• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊವಿಡ್ 19 ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಲು ಕಾರಣವೇನು?

|
Google Oneindia Kannada News

ಚೀನಾದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿ 9 ತಿಂಗಳು ಕಳೆದಿದೆ. ಸೋಂಕು ಎಷ್ಟು ಮಾರಕವಾದದ್ದು ಎಂಬುದರ ಕುರಿತು ಆಲೋಚನೆ ನಡೆದಿಎ, ತಕ್ಕ ಮಟ್ಟಿಗೆ ಫಲಿತಾಂಶವೂ ದೊರೆತಿದೆ.

ಮೊದಲು ಜ್ವರ, ಕಫದ ರೀತಿಯಲ್ಲಿ ಆರಂಭವಾಗುವ ಸೋಂಕು ಬಳಿಕ ನಿಮ್ಮ ಬೇರೆ ಬೇರೆ ಅಂಗಗಳಿಗೂ ತೊಂದರೆಯನ್ನುಂಟುಮಾಡುತ್ತದೆ. ಕೊವಿಡ್ 19 ರೋಗದಿಂದ ಗುಣಮುಖರಾಗಿರುವವರನ್ನು ಗಮನಿಸಿದರೆ ನಾವು ಅಂದುಕೊಂಡದ್ದಕ್ಕಿಂತ ಈ ಸೋಂಕು ಹೆಚ್ಚು ಅಪಾಯಕಾರಿಯಾಗಿದೆ ಎಂಬುದು ಅರಿವಾಗುತ್ತದೆ.

ಕೊರೊನಾ ಸೋಂಕು ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮವನ್ನು ಬೀರುತ್ತದೆ. ಶ್ವಾಸಕೋಶದಲ್ಲಿ ಒತ್ತಡ ಉಂಟಾದಾಗ ವೈರಸ್ ಹೃದಯಕ್ಕೆ ತಿರುಗುತ್ತದೆ.

ಕೋವ್ಯಾಕ್ಸಿನ್ ಕೊವಿಡ್ ಲಸಿಕೆ ಪ್ರಾಣಿಗಳಿಗೆ ಹೆಚ್ಚು ಪರಿಣಾಮಕಾರಿ ಕೋವ್ಯಾಕ್ಸಿನ್ ಕೊವಿಡ್ ಲಸಿಕೆ ಪ್ರಾಣಿಗಳಿಗೆ ಹೆಚ್ಚು ಪರಿಣಾಮಕಾರಿ

ಒಂದೊಮ್ಮೆ ಉಸಿರಾಟದ ತೊಂದರೆ, ಎದೆನೋವು, ಮುಖ ನೀಲಿಗಟ್ಟಿದರೆ, ಆಮ್ಲಜನಕದ ಕೊರತೆ ಕಾಣಿಸಿಕೊಂಡರೆ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ನಿಮ್ಮ ಲೈಫ್‌ಸ್ಟೈಲ್ ಹಾಗೂ ಏಕಾಏಕಿ ಆಹಾರ ಪದ್ಧತಿ ಬಲಾಯಿಸುವುದು ಕೂಡ ನಿಮ್ಮ ಹೃದಯದ ಮೇಲೆ ಪರಿಣಾಮವನ್ನು ಬೀರಬಲ್ಲದು.

ಹೃದಯದ ಮೇಲೆ ಹೆಚ್ಚು ಪರಿಣಾಮ

ಹೃದಯದ ಮೇಲೆ ಹೆಚ್ಚು ಪರಿಣಾಮ

ಜಾಮಾ ಕಾರ್ಡಿಯಾಲಜಿ ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಚೇತರಿಸಿಕೊಂಡ ಸುಮಾರು ಶೇ.78 ರಷ್ಟು ರೋಗಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿರುವ ಕುರಿತು ಆಸ್ಪತ್ರೆಗೆ ಮಾಹಿತಿ ಬಂದಿದೆ. ಆದರೆ ಈಗ ಬಂದ ಮಾಹಿತಿ ಪ್ರಕಾರ ಸೋಂಕು ಆರಂಭವಾದ ದಿನಗಳಲ್ಲಿ ಅಥವಾ ಯಾವು ಸೋಂಕಿನ ಲಕ್ಷಣಗಳು ಇಲ್ಲದಿರುವವರಲ್ಲೂ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಹೃದಯ ಸಮಸ್ಯೆ ಇರುವವರಿಗೆ ಮರಣದ ಅಪಾಯ

ಹೃದಯ ಸಮಸ್ಯೆ ಇರುವವರಿಗೆ ಮರಣದ ಅಪಾಯ

ರಕ್ತನಾಳದ ತೊಂದರೆ, ಸ್ನಾಯುಗಳ ಸೆಳೆತ, ಉರಿಯೂತವಾಗುತ್ತದೆ. ಹೃದಯ ಸಮಸ್ಯೆಗಳಿರುವವರಿಗೆ ಮರಣದ ಅಪಾಯ ಹೆಚ್ಚಿದೆ. ಚೀನಾ ಸಿಡಿಸಿ ವೀಕ್ಲಿ ನಡೆಸಿದ ಅಧ್ಯಯನವು ಕೊವಿಡ್ 19ನಿಂದ ಮೃತಪಟ್ಟವರಲ್ಲಿ ಶೇ.22ರಷ್ಟು ಮಂದಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿದ್ದರು ಎಂಬುದು ಸಾಬೀತಾಗಿದೆ.

ಮೊದಲೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಅಥವಾ ಯಾವುದೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂಥವರು ನಿತ್ಯವೂ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು.

ವಯಸ್ಸು ಮತ್ತು ಆರೋಗ್ಯ ಮುಖ್ಯವಾಗಿರುತ್ತದೆ

ವಯಸ್ಸು ಮತ್ತು ಆರೋಗ್ಯ ಮುಖ್ಯವಾಗಿರುತ್ತದೆ

ಕೊವಿಡ್ ರೋಗವು ನಿಮ್ಮ ವಯಸ್ಸು ಮತ್ತು ಆರೋಗ್ಯವನ್ನು ಆಧರಿಸಿ ಪರಿಣಾಮವನ್ನು ಬೀರುತ್ತದೆ. ಆದರೆ ಮೊದಲೇ ಕಾಯಿಲೆ ಇರುವವರಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ. ಕೊರೊನಾದ ಅಲ್ಪಕಾಲ ಮತ್ತು ದೀರ್ಘಕಾಲದ ಪರಿಣಾಮದ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ವೈರಸ್ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವುದು ಸಾಬೀತಾಗಿದೆ ಅದರಲ್ಲಿ ಹೃದಯವೂ ಕೂಡ ಒಂದು.

  Drugs ವಿಚಾರದಲ್ಲಿ Zameer Ahmed ಬೆಂಬಲಕ್ಕೆ ನಿಂತ Siddaramaiah | Oneindia Kannada
  ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಹುಷಾರ್

  ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಹುಷಾರ್

  ಹೃದಯ ಸಂಬಂಧಿ ಕಾಯಿಲೆಗಳಿರುವವರು ಕೊವಿಡ್ 19ನಿಂದ ತೀವ್ರ ತರವಾದ ಅಪಾಯವನ್ನು ಎದುರಿಸುತ್ತಾರೆ. ಪ್ರಾಥಮಿಕ ಹಂತದಲ್ಲಿ ಇದು ಹೃದಯದ ಕಾರ್ಯದಲ್ಲಿ ಇಳಿಕೆ ಮಾಡುತ್ತದೆ. ಉರಿಯೂತ ಆರಂಭವಾಗಿ ನೇರವಾಗಿ ಹೃದಯಕ್ಕೆ ಸೋಂಕು ಆವರಿಸಿಕೊಳ್ಳಬಹುದು . ಶ್ವಾಸಕೋಶದಲ್ಲಿನ ಅತಿಯಾದ ಒತ್ತಡದಿಂದ ಹೃದಯ ಸಂಬಂಧಿ ಕಾಯಿಲೆ ಉಂಟಾಗಬಹುದು. ವಯಸ್ಸಾದ ರೋಗಿಗಳಲ್ಲಿ ಮತ್ತಷ್ಟ ಕಾಯಿಲೆಯನ್ನು ಹೆಚ್ಚು ಮಾಡುತ್ತದೆ.

  English summary
  Nearly nine months after the first COVID-19 case was detected in China, the world is only coming to terms with how deadly SARS-COV-2 virus could be. What was first dismissed as a flu-like infection could carry repercussions for your vital organs as well.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X