರುತ್ತದೆ. ಈ ರೀತಿ ಆಗಿ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಆ ಮಹಿಳೆ ಒಂಟಿಯಾಗಿಯೇ ಹೆಚ್ಚು ಸಮಯ ಕಳೆಯುತ್ತಾರೆ. ತೀವ್ರ ಖಿನ್ನತೆ ಹಾಗೂ ಭಯದ ಸಮಸ್ಯೆಯಿಂದ ಹೀಗೆ ಆಗುತ್ತಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ವಿಶ್ವದ ಭಾರೀ ಗಾತ್ರದ ಮನುಷ್ಯನಿಗೆ ಯಶಸ್ವಿ ಶಸ್ತ್ರಚಿಕಿತ್ಸೆವಿಶ್ವದ ಭಾರೀ ಗಾತ್ರದ ಮನುಷ್ಯನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಇನ್ನು ಈ ರೀತಿ ಸಮಸ್ಯೆಯಿರುವವರು ಇಡೀ ಜಗತ್ತಿಗೆ ಎರಡು ಡಜನ್ ನಷ್ಟು ಜನ ಸಿಗಬಹುದು. ಅದು ಕಳೆದ ಹದಿನೇಳು ವರ್ಷಗಳಿಂದ ಈಚೆಗಷ್ಟೇ ಕಂಡುಬಂದಿದೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ. ಇದೇ ವೇಳೆ, ಇಂಥ ಸಮಸ್ಯೆ ಹಲವು ಮಂದಿಗೆ ಇರಬಹುದು. ಒಂದೋ ಅಂಥವರು ಗಂಭೀರವಾಗಿ ಪರಿಗಣಿಸಿ, ವೈದ್ಯರನ್ನು ಭೇಟಿ ಮಾಡಿರುವುದಿಲ್ಲ ಅಂತಲೂ ಹೇಳಿದ್ದಾರೆ.

ಮತ್ತೂ ಕೆಲವರು ಈ ಸಮಸ್ಯೆಯನ್ನು ಧರ್ಮದೊಂದಿಗೆ ತಳಕು ಹಾಕಿ ಮಾತನಾಡಿದ್ದಾರೆ. ಆದರೆ ಇದನ್ನು ವೈದ್ಯರು ತಳ್ಳಿಹಾಕಿದ್ದಾರೆ. ಈ ವರೆಗೆ ಇಟಲಿಯ ಈ ಮಹಿಳೆಗೆ ನೀಡುತ್ತಿರುವ ಹೃದಯ ಹಾಗೂ ರಕ್ತದೊತ್ತಡ ಸಮಸ್ಯೆಗೆ. ಇದರಿಂದ ರಕ್ತ ಬೆವರು ಹರಿಯುವುದು ಕಡಿಮೆಯಾಗಿದೆ ವಿನಾ ಪೂರ್ತಿ ನಿಂತಿಲ್ಲ.

English summary
Doctors were baffled when a 21-year-old woman was admitted into an Italian hospital for "sweating blood" from her face and her hands, a condition she's had for three years, according to two physicians from the University of Florence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X