ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದೀಪಾವಳಿಯ ಮೊದಲ ಪಟಾಕಿ ಸಿಡಿಯುವುದು ನಯಾಗರ ಜಲಪಾತದಲ್ಲಿ!

|
Google Oneindia Kannada News

Recommended Video

ನಯಾಗರ ಜಲಪಾತದಲ್ಲಿ ಒಡಮೂಡಲಿದೆ ದೀಪಾವಳಿಯ ಸಂಭ್ರಮ

ಒಟ್ಟಾವ (ಕೆನಡಾ), ಅಕ್ಟೋಬರ್ 6: ಜಗತ್ತಿನ ಮನಮೋಹಕ ಜಲಪಾತಗಳಲ್ಲಿ ಒಂದಾದ ನಯಾಗರ ಯಾರನ್ನು ಸೆಳೆದಿಲ್ಲ? ಕೆನಡಾ ಮತ್ತು ಅಮೆರಿಕ ಎರಡರ ನಡುವೆ ಇರುವ ಈ ಆಕರ್ಷಣೀಯ ಜಲಧಾರೆಗೆ ಮನಸೋಲದವರಿಲ್ಲ. ಅಷ್ಟು ದೂರ ಪ್ರಯಾಣಿಸಲು ಸಾಧ್ಯವಾಗದವರು ಫೋಟೊಗಳಲ್ಲಿಯೇ ಮನತಣಿಸಿಕೊಂಡಿದ್ದಾರೆ. ಅಂತಹ ಸುಂದರ ಕಲಾಕೃತಿಯಂತಹ ಜಲಪಾತ ಮತ್ತಷ್ಟು ರಂಗುಪಡೆದುಕೊಳ್ಳಲಿದೆ.

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

ಭಾರತೀಯರ ಬೆಳಕಿನ ಹಬ್ಬವಾದ ದೀಪಾವಳಿಯ ಪ್ರಯುಕ್ತ ನಯಾಗರ ಬಣ್ಣದ ಚಿತ್ತಾರದಲ್ಲಿ ಮೀಯಲಿದೆ. ಇದೇ ಮೊದಲ ಬಾರಿಗೆ ದೀಪಾವಳಿಯ ಬೆಳಕಿನ ಹಬ್ಬಕ್ಕೆ ನಯಾಗರ ಸಾಕ್ಷಿಯಾಗಲಿದೆ.

ದೀಪಾವಳಿಗೆ ಪಟಾಕಿ ಹೊಡೆಯಬೇಕಿಲ್ಲ, ಸಿಹಿ ಹಂಚಿದರೂ ಸಾಕು: ಸುಪ್ರೀಂಕೋರ್ಟ್ದೀಪಾವಳಿಗೆ ಪಟಾಕಿ ಹೊಡೆಯಬೇಕಿಲ್ಲ, ಸಿಹಿ ಹಂಚಿದರೂ ಸಾಕು: ಸುಪ್ರೀಂಕೋರ್ಟ್

ನಯಾಗರ ಪಾರ್ಕ್ಸ್ ಕಮಿಷನ್‌ನ ಸಹಕಾರದೊಂದಿಗೆ ಇಂಡೋ-ಕೆನಡಿಯನ್ ಕಲಾ ಸಮಿತಿ (ಐಸಿಎಸಿ) ಎಂಬ ಲಾಭರಹಿತ ಸಂಸ್ಥೆ ಜಾಗತಿಕ ಪ್ರವಾಸಿ ತಾಣವಾದ ನಯಾಗರದಲ್ಲಿ ದೀಪಾವಳಿ ಆಚರಿಸಲಿದೆ. ಅಂದು ನಯಾಗಾರದಲ್ಲಿ ದೀಪಾವಳಿಯ ಬೆಳಕು, ಪಟಾಕಿ ಉತ್ಸವಗಳು ನಡೆಯಲಿವೆ.

dewali deepavali celebration fireworks in canada niagara falls

ಕೆನಡಾದಲ್ಲಿ ದೀಪಾವಳಿ ಆಚರಿಸಲು ಪ್ರಮುಖ ತಾಣವನ್ನು ಬಯಸಿದ್ದೆವು. ಈ ಕನಸನ್ನು ನನಸು ಮಾಡಲು ಹಲವು ವರ್ಷಗಳಿಂದ ಸ್ಥಳೀಯ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದದ್ದಾಗಿ ಐಸಿಎಸಿಯ ಸಂಸ್ಥಾಪಕ ನಿರ್ದೇಶಕ ಅಜಯ್ ಮೋದಿ ತಿಳಿಸಿದ್ದಾರೆ.

ದೀಪಾವಳಿಯಂದು ಬೆಳಕಿನ ಸಾಲು ಎಳೆದಂತೆ ಕಂಡ ಭಾರತದೀಪಾವಳಿಯಂದು ಬೆಳಕಿನ ಸಾಲು ಎಳೆದಂತೆ ಕಂಡ ಭಾರತ

ಭಾರತದಲ್ಲಿ ದೀಪಾವಳಿ ನವೆಂಬರ್ 7ರಂದು ಇದ್ದರೂ, ಕೆನಡಾದಲ್ಲಿ ಅಕ್ಟೋಬರ್ 14ರಂದೇ ಆಚರಿಸಲಾಗುತ್ತಿದೆ. ನವೆಂಬರ್ ತಿಂಗಳಿನಲ್ಲಿ ಹೊರಾಂಗಣ ಕಾರ್ಯಕ್ರಮಕ್ಕೆ ಪೂರಕವಾದ ವಾತಾವರಣ ಇರುವುದಿಲ್ಲ. ವಿಪರೀತ ಚಳಿ ಇರುವುದರಿಂದ ಕಾರ್ಯಕ್ರಮ ಆಯೋಜನೆ ಕಷ್ಟವಾಗುತ್ತದೆ ಎಂದು ದೀಪಾವಳಿ ಆಚರಣೆಯನ್ನು ಬೇಗನೆ ಮಾಡುತ್ತಿರುವುದಕ್ಕೆ ಅವರು ಕಾರಣ ನೀಡಿದ್ದಾರೆ.

ನಯಾಗರದಲ್ಲಿ ಅ.14ರಂದು ಆಚರಿಸುತ್ತಿದ್ದರೆ, ಮಿಸ್ಸಿಸ್ಸೌಗಾದಲ್ಲಿ ಅ.12 ಮತ್ತು 13ರಂದು ದೀಪಾವಳಿ ರಾಜ್‌ಮತಾಜ್ ಕಾರ್ಯಕ್ರಮ ನಡೆಯಲಿದೆ. ಐದು ವರ್ಷದ ಹಿಂದೆ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಿದ್ದಾರೆ.

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ದಿನದಂದು ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬೆಳಕಿನ ಚಿತ್ತಾರ ಮೂಡಿಸುವಲ್ಲಿಯೂ ಅಜಯ್ ಮೋದಿ ಶ್ರಮಿಸಿದ್ದರು.

English summary
Indo Canadian Arts Council organised first ever Diwali celebration at Niagara in Canada side on October 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X