ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳನ್ನು ಉಳಿಸಿ ಬಂದ ವೈದ್ಯನಿಗೆ ಸಿಕ್ಕಿದ್ದು ಆಘಾತಕಾರಿ ಸುದ್ದಿ

|
Google Oneindia Kannada News

ಮಾಯ್ ಸಾಯ್, ಜುಲೈ 11: 'ಹ್ಯಾರಿ'- ಈ ಹೆಸರು ಈಗ ಜಗತ್ತಿನ ಮೂಲೆ ಮೂಲೆಯಲ್ಲಿಯೂ ಸುದ್ದಿಯಾಗುತ್ತಿದೆ.

ಈ ಹೆಸರು ಇದಕ್ಕೂ ಮೊದಲು ಅಪರಿಚಿತವೇನಲ್ಲ. ಜಗತ್ತಿನ ಅತ್ಯಂತ ಖ್ಯಾತನಾಮ ವೈದ್ಯರ ಪೈಕಿ 'ಹ್ಯಾರಿ'ಯೂ ಒಬ್ಬರು. ಅವರ ಪೂರ್ಣ ಹೆಸರು ರಿಚರ್ಡ್ ಹ್ಯಾರಿಸ್. ಅವರ ಊರು ಆಸ್ಟ್ರೇಲಿಯಾದ ಅಡಿಲೇಡ್.

ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಬಾಲಕರು ಸೇರಿದಂತೆ ಹದಿಮೂರು ಮಂದಿ ಸಿಕ್ಕಿಕೊಂಡಿದ್ದಾರೆ. ಅವರ ರಕ್ಷಣೆಗೆ ಹೋಗಿ ಎಂದು ಆಸ್ಟ್ರೇಲಿಯಾದ ಸರ್ಕಾರ ಸೂಚಿಸಿದಾಗ, 20 ಜನ ಪರಿಣತರ ಜತೆ ಹುಮ್ಮಸ್ಸಿನಿಂದ ಹೊರಟವರು ಹ್ಯಾರಿ.

ಥಾಯ್ಲೆಂಡ್ ಗುಹೆ ಸಾಹಸ: ಕೊಂಚ ತಡವಾಗಿದ್ದರೂ ಎದುರಾಗುತ್ತಿತ್ತು ಅಪಾಯಥಾಯ್ಲೆಂಡ್ ಗುಹೆ ಸಾಹಸ: ಕೊಂಚ ತಡವಾಗಿದ್ದರೂ ಎದುರಾಗುತ್ತಿತ್ತು ಅಪಾಯ

ಚಿಕಿತ್ಸೆ ನೀಡುವುದರಲ್ಲಿ ಮಾತ್ರವಲ್ಲ, ನೀರಿನಾಳದಲ್ಲಿ ಮುಳುಗೇಳುವ ಸಾಹಸದಲ್ಲಿಯೂ ಹ್ಯಾರಿ ಸಿದ್ಧಹಸ್ತರು. ಅದಕ್ಕೆಂದೇ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು.

ತಮಗೆ ವಹಿಸಿದ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿಭಾಯಿಸಿದರು. ಎಲ್ಲವೂ ಮುಗಿಯಿತಲ್ಲ ಎಂದು ಹ್ಯಾರಿ ನಿಟ್ಟುಸಿರು ಬಿಡುವ ವೇಳೆಗೆ ಅವರಿಗೆ ಆಘಾತಕಾರಿ ಸುದ್ದಿಯೂ ಎದುರಾಯಿತು. ಏನದು ಸುದ್ದಿ? ಮುಂದೆ ಓದಿ...

Array

ಗುಹೆಯೊಳಗೆ ಸಾಹಸ

ನೀರಿನಲ್ಲಿ ಮುಳುಗಿ, ಅಲ್ಲಿನ ಬಂಡೆಗಲ್ಲನ್ನು ಹತ್ತಿ, ಕೆಸರಿನ ನಡುವೆ ಸಾಗಿ ಆ ಕಾರ್ಗತ್ತಲ ಗುಹೆಯೊಳಗೆ ಔಷಧ ಉಪಕರಣಗಳನ್ನು ಹೊತ್ತೊಯ್ದ ಹ್ಯಾರಿ, ಗುಹೆಯೊಳಗೇ ಎಲ್ಲ 12 ಮಕ್ಕಳು ಮತ್ತು ಕೋಚ್‌ಗೆ ಆರೋಗ್ಯ ಪರೀಕ್ಷೆ ಮಾಡಿದರು.

ಸೋಂಕು ನಿವಾರಕ ಔಷಧಗಳನ್ನು ನೀಡಿದರು. ಜತೆಗೆ ತಮ್ಮ ಜತೆ ಬಂದವರ ಆರೋಗ್ಯದ ಕಾಳಜಿಯನ್ನೂ ಮಾಡಿದರು. ಐದಾರು ದಿನ ಆ ಗುಹೆಯೊಳಗೇ ಕಳೆದರು.

ಅತ್ಯಂತ ಅಪಾಯಕಾರಿಯಾಗಿದ್ದ ಕಾರ್ಯಾಚರಣೆಯಲ್ಲಿ ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಹೊರಕ್ಕೆ ಸಾಗಿಸಿದ ಬಳಿಕ ಗುಹೆಯಿಂದ ಕೊನೆಯವರಾಗಿ ಹೊರಬಂದವರು ಈ ಮಹಾನುಭಾವ.

ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?

ತಂದೆಯ ಸಾವಿನ ಸುದ್ದಿ

ಹ್ಯಾರಿ ಅವರ ಸಾಹಸ, ಕರ್ತವ್ಯಬದ್ಧತೆಯನ್ನು ಇಡೀ ಜಗತ್ತು ಕೊಂಡಾಡುತ್ತಿದೆ. ಆದರೆ, ಮಕ್ಕಳನ್ನು ಹೊರಗೆ ಸುರಕ್ಷಿತವಾಗಿ ಕರೆದುತಂದ ಗೆಲುವಿನ ಸಂಭ್ರಮ ಹ್ಯಾರಿ ಅವರಲ್ಲಿ ಹೆಚ್ಚು ಕಾಲ ಉಳಿದುಕೊಳ್ಳಲಿಲ್ಲ.

ಸಂತಸದಲ್ಲಿದ್ದ ಹ್ಯಾರಿ ಮುಖದಲ್ಲಿ ಕೆಲವೇ ಗಂಟೆಗಳಲ್ಲಿಯೇ ದುಃಖದ ಛಾಯೆ ಆವರಿಸಿತ್ತು. ಅದಕ್ಕೆ ಕಾರಣವಾಗಿದ್ದು ಅವರ ತಂದೆಯ ಸಾವಿನ ಸುದ್ದಿ.

Array

ಹ್ಯಾರಿ ಖುಷಿ ಮರೆಸಿದ ದುಃಖ

ಥಾಯ್ಲೆಂಡ್‌ನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದ ಕೆಲವೇ ಗಂಟೆಗಳಲ್ಲಿ ಕಳೆದ ರಾತ್ರಿ ಹ್ಯಾರಿ ಅವರ ತಂದೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಹ್ಯಾರಿಸ್ ಅವರು ಕೆಲಸ ಮಾಡುವ ಸಾಸ್ ಮೆಡ್‌ಸ್ಟಾರ್ ಆರೋಗ್ಯ ಸೇವೆಯ ಮುಖ್ಯಸ್ಥ ಆಂಡ್ರೂ ಪಿಯರ್ಸ್ ಹೇಳಿದ್ದಾರೆ.

ನಾನು ಹ್ಯಾರಿ ಅವರೊಂದಿಗೆ ಮಾತನಾಡಿದ್ದೇನೆ. ಇದು ಅವರ ಕುಟುಂಬಕ್ಕೆ ದುಃಖದ ಸಮಯ. ಅತ್ಯಧಿಕ ದೈಹಿಕ ಹಾಗೂ ಭಾವನಾತ್ಮಕ ಸಾಮರ್ಥ್ಯ ಬೇಕಾಗಿದ್ದ ಒಂದು ವಾರದ ಅತ್ಯಂತ ಸಂಕೀರ್ಣ ಮತ್ತು ಅಂತಿಮವಾಗಿ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಹ್ಯಾರಿ ಅವರ ನೋವಿನೊಂದಿಗೆ ನಾವೂ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಹ್ಯಾರಿ ಅವರಿಗೆ ಆಸ್ಟ್ರೇಲಿಯಾ ಸರ್ಕಾರ ಅತ್ಯುನ್ನತ ಗೌರವ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇನ್ನು ಕೆಲವರು ನೋಟುಗಳಲ್ಲಿ ಅವರ ಚಿತ್ರವನ್ನು ಮುದ್ರಿಸಬೇಕು ಎಂದೂ ಆಗ್ರಹಿಸಿದ್ದಾರೆ.

ರಜೆ ತ್ಯಾಗ ಮಾಡಿದ್ದರು

ಮಕ್ಕಳ ರಕ್ಷಣೆಗಾಗಿ ರಿಷರ್ಡ್ ಹ್ಯಾರಿಸ್ ತಮ್ಮ ರಜೆಯನ್ನೂ ಹಿಂದಕ್ಕೆ ಪಡೆದುಕೊಂಡಿದ್ದರು. ಇವರು ಆಸ್ಟ್ರೇಲಿಯಾ ವರ್ಷದ ವ್ಯಕ್ತಿಗೆ ಅರ್ಹ. ದೇಶದ ನಿಜವಾದ ಸ್ಫೂರ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ಮೆಚ್ಚಿಕೊಳ್ಳಲಾಗಿದೆ.

ಅದ್ಭುತ ತಂಡ

12 ಮಕ್ಕಳು ಮತ್ತು ಅವರ ಕೋಚ್‌ಅನ್ನು ರಕ್ಷಿಸಿದ ಅದ್ಭುತ ತಂಡ ಇದು ಎಂದು ಮಾರ್ಕ್ ಮೂನಿ ಎಂಬುವವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡದ ಚಿತ್ರವನ್ನು ಹಂಚಿಕೊಂಡಿದ್ದಾರೆ.

Array

ಆಸ್ಟ್ರೇಲಿಯಾದ ಹೀರೊ

ರಿಚರ್ಡ್ ಹ್ಯಾರಿಸ್ ಒಬ್ಬ ಅದ್ಭುತ ವ್ಯಕ್ತಿ. ಆಸ್ಟ್ರೇಲಿಯಾದ ನಿಜವಾದ ಹೀರೊ ಮತ್ತು ಲೆಜೆಂಡ್. ತಂದೆಯನ್ನು ಕಳೆದುಕೊಂಡ ಈ ನೋವಿನ ಕ್ಷಣದಲ್ಲಿ ಅವರಿಗಾಗಿ ನಾವು ಪ್ರಾರ್ಥಿಸುತ್ತೇವೆ. ಆದರೆ, ಇದೇ ಸಮಯಕ್ಕೆ ಅವರು ಅನೇಕ ಜನರನ್ನು ಉಳಿಸಲು ನೆರವು ನೀಡಿದ್ದಾರೆ. ಅವರ ತಂದೆ ಅವರ ಬಗ್ಗೆ ತುಂಬಾ ಹೆಮ್ಮೆ ಪಟ್ಟುಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಲಾಗಿದೆ.

English summary
Australian doctor Richard Harris who a part of Thai Cave rescue operation lost his father a few hours after the operation was over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X